ವಿಜಯಪುರದಲ್ಲಿ ಆರ್.ಟಿ.ಒ ಅಧಿಕಾರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
ವಿಜಯಪುರ,ಮಾ.27:ರಾಜ್ಯದ ಎಲ್ಲೆಡೆಯಂತೆ ವಿಜಯಪುರ ನಗರದಲ್ಲಿಯೂ ಆರ್.ಟಿ.ಒ ಅಧಿಕಾರಿ ಮನೆ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿಯ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ
ಷಣ್ಮುಖಪ್ಪ ತೀರ್ಥ ಅವರ ವಿಜಯಪುರ ನಗರದ ಚಾಲುಕ್ಯ ನಗರ ಬಡಾವಣೆಯಲ್ಲಿ ಇರುವ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಟಿ. ಮಲ್ಲೇಶ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಆರ್.ಟಿ.ಓ ಅಧಿಕಾರಿ ಷಣ್ಮುಖಪ್ಪ ನಿವಾಸ ಸೇರಿದಂತೆ ವಿಜಯಪುರ ನಗರದಲ್ಲಿರುವ ಅವರ ಸಂಬಂಧಿಕರ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ದಾರೆ.
ಲೋಕಾಯುಕ್ತ ಡಿಎಸ್ಪಿ ಸುರೇಶ ರೆಡ್ಡಿ, ಇನ್ಸಪೆಕ್ಟರ್ ಆನಂದ ಠಕ್ಕನ್ನವರ ಹಾಗೂ ಇತರ ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದಾರೆ.