ಸಚಿವ ತಂಗಡಗಿ ಹೇಳಿಕೆ ಖಂಡನೀಯ: ಕ್ಷಮೆಯಾಚನೆಗೆ ಆಗ್ರಹ
ಸಂಜೆವಾಣಿ ವಾರ್ತೆ
ಸಿಂಧನೂರು.ಮಾ.೨೭- ಸಚಿವ ಶಿವರಾಜ ತಂಗಡಗಿ ಪ್ರಧಾನಿ ನರೇಂದ್ರ ಮೋದಿಯವ ಹೆಸರು ಹೇಳಿದರೆ ಕಪಾಳಕ್ಕೆ ಹೊಡಿಯಿರಿ ಎಂಬ ಅವಹೇಳನಕಾರಿ ಹೇಳಿಕೆಯನ್ನು ಸಿಂಧನೂರು ಬಿಜೆಪಿ ಯುವ ಮೋರ್ಚಾ ಅದ್ಯಕ್ಷ ಮುತ್ತು ಬರ್ಸಿ ತೀವ್ರ ವಾಗಿ ಖಂಡಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಯವರ ಹೆಸರನ್ನು ಬಿಜೆಪಿ ಕಾರ್ಯಕರ್ತರು ಹೇಳಿದಲ್ಲಿ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿರುವುದು ತುಂಬಾ ಆಕ್ರೋಶಕ್ಕೆ ಕಾರಣವಾಗಿದೆ.ಈ ಕೂಡಲೇ ಬಿಜೆಪಿ ಪಕ್ಷದ ಕಾರ್ಯಕರ್ತ ರಲ್ಲಿ ಸಚಿವ ಶಿವರಾಜ ತಂಗಡಗಿ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಅವರು ಎಲ್ಲಿ ಹೋಗುತ್ತಾರೆ ಅಲ್ಲೆಲ್ಲಾ ನಮ್ಮ ಕಾರ್ಯಕರ್ತರು ಪ್ರತಿಭಟಿಸುತ್ತಾರೆ , ಮುಂದುವರೆದು ಬೀದಿಗಳಿದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್.ನರೇಶ, ರಾಜು ಅಡವಿಬಾವಿ, ಮಹಾದೇವ ನಾಯಕ, ಅಮರೇಶ ಕಾನಿಹಾಳ, ರಮೇಶ ಗಾಳಿ, ಮನು ಹೊಸಮನಿ, ಅಶೋಕ ಹೊಸಳ್ಳಿ ಇಜೆ, ಗಣೇಶ ಕುರಿ, ನಿರುಪಾದಿ .ಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.