ಮೇಯರ್ ಚುನಾವಣೆ ಮುಂದೂಡಿಕೆ ಬಹುತೇಕ ಖಚಿತ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.27: ಇಲ್ಲಿನ‌ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಾಳೆ ನಡೆಯಬೇಕಿದ್ದ ಚುನಾವಣೆ ಬಹುತೇಖ ಮುಂದೂಡುವ ಸಾಧ್ಯತೆ ನಿಚ್ಚಳವಾಗಿದೆ.
ಬಲ್ಲ ಮೂಲಗಳ ಪ್ರಕಾರ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ, ಪಕ್ಷದ ಹಿರಿಯ ಮುಖಂಡರು, ಹೈ ಕಮಾಂಡ್ ಅವರು ಎಂ.ಪಿ.ಚುನಾವಣೆ ಇರುವುದರಿಂದ ಮೇ ತಿಂಗಳ ವರೆಗೆ ಮುಂದೂಡುವ ಅವಶ್ಯಕತೆ ಇದೆ ಎಂದು ಹೇಳಿದ್ದಾರಂತೆ.
ಸಧ್ಯಕ್ಕಂತೂ ಈ ವರೆಗೆ ಪಾಲಿಕೆಯ ಸದಸ್ಯರನ್ನು ಕರೆದು ಸಭೆ ನಡೆಸಿಲ್ಲದಿರುವುದು ಸಹ ಚುನಾವಣೆ ಮುಂದೂಡುವ ಪ್ರಯತ್ನಕ್ಕೆ ಇಂಬು ನೀಡಿದಂತಾಗಿದೆ.
One attachment • Scanned by Gmail