ಸಿರಿಗೆರೆಯ ಯಲ್ಲಿ ಎಸ್.ಎಸ್.ಕೇರ್ ಟ್ರಸ್ಟ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸಂಜೆವಾಣಿ ವಾರ್ತೆ
ದಾವಣಗೆರೆ. ಮಾ.೨೭: ಎಸ್.ಎಸ್. ಕೇರ್ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣೆಯನ್ನು ಜ.ಜ.ಮು ಹಾಗೂ ಎಸ್. ಎಸ್. ಐ.ಎಂ.ಎಸ್. ವೈದ್ಯಕೀಯ ಕಾಲೇಜು ದಾವಣಗೆರೆ ಇವರ ಸಹಯೋಗದೊಂದಿಗೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಸಿರಿಗೆರೆಯ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಡಿ 4 ದಿನಗಳ ಕಾಲ ನುರಿತ ತಜ್ಙ ವೈದ್ಯರುಗಳು ವಿವಿಧ ವಿಭಾಗಗಳಿಂದ ಸಮುದಾಯ, ಮಕ್ಕಳ ವಿಭಾಗ, ಸ್ತಿçÃರೋಗ ತಜ್ಞರು, ಚರ್ಮರೋಗದ ವಿಭಾಗ, ಹಾಗೂ ಕಣ್ಣಿನ ವಿಬಾಗದ ತಜ್ಞರುಗಳು ಸುಮಾರು 1828 ಶಾಲಾ ಮಕ್ಕಳ ಆರೋಗ್ಯವನ್ನು ತಪಾಸಣೆ ಮಾಡಲಾಯಿತು. ಅವಶ್ಯವಿರುವ ಮಕ್ಕಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ತಪಾಸಣೆಯ ಜನಸಂಖ್ಯೆಯ ಅಧ್ಯಯನದ ಪ್ರಕಾರ 959 (52.4%) ಗಂಡು ಹುಡುಗರು 869 ( 47.6%) ರಷ್ಟು ಹೆಣ್ಣು ಮಕ್ಕಳನ್ನು ತಪಾಸಣೆ ಮಾಡಲಾಯಿತು. ಎಲ್ಲಾ ಮಕ್ಕಳನ್ನು ಸಂಪೂರ್ಣವಾಗಿ, ಪೌಷ್ಟಿಕತೆ, ರಕ್ತಹೀನತೆ, ಹಾಗೂ ಎಲ್ಲಾ ಸಮಗ್ರ ರೀತಿಯಿಂದ ತಪಾಸಣೆಯನ್ನು ಮಾಡಲಾಯಿತು. ಅಲ್ಲಿಯೇ ಎಲ್ಲಾ ಮಕ್ಕಳ ರಕ್ತ ಪರೀಕ್ಷೆ (ರಕ್ತ ಹೀನತೆ ಕಂಡು ಹಿಡಿಯಲು) ಮಾಡಲಾಯಿತು.ಇಲ್ಲಿಯ ಮಕ್ಕಳ ಪೌಷ್ಟಿಕತೆಯ ಬಗ್ಗೆ ಮೌಲ್ಯಮಾಪನ ಮಾಡಿದಾಗ ಸುಮಾರು 446 ( 24.4%) ರಷ್ಟು ಮಕ್ಕಳು ಕಡಿಮೆ ತೂಕದವರಿದ್ದರೆ, 99 (ಶೇ 5%) ನಷ್ಟ ಮಕ್ಕಳ ಅತಿಯಾದ ತೂಕ ಅಥವಾ ಬೊಜ್ಜುತನ 1288 ಮಕ್ಕಳ ( 70.6%) ಮಕ್ಕಳಲ್ಲಿ ವಯಸ್ಸಿಗೆ ಸರಿಯಾದ ತೂಕವಿರುವುದು ಕಂಡುಬAದಿತು.ಎಸ್.ಎಸ್.ಕೇರ್ ಟ್ರಸ್ಟ್ 5ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಂ ಮತ್ತು ಡಾ. ಪ್ರಭಾ ಅವರ ಬಳಿ ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀಗಳು.ಶ್ರೀಗಳ ಕಳವಳ ಗಮನಿಸಿದ ಎಸ್ಸೆಸ್ಸೆಂ ಮತ್ತು ಡಾ. ಪ್ರಭಾ ತಕ್ಷಣ ಸ್ಪಂದಿಸಿ ಮಕ್ಕಳ ಆರೋಗ್ಯ ತಪಾಸಣೆರಕ್ತಹೀನತೆ ಪತ್ತೆ ಮಾಡಲು ಎಲ್ಲಾ ಮಕ್ಕಳಿಗೂ ರಕ್ತ ಪರೀಕ್ಷೆ ಮಾಡಿದಾಗ 360 ಮಕ್ಕಳಲ್ಲಿ ಶೇ (19.6% ರಷ್ಟು ಮಕ್ಕಳಲ್ಲಿ ರಕ್ತ ಹೀನತೆ ಇದ್ದಿದ್ದು (11ಗ್ರಾಂ.ಗಿAತ ) ಕಡಿಮೆ ಇರುವುದು ಕಂಡುಬAದಿತು. ಈ ಎಲ್ಲಾ ಮಕ್ಕಳಿಗೆ ವಿಟಮಿನ್ಸ್ ಮತ್ತು ರಕ್ತವೃದ್ದಿಗಾಗಿ ಕಬ್ಬಿಣಾಂಶದ ಮಾತ್ರೆಗಳನ್ನು ಮೂರು ತಿಂಗಳವರೆಗೆ ತೆಗೆದುಕೊಳ್ಳಲು ಸೂಚಿಸಿ ಉಚಿತವಾಗಿ ಔಷಧಿಗಳನ್ನು ಕೊಡಲಾಯಿತು.