ಶ್ರೀ ಗಂಡಿ ಲಕ್ಷ್ಮೀ ನರಸಿಂಹ ಸ್ವಾಮಿಯ ಕಲ್ಯಾಣೋತ್ಸ.
ಸಂಜೆವಾಣಿ ವಾರ್ತೆ
ಸಂಡೂರು: ಮಾ:27  ಸಂಡೂರಿಗೆ ಹೊಂದಿಕೊಂಡಿರುವ ಶ್ರೀ ಗಂಡಿ ಲಕ್ಷ್ಮೀ ನರಸಿಂಹ ಸ್ವಾಮಿಯ ಜಾತ್ರೆಯ ಅಂಗವಾಗಿ ಬೆಳಿಗ್ಗೆ ಕಲ್ಯಾಣೋತ್ಸವವನ್ನು ಅದ್ದೂರಿಯಾಗಿ ನೂರಾರು ಭಕ್ತರ ಸಮೂಹದಲ್ಲಿ ನೆರವೇರಿಸಲಾಯಿತು.
ಶ್ರೀ ಗಂಡಿ ನರಸಿಂಹ ಸ್ವಾಮಿಯು ಬೆಟ್ಟದ ಮಧ್ಯದಲ್ಲಿ ನೆಲಸಿದ್ದು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಕಲ್ಯಾಣೋತ್ಸವವನ್ನು ರಾಜವಂಶಸ್ಥರಾದ ಸೂರ್ಯಪ್ರಭಾ ಘೋರ್ಪಡೆಯವರು ಚಾಲನೆ ನೀಡಿದರು ಈ ಸಂದರ್ಭದಲ್ಲಿ ಏಕಾಂಬರ ಘೋರ್ಪಡೆ ಇತರರು ಉಪಸ್ಥಿತರಿದ್ದರು, ಅಲ್ಲದೆ ಬೆಳಿಗ್ಗೆ ಸ್ವಾಮಿಗೆ ಅಭಿಷೇಕ, ಅಲಂಕಾರ ಪೂಜೆ, ರಾತ್ರಿ ಪಲ್ಲಕ್ಕಿ ಉತ್ಸವ ಹಾಗೂ ಬೆಳಿಗ್ಗೆ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.