ಅಕ್ರಮ ಗೋವಾ ಮದ್ಯ ವಶ, ಆರೋಪಿ ಬಂಧನ
ಉಡುಪಿ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಷನ್‌ನಿಂದ ಮಣಿಪಾಲಕ್ಕೆ ಹೋಗುವ ಮಾರ್ಗದಲ್ಲಿ ಸೆಪ್ಟಂಬರ್ ೧೭ ರಂದು ಅಕ್ರಮವಾಗಿ ಗೋವಾ ಮದ್ಯವನ್ನು ದಾಸ್ತಾನು ಹೊಂದಿ ದ್ವಿಚಕ್ರ ವಾಹನದಲ್ಲಿ ದುಬಾರಿ ದರದ ವಿವಿಧ ಬ್ರ್ಯಾಂಡ್‌ನ ಅಂದಾಜು ೧,೪೨,೭೯೮ ರೂ. ಮೌಲ್ಯದ ಒಟ್ಟು ೩೧.೦೦೦ ಲೀಟರ್ ಗೋವಾ ರಾಜ್ಯದ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಅನಂತ ದೇವದಾಸ ಪ್ರಭು ಎಂಬಾತನನ್ನು ಅಬಕಾರಿ ನಿರೀಕ್ಷಕರ ನೇತೃತ್ವದಲ್ಲಿ ದಸ್ತಗಿರಿ ಮಾಡಿ ಮದ್ಯ ಹಾಗೂ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ೧೪ ದಿನಗಳ ನ್ಯಾಯಾಂಗ ಬಂಧನವಿಧಿಸಿದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ.ಬಾಲಕೃಷ್ಣ ಸಿ.ಹೆಚ್ ಮಾರ್ಗದರ್ಶನದಲ್ಲಿ ಜಿಲ್ಲೆಯ ಅಬಕಾರಿ ಉಪ ಆಯುಕ್ತೆ ಬಿಂದು ಅವರ ನಿರ್ದೇಶನದಂತೆ ಅಬಕಾರಿ ನಿರೀಕ್ಷಕರಾದ ಶುಭದಾ ಸಿ.ನಾಯಕ್, ಅಬಕಾರಿ ಉಪ ನಿರೀಕ್ಷಕರುಗಳಾದ ದಿವಾಕರ ಹಾಗೂ ಶಿವಶಂಕರ ಯು, ಕಾನ್ಸ್‌ಟೇಬಲ್‌ಗಳಾದ ಪ್ರಹ್ಲಾದ ಮತ್ತು ಪರಸಪ್ಪ ಇಂಗಳಗಿ, ಹಿರಿಯ ವಾಹನ ಚಾಲಕರಾದ ಸುಧಾಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.