ಸಂಡೂರು ತಾಲೂಕಿನ 10 ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ
ಸಂಜೆವಾಣಿ ವಾರ್ತೆ
ಸಂಡೂರು: ಮಾ:27 ತಾಲೂಕಿನಾದ್ಯಂತ ಪ್ರಥಮ ಭಾಷೆ ಕನ್ನಡ 10 ಕೇಂದ್ರಗಳಲ್ಲಿ ಶಾಂತಿಯುತವಾಗಿ ನಡೆಯಿತು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಅರ್.ಅಕ್ಕಿ ತಿಳಿಸಿದರು.
ಅವರು ಪರೀಕ್ಷೆ ಪ್ರಾರಂಭದಲ್ಲಿ ಮಾಹಿತಿ ನೀಡಿ ಮಾತನಾಡಿ ಈಗಾಗಲೇ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆಯಲು ಹಾಕು ಪರೀಕ್ಷೆಯ ಭಯವನ್ನು ಹೋಗಲಾಡಿಸಲು ಸ ನಿವಾಸ ತರಬೇರಿ, ನಿರಂತರ ಪರೀಕ್ಷೆ, ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ ಬೋಧನೆ, ಹಾಗೂ ಮೋಕ್ ಟೆಸ್ಟ್, ಸಹ ನಡೆಸಲಾಗಿದ್ದು ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆಯನ್ನು ಬರೆಯುವ ಮೂಲಕ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಇ.ಸಿ.ಓ ಬಸವರಾಜ ಮಾಹಿತಿ ನೀಡಿ ತಾಲೂಕಿನಾದ್ಯಂತ 10 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು 1 ಶ್ರೀ ಛತ್ರಪತಿ ಶಿವಾಜಿ ವಿದ್ಯಾಮಂದಿರ ಸಂಡೂರು, ಕೃಪಾನಿಲಯ ಪ್ರೌಢಶಾಲೆ ಸಂಡೂರು, ಸರ್ಕಾರಿ ಪ್ರೌಢಶಾಲೆ (ಎ.ಪಿ.ಎಂ.ಸಿ.) ಸಂಡೂರು, ಎಸರ್ಕಾರಿ ಪ.ಪೂರ್ವ ಕಾಲೇಜು ಚೋರನೂರು, ಎಂ.ಡಿ.ಅರ್.ಎಸ್. ಚೋರನೂರು, ಸರ್ಕಾರಿ ಪ್ರೌಢಶಾಲೆ ತೋರಣಗಲ್ಲು, ಸರ್ಕಾರಿ ಪ್ರೌಢಶಾಲೆ ವಡ್ಡು, ಎಂ.ಡಿ.ಅರ್.ಎಸ್. ಮೆಟ್ರಿಕಿ, ಸರ್ಕಾರಿ ಪ್ರೌಢಶಾಲೆ ದೋಣಿಮಲೈ ಹಾಗೂ ಎಂ.ಡಿ.ಅರ್.ಎಸ್. ಬಂಡ್ರಿ ಶಾಲೆಯಲ್ಲಿ ಪರೀಕ್ಷೆ ನಡೆಲಾಯಿತು  ಒಟ್ಟು 3538 ನೂತನ 38 ಹಳೆ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದರು ಒಟ್ಟು : 3576 ವಿದ್ಯಾರ್ಥಿಗಳಲ್ಲಿ 3501 ನೂತನ, 32ಹಳೆಯ ವಿದ್ಯರ್ಥಿಗಳು ಒಟ್ಟು 3533 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಒಟ್ಟು 43 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು, ಯಾವುದೇ ರೀತಿಯ ಅಹಿತಕರ ಘಟನೆ ಮತ್ತು ಶಾಂತಿಯುತವಾದ ಪರೀಕ್ಷೆ ನಡೆಸಲಾಯಿತು, ಪರೀಕ್ಷೆ ಪೂರ್ವದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಎಂದರು