ಸಿಯುಕೆಯಲ್ಲಿ ‘ವಿಕಾಸಿತ್ ಭಾರತ@2047: ಸ್ವಾವಲಂಬನೆಯಡೆಗೆ’ ಕುರಿತು ಎರಡು ದಿನಗಳ ಸಮ್ಮೇಳನ
ಕಲಬುರಗಿ:ಸೆ.18:”ಪ್ರಸ್ತುತ ಭಾರತವು 3.6 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದೆ, ಅದು 2047 ರ ವೇಳೆಗೆ ಶೇಕಡಾ ಏಳು ದರದಲ್ಲಿ ಆರ್ಥಿಕ ಬೆಳವಣಿಗೆಯಾದರೆ ಅದು 55 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ” ಎಂದು ಚೆನ್ನೈನ ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ಪೆÇ್ರ.ಎನ್ ಆರ್ ಬಾನುಮೂರ್ತಿ ಹೇಳಿದರು.
ಅವರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹೊಸದಿಲ್ಲಿಯ ಐಸಿಎಸ್‍ಎಸ್‍ಆರ್‍ನ ಸಹಯೋಗದಲ್ಲಿ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗವು ಆಯೋಜಿಸಿದ್ದ ‘ವಿಕಾಸಿತ್ ಭಾರತ @ 2047: ಸ್ವಾವಲಂಬನೆಯಡೆಗೆ’ ಕುರಿತ ಎರಡು ದಿನಗಳ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡುತ್ತಾ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ, “ವಿಕಾಸಿತ್ ಭಾರತ ಪದವು ಇಂದು ಎಲ್ಲರ ಮನೆ ಮಾತಾಗಿದೆ ಎಲ್ಲರೂ ಅದರ ಬಗ್ಗೆಯೆ ಮಾತನಾಡುತಿದ್ದಾರೆ. ಇದು ನಮ್ಮ ಪ್ರಧಾನಿಯವರ ಉಪಕ್ರಮದಿಂದ ಪ್ರಾರಂಭವಾಯಿತು. 2047 ರ ವೇಳೆಗೆ ಭಾರತ 55 ಟ್ರಿಲಿಯನ್ ಆರ್ಥಿಕತೆಯಾಗುವುದು ಸಾಧ್ಯವಿದೆ. ಸಾಧಿಸುವುದು ಹೇಗೆ? ಎಂಬುದು ಇದರ ಮುಖ್ಯ ತಿರುಳಾಗಿದೆ. 2047 ರ ವೇಳೆಗೆ ಭಾರತವು 55 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಲು ಕಾರಣವೇನು? ಭಾರತದ ಆರ್ಥಿಕತೆಯ ಸೂಕ್ಷ್ಮತೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ನನ್ನ ದೃಷ್ಟಿಯಲ್ಲಿ ವಿಕಾಸಿತ್ ಭಾರತ@2047 ಆಗಲು ನಾವು ಎಳು ಎಸ್ ತಂತ್ರವನ್ನು ಅನುಸರಿಸಬೇಕು” ಎಂದು ಹೇಳಿದರು.
“ಮೊದಲ ಎಸ್ ಉಳಿತಾಯ. ಪ್ರಸ್ತುತ 32 ಪ್ರತಿಶತ ಹೂಡಿಕೆಯಲ್ಲಿ 30 ಪ್ರತಿಶತವು ದೇಶದೊಳಗಿನ ಉಳಿತಾಯದಿಂದ ಬರುತ್ತಿದೆ. ನಾವು ಯಾವಾಗಲೂ ಉಳಿತಾಯ ಆಧಾರಿತ ಆರ್ಥಿಕತೆ ಮತ್ತು ಈ ಪ್ರವೃತ್ತಿಯು ಮುಂದುವರಿಯಬೇಕು. ಇದರಿಂದಾಗಿ ನಾವು ಹಿಂದೆ ಕೋವಿಡ್ ಸಮಯದಲ್ಲಿಯೂ ಆರ್ಥಿಕ ಆಘಾತಗಳನ್ನು ಹೊಂದಿರಲಿಲ್ಲ. ಅದಕ್ಕಾಗಿ ನಮಗೆ ಹೆಚ್ಚಿನ ಬ್ಯಾಂಕುಗಳು ಬೇಕು, ವಿಶೇಷವಾಗಿ ನಮಗೆ ಹೆಚ್ಚಿನ ಸಾರ್ವಜನಿಕ ವಲಯದ ಬ್ಯಾಂಕುಗಳು ಬೇಕು. ಕೆಲವೇ ಮತ್ತು ದೊಡ್ಡ ಪ್ರಮಾಣದ ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಹೊಂದಿರುವುದು ತಪ್ಪು ಕಲ್ಪನೆ”.
“ಎರಡನೇ ಎಸ್ ನುರಿತ ಮಾನವ ಸಂಪನ್ಮೂಲ, ಅನೇಕ ವದೇಶಿ ಕಂಪನಿಗಳು ಚೀನಾಕ್ಕೆ ಹೋಗುವುದಕ್ಕೆ ಮುಖ್ಯ ಕಾರಣ ಅದು ಕಡಿಮೆ ವೆಚ್ಚದ ಮತ್ತು ನುರಿತ ಕಾರ್ಮಿಕರನ್ನು ಹೊಂದಿರುವುದು. ನಾವು ಕೂಡ ಇದನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ ಆದರೆ ಸಣ್ಣ ಪ್ರಮಾಣದಲ್ಲಿ. ಇತ್ತೀಚೆಗೆ ಪೆÇಕ್ಸಕಾನ್ ಕಂಪನಿ ಭಾರತಕ್ಕೆ ಬಂದಿತು ಏಕೆಂದರೆ ಅದು ಒಂದೇ ಪ್ರದೇಶದಲ್ಲಿ 30000 ನುರಿತ ಕಾರ್ಮಿಕರನ್ನು ಪಡೆಯುತ್ತಿದೆ. ಕೃತಕ ಬುದ್ದಿಮತ್ತೆ ಸಾಕಾರವಾಗಲಿದೆ. ಹಾಗಾದರೆ ನಮ್ಮ ಯುವಕರಿಗೆ ಏನಾಗಬಹುದು? ಕಾರ್ಮಿಕ ಮಾರುಕಟ್ಟೆಯಲ್ಲಿನ ಕೌಶಲ್ಯದ ಅಂತರವನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ನಮ್ಮ ಕಾರ್ಮಿಕ ಮಾರುಕಟ್ಟೆಯನ್ನು ಹೆಚ್ಚು ಸರಳಗೊಳಿಸಬೇಕು ಮತ್ತು ಉದ್ಯಮಕ್ಕೆ ಹೊಂದಿಕೊಳ್ಳುವಂತೆ ಮಾಡಬೇಕು.”
ಮೂರನೇ ಎಸ್ ರಾಜ್ಯಗಳು, ಕೇಂದ್ರ ರಾಜ್ಯಗಳೊಂದಿಗೆ ಕೆಲಸ ಮಾಡಬೇಕು. ನಮ್ಮದು ರಾಜ್ಯಗಳ ಒಕ್ಕೂಟ, ಕೇಂದ್ರ ಎಂಬುದೇ ಇಲ್ಲ. ವಿಕಸಿತ ಭಾರತವನ್ನು ಸಾಧಿಸಲು ಎಲ್ಲಾ ಪ್ರದೇಶಗಳು ಮತ್ತು ರಾಜ್ಯಗಳು ಕೆಲಸ ಮಾಡಬೇಕು. ಕೇಂದ್ರದಿಂದ ರಾಜ್ಯಗಳತ್ತ ಗಮನ ಹರಿಸಬೇಕು ಎಂದಾಗ ಮಾತ್ರ ನಿಋಈಕ್ಷಿತ ಪ್ರಗತಿ ಸಾಧ್ಯ.”
“ನಾಲ್ಕನೇ ಎಸ್ ಅಂಕಿಅಂಶಗಳು; ನಾವು ನಮ್ಮ ಅಂಕಿಅಂಶ ವ್ಯವಸ್ಥೆಯನ್ನು ಬಲಪಡಿಸಬೇಕು. ಹೇಗೋ ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಅಂಕಿಅಂಶ ವ್ಯವಸ್ಥೆ ದುರ್ಬಲಗೊಂಡಿದೆ. ಜನಗಣತಿ ಸೇರಿದಂತೆ ಹಲವು ಹಿಂದಿನ ಅಂಕಿಅಂಶಗಳ ಸೂಚಕಗಳು ಕಾಣೆಯಾಗಿವೆ. ಅಂಕಿಅಂಶಗಳಿಲ್ಲ ಎಂದರೆ ಅರ್ಥಶಾಸ್ತ್ರವಿಲ್ಲ. ಅಂಕಿಅಂಶಗಳಿಲ್ಲದೆ ಸರಿಯಾದ ನೀತಿ ರೂಪಿಸುವುದು ಸಾಧ್ಯವಿಲ್ಲ, ಹಾಗಾಗಿ ವಿಕಾಸ್ ಭಾರತ್ ಸಾಧ್ಯವಿಲ್ಲ.”
“ಐದನೇ ಎಸ್ ಆರ್ಥಿಕತೆಯಲ್ಲಿ ರಚನಾತ್ಮಕ ರೂಪಾಂತರ ತರುವುದು. ನಮ್ಮ ಆರ್ಥಿಕತೆಗೆ ಅರ್ಧಕ್ಕಿಂತ ಹೆಚ್ಚು ಸೇವಾ ವಲಯದಿಂದ ಆದಾಯ ಬರುತ್ತಿದೆ. ಆದರೆ ಉತ್ಪಾದನಾ ವಲಯ ಸೃಷ್ಟಿಸುವಂತೆ ಸೇವೆಗಳು ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವುದಿಲ್ಲ. ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲು ನಾವು ಉತ್ಪಾದನಾ ವಲಯಕ್ಕೆ ಹೆಚ್ಚಿನ ಗಮನ ನೀಡಬೇಕು. ಜಿಡಿಪಿಯ ಕನಿಷ್ಠ 25 ಪ್ರತಿಶತ ಉತ್ಪಾದನಾ ವಲಯದಿಂದ ಬರಬೇಕು. ಇತ್ತೀಚಿನ ಚುನಾವಣಾ ಫಲಿತಾಂಶಗಳಿಗೆ ನಾವು ಧನ್ಯವಾದ ಹೇಳಬೇಕು ಅದರಿಂದಾಗಿ ಸರ್ಕಾರವು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಆದ್ದರಿಂದ ಕಳೆದ ಬಜೆಟ್ ನಲ್ಲಿ ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಗಮನ ನೀಡಲಾಗಿದೆ. ಉತ್ಪಾದನಾ ಅಂಶಗಳ ಮಾರುಕಟ್ಟೆ ಸುಧಾರಣೆ, ಭೂ ಸುಧಾರಣೆ ಮತ್ತು ಬಲವರ್ಧನೆಗೆ ಬಹಳ ಒತ್ತು ನೀಡಬೇಕಾದ ಅವಶ್ಯಕತೆಯಿದೆ.”
ಆರನೇ ಎಸ್ ಸುಸ್ಥಿರ ಅಭಿವೃದ್ಧಿ ಗುರಿಗಳು (Sಆಉ). ಸುಸ್ಥಿರ ಅಭಿವೃದ್ಧಿ ಗುರಿಗಳು ಇಲ್ಲದೆ ನಾವು ವಿಕಸಿತ ಭಾರತವನ್ನು ಸಾಧಿಸಲು ಸಾಧ್ಯವಿಲ್ಲ. ವಿಕಸಿತ ಭಾರತವನ್ನು ಸಾಧಿಸಲು ಆರೋಗ್ಯ, ಪೌಷ್ಟಿಕತೆ, ಬಡತನದ ಕಡಿತ, ಲಿಂಗ ಸಮಾನತೆ ತರುವುದು ಬಹಳ ಮುಖ್ಯ. ಇತ್ತೀಚೆಗೆ ನಾವು ನಿಂಗ ಆಧಾರಿತ ಬಜೆಟ್‍ಗೆ ಪ್ರಾಮುಖ್ಯತೆ ನೀಡಿದ್ದೇವೆ ಮತ್ತು ಜಲ ಜೀವನ್ ಮಿಷನ್, ಉಜ್ವಲಾ ಯೋಜನೆಗಳನ್ನು ತರಲಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳು ಸಾಧಿಸಲು ಹೆಚ್ಚಿನ ಗಮನ ನೀಡಬೇಕು.”
ಏಳನೇ ಎಸ್, ಸಣ್ಣ ಉದ್ಯಮಗಳು. ಸಣ್ಣ ಉಧ್ಯಮಗಳ ಸರಿಯಾದ ಅಂಕಿಆಂಶ ಇಲ್ಲ. ಸಣ್ಣ ಉಧ್ಯಮಗಳು ದೊಡ್ಡ ಸಂಖ್ಯೆಯಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತವೆ ಮತ್ತು ಆದ್ದರಿಂದ ಅವುಗಳ ಬೆಳವಣಿಗೆ ಬಹಳ ಮುಖ್ಯ. ನಮಗೆ ಹಣದ ಸಮಸ್ಯೆ ಇಲ್ಲ, ಆದರೆ ಬಂಡವಾಳ ವೆಚ್ಚದ ದಕ್ಷತೆಯ ಕೊರತೆಯಿದೆ. ಇತ್ತೀಚಿನ ಬಜೆಟ್‍ಗಳಲ್ಲಿ ಸಣ್ಣ ಉಧ್ಯಮಗಳಿಗೆ 3 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು ಆದರೆ ವೆಚ್ಚವು ಹಂಚಿಕೆಯ ಮೂರನೇ ಒಂದು ಭಾಗ ಮಾತ್ರದμÁ್ಟಗಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಂದ ನಾವು ಕಲಿಯಬೇಕಿದೆ” ಎಂದು ಅವರು ಹೇಳಿದರು.
ಗೌರವಾನ್ವಿತ ಕುಲಪತಿಗಳಾದ ಪೆÇ್ರ. ಬಟ್ಟು ಸತ್ತಯನಾರಾಯಣ ಅವರು ಸಮ್ಮೇಳನವನ್ನು ಉದ್ಘಾಟಿಸಿ ಮಾಡಿ “ಎಪ್ಪತ್ತೈದು ವರ್ಷಗಳಲ್ಲಿ ಭಾರತವು ಎಲ್ಲಾ ಆಯಾಮಗಳಲ್ಲಿ ಸಾಕಷ್ಟು ಬದಲಾಗಿದೆ. ಮೊದಲು ‘ಲೈಸೆನ್ಸ್ ರಾಜ್’ ವ್ಯವಸ್ಥೆಯಿಂದ ವ್ಯಾಪಾರ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಆದರೆ ಇಂದು ನಾವು ಯಾವುದೇ ವ್ಯವಹಾರವನ್ನು ಮಾಡಲು ಕಡಿಮೆ ಸಮಯದಲ್ಲಿ ಅನುಮತಿಯನ್ನು ಪಡೆಯುವಂತಾಗಿದೆ. ಚೀನಾದಂತಹ ನುರಿತ ಮಾನವ ಶಕ್ತಿಯನ್ನು ಅಭಿವೃದ್ಧಿಪಡಿಸಲು ನಾವು ಪ್ರಾಯೋಗಿಕ ಕಲಿಕೆ ಮತ್ತು ಇಂಟರ್ನ್‍ಶಿಪ್‍ಗಳ ಮೇಲೆ ಹೆಚ್ಚು ಗಮನಹರಿಸಬೇಕು. ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳು ಸಹಕರಿಸಬೇಕು ಮತ್ತು ಒಟ್ಟಿಗೆ ಕೆಲಸ ಮಾಡಬೇಕು. ಒಂದು ಕಾಲದಲ್ಲಿ ನಾವು ಹಸಿವಿನಿಂದ ಬಳಲುತ್ತಿದ್ದೇವು ಮತ್ತು ಆಹಾರ ಧಾನ್ಯಗಳು ಮತ್ತು ಹಾಲಿನ ಪುಡಿಯನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ ಇಂದು ನಾವು ಸ್ವಾವಲಂಬಿಗಳಾಗಿದ್ದೇವೆ ಮತ್ತು ಇತರ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ನಮ್ಮ ಮೂಲಸೌಕರ್ಯ ಮತ್ತು ಸಂಪರ್ಕವು ಸಾಕಷ್ಟು ಸುಧಾರಿಸಿದೆ. ನಮ್ಮ ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳು ಸಾಕಷ್ಟು ಬದಲಾಗಿವೆ. ವಾಹನಗಳ ಸಂಖ್ಯೆ ಹೆಚ್ಚಿದೆ. ಒಟ್ಟಾರೆಯಾಗಿ ನಮ್ಮ ಆರ್ಥಿಕತೆಯು ಬೆಳೆಯುತ್ತಿದೆ, ಉತ್ಪಾದನೆ ಮತ್ತು ಸೇವೆಗಳು ಬಹಳಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತಿವೆ. ನಾವು ವಿಕಸಿತ ಭಾರತದತ್ತ ಸಾಗುತ್ತಿದ್ದೇವೆ, ನಾವು ನಮ್ಮ ಮೇಲೆ ನಂಬಿಕೆ ಇಡಬೇಕು ಮತ್ತು ನಮ್ಮ ಕನಸನ್ನು ನನಸಾಗಿಸಲು ಮುಂದೆ ಸಾಗಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಕಸಿತ ಭಾರತದ ಕುರಿತು ಡಾ.ಎಸ್.ಲಿಂಗಮೂರ್ತಿ, ಡಾ. ಡಾ.ಬಸವರಾಜ ಎಂ.ಎಸ್ ಮತ್ತು ಡಾ. ಶಿವಕುಮಾರ ಬೆಳ್ಳಿ ಸಂಪಾದಿಸಿದ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಾಗರ್ ಏμÁ್ಯ ಪ್ರೈವೇಟ್ ಲಿಮಿಟೆಡ್‍ನ ಶ್ರೀ ವಿದ್ಯಾಸಾಗರ್, ಸೋಲಾರ್ ಉದ್ಯಮಿ ಶ್ರೀ ಬಿ ಇಂದ್ರಸೇನ್ ರೆಡ್ಡಿ ಅವರು ಮಾತನಾಡಿದರು. ಡೀನ್ ಸ್ಕೂಲ್ ಆಫ್ ಬಿಸಿನೆಸ್ ಸ್ಟಡೀಸ್, ಪೆÇ್ರ.ಕೆ ಪದ್ಮಶ್ರೀ ಸ್ವಾಗತಿಸಿದರು, ವಿಚಾರ ಸಂಕಿರಣದ ಸಂಚಾಲಕ ಡಾ.ಎಸ್.ಲಿಂಗಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಡಾ.ಸುಮಾ ಸ್ಕಾರಿಯಾ ವಂದಿಸಿದರು. ಡಾ. ಜಯದೇವಿ ಜಂಗಮಶೆಟ್ಟಿ ಮತ್ತು ಡಾ. ಸ್ವಪನಿಲ ಚಾಪೇಕರ್ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದರು. ವೇದಿಕೆಯಲ್ಲಿ ಕುಲಸಚಿವ ಪೆÇ್ರ.ಆರ್.ಆರ್.ಬಿರಾದಾರ್, ಪೆÇ್ರ.ಅಶ್ವನಿ ಮಹಾಜನ್, ಡಾ.ಬಸವರಾಜ ಎಂ.ಎಸ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.