ಮದ್ಯ ರಾತ್ರಿಯಾದರೂ ಮುಚ್ಚದ ಬಾರ್ & ರೆಸ್ಟೊರೆಂಟ್
(ಸಂಜೆವಾಣಿ ವಾರ್ತೆ)
ಸಿಂಧನೂರು ಮಾ.೨೭ ನಗರದಲ್ಲಿ ಮದ್ಯರಾತ್ರಿಯಾದರೂ ಮುಚ್ಚದ ಬಾರ್ ಬಾರ್, ರೆಸ್ಟೋರೆಂಟ್ ಹಾಗೂ ಗ್ರಾಮೀಣ ಭಾಗಗಳಲ್ಲಿ ಕಿರಾಣಿ ಅಂಗಡಿ ಸೇರಿದಂತೆ ಪ್ರತಿ ಕಡೆ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು ಇದಕ್ಕ ಕಡಿವಾಣ ಹಾಕುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ವತಿಯಿಂದ ಆಗ್ರಹಿಸಿ ಅಬಕಾರಿ ನಿರೀಕ್ಷರಿಗೆ ಮನವಿ ಮೂಲಕ ಒತ್ತಾಯಿಸಿದರು.
ಲೋಕಸಭಾ ಚುನಾವಣಾ ಹಿನ್ನೆಲೆ ನೀತಿಸಂಹಿತೆ ಇದ್ದೂ ಆದರೂ ನಗರದಲ್ಲಿ ಕಿರಾಣಿ, ಪಾನ್ ಶಾಪ್, ಖಾನಾವಳಿ ಸೇರಿದಂತೆ ನಗರದ ಗಲ್ಲಿ ಗಲ್ಲಿ ಗಳಲ್ಲಿ ಸಾರಾಯಿ ಮಾರಾಟ ಹಗಲು-ರಾತ್ರಿ ಎನ್ನದೇ ಬೆಳಿಗ್ಗೆ ೬-೦೦ ಗಂಟೆ ಯಿಂದ ಪ್ರಾರಂಭವಾಗುತ್ತಿದೆ.ಇದನ್ನು ಗಮನಿಸಿದರೆ ಅಧಿಕಾರಿಗಳಿಗೆ ಮಾಮೂಲಿ ಮುಟ್ಟಿರಬೇಕು ಎಂಬ ಅನುಮಾನ ಮೂಡುತ್ತಿದೆ. ಬಾರ್ ಆಂಡ್ ರೆಸ್ಟೊರೆಂಟ್ ಗಳು ತಾವು ಆಡಿದ್ದೆ ಆಟ ಎಂಬಂತಾಗಿದೆ.ಬಸ್ ನಿಲ್ದಾಣೆದ ಹತ್ತಿರದ ಅಶ್ವಿನಿ ಬಾರ್ ನಲ್ಲಿ ರಾತ್ರಿ ೧೨-೩೦ ಆದರೂ ಹಿಂಬಾಗಿಲಿನಿಂದಲೂ ಮಾರಾಟ ಮಾಡುತ್ತಾರೆ ಇದರ ಬಗ್ಗೆ ಕೇಳಿದರೆ ನಿಮಗ್ಯಾಕೆ ಈ ಉಸಾಬರಿ ದೂರು ಕೊಡುವದಾದರೆ ಕೊಡಿ ಎಂಬ ಉಡಾಫೆ ಮಾತುಗಳನ್ನು ಆಡುತ್ತಾರೆಂದರೆ ಅಧಿಕಾರಿಗಳ ನಡೆಯ ಬಗ್ಗೆ ಅನುಮಾನ ಮೂಡುತ್ತಿದೆಂದು ಈ ಕೂಡಲೇ ಕ್ರಮ ಜರುಗಿಸಿ, ಕಡಿವಾಣ ಹಾಕದಿದ್ದಲ್ಲಿ ಚುನಾವಣೆ ಆಯೋಗಕ್ಕೆ ದೂರನ್ನು ಕೊಡಲಾಗುತ್ತದೆ ಎಂದು ಮನವಿ ಯಲ್ಲಿ ಒತ್ತಾಯಿಸಿದರು.
ಕರವೆ ತಾಲೂಕು ಅದ್ಯಕ್ಷ ಸುರೇಶ ಗೊಬ್ಬರಕಲ್, ನಗರ ಘಟಕದ ಅಧ್ಯಕ್ಷ ದೌಲಸಾಬ ದೊಡ್ಮನಿ, ಮಲ್ಲಿಕಾರ್ಜುನ ಕುನ್ನಟಗಿ,ಪವನ್ ನೇಕಾರ ಸೇರಿದಂತೆ ಸಿಂಧನೂರು ಅಬಕಾರಿ ನೀರಿಕ್ಷಕರಿಗೆ ಮನವಿ ತಲುಪಿಸಿದರು.