ಹೋಳಿ ಹಬ್ಬ: ಬಣ್ಣದ ಮಡಿಕೆ ಹೊಡೆಯುವ ಸ್ಪರ್ಧೆ
ಸಂಜೆವಾಣಿ ವಾರ್ತೆ
ಮಾನ್ವಿ.ಮಾ.೨೭-ಪಟ್ಟಣದ ಟಿ.ಎ.ಪಿ.ಸಿ.ಎಂ.ಸಿ. ಬಯಲು ಜಾಗದಲ್ಲಿ ವಿಶ್ವಹಿಂದೂ ಪರೀಷತ್ ಹಾಗೂ ಬಜರಂಗದಳ ವತಿಯಿಂದ ಹೋಳಿ ಹಬ್ಬದ ಅಂಗವಾಗಿ ನಡೆದ ಬಣ್ಣದ ಮಡಕೆ ಹೊಡೆಯುವ ಸ್ಪರ್ಧೆಗೆ ವಿ.ಹಿಂ.ಪ.ತಾಲೂಕು ಅಧ್ಯಕ್ಷರಾದ ವಿಜಯೇಂದ್ರ ಇಭ್ರಮಪುರ ಚಾಲನೆ ನೀಡಿದರು.
ಪಟ್ಟಣದ ೧೦ ಕ್ಕೂ ಹೆಚ್ಚು ಯುವಕರ ತಂಡಗಳು ಉತ್ಸಹದಿಂದ ಭಾಗವಹಿಸಿ ಬಣ್ಣದ ಮಡಿಕೆಯನ್ನು ಒಡೆದು ಸಂಭ್ರಮಿಸಿದರು.
ಬಸವನಗೌಡ ಚೀಕಲಪರ್ವಿ ಮೋದಲನೆ ಬಹುಮಾನ ೫ ಸಾವಿರ ರೂಗಳನ್ನು ವಿಜೇತರಾದ ಟಿ.ಎ.ಪಿ.ಸಿ.ಎಂ.ಸಿ. ಹಮಾಲರ ಸಂಘದ ಯುವಕರಿಗೆ ನೀಡಿದರು. ಪುರಸಭೆ ಸದಸ್ಯ ಶರಣಪ್ಪ ಮೇದಾ ರವರು ದ್ವಿತೀಯ ಬಹುಮಾನ ವಿಜೇತರಾದ ಮಾರುತಿ ನಗರದ ಶ್ರೀರಾಮಸೇನೆ ಯುವಕರ ತಂಡಕ್ಕೆ ನೀಡಿದರು. ತೃತೀಯ ಬಹುಮಾನ ಒಂದು ಸಾವಿರ ನಮಾಜಗೇರಿ ಗುಡ್ಡ ಯುವಕರ ತಂಡ ಪಡೆದು ಕೊಂಡಿತು.
ಬಣ್ಣದ ಮಡಕೆ ಹೊಡೆಯುವ ಸ್ಪರ್ಧೆಯನ್ನು ವಿಕ್ಷೀಸಲು ಸಾವಿರಾರು ಯುವಕರು ಆಗಮಿಸಿ ಪ್ರೋತ್ಸಾಹ ನೀಡಿದರು.