ಎಸ್‌ಸಿ ಮೋರ್ಚ್ ಜಿಲ್ಲಾ ಉಪಾಧ್ಯಕ್ಷರಾಗಿ ಬಸವರಾಜ ನಕ್ಕುಂದಿ ನೇಮಕ
ಸಂಜೆವಾಣಿ ವಾರ್ತೆ
ಮಾನ್ವಿ.ಮಾ.೨೭- ತಾಲೂಕಿನ ಯುವ ರಾಜಕಾರಣಿ ದಲಿತ ಸಮುದಾಯದ ಬಸವರಾಜ ನಕ್ಕುಂದಿ ಇವರು ೨೦೧೮ ರಿಂದ ತಾಲೂಕ ದಲಿತ ಮೋರ್ಚ್ ಅಧ್ಯಕ್ಷರಾಗಿ ಮಾಡಿದ ಬಿಜೆಪಿ ಪಕ್ಷದ ಸಂಘಟನೆಯನ್ನ ಪರಿಗಣಿಸಿದ ರಾಯಚೂರು ಬಿಜೆಪಿ ಎಸ್ ಸಿ ಮೋರ್ಚದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಜಿಲ್ಲಾಧ್ಯಕ್ಷ ಶಾಸಕ ಡಾ ಶಿವರಾಜ ಪಾಟೀಲ ಹಾಗೂ ಎಸ್ ಸಿ ಮೋರ್ಚ್ ಜಿಲ್ಲಾಧ್ಯಕ್ಷ ಪಿ ಯಲ್ಲಪ್ಪ ಇವರು ಆಯ್ಕೆ ಮಾಡಿ ನೇಮಕ ಆದೇಶವನ್ನು ನೀಡಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸುವಂತೆ ಆದೇಶ ನೀಡಿದ್ದಾರೆ.
ನಮ್ಮ ಪ್ರತಿನಿಧಿಯೊಂದಿಗೆ ಬಸವರಾಜ ನಕ್ಕುಂದಿ ಮಾತಾನಾಡಿ ನನ್ನನ್ನು ಜಿಲ್ಲಾ ಎಸ್ ಸಿ ಮೋರ್ಚ್ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕರಿಸಿದ ರಾಯಚೂರು ಜಿಲ್ಲಾ ಹಾಗೂ ತಾಲೂಕಿನ ಎಲ್ಲಾ ಬಿಜೆಪಿ ಪಕ್ಷದ ಮುಖಂಡರಿಗೂ ಅಭಿನಂದನೆ ತಿಳಿಸಿ ಖಂಡಿತವಾಗಿ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಇವರ ಗೆಲುವಿಗಾಗಿ ಶ್ರಮಿಸಿ ನಮ್ಮ ಪಕ್ಷದ ಸಿದ್ದಾಂತವನ್ನು ಪಾಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎಸ್‌ಟಿ ಮೋರ್ಚ್ ರಾಜ್ಯ ಅಯ್ಯಪ್ಪ ನಾಯಕ ಮ್ಯಾಕಲ್, ಹನುಮೇಶ ನಾಯಕ ಸಾದಪೂರು, ಚಂದ್ರಶೇಖರ ನಾಯಕ, ಕೆ.ವೆಂಕಟೇಶ ಸೇರಿದಂತೆ ತಾಲೂಕಿನ ಅನೇಕ ಬಿಜೆಪಿಯ ಹಿರಿಯ ಮುಖಂಡರು, ಕಾರ್ಯಕರ್ತರು ಬಸವರಾಜ ನಕ್ಕುಂದಿ ಇವರಿಗೆ ಅಭಿನಂದನೆ ತಿಳಿಸಿದ್ದಾರೆ.