ಮಂತ್ರಾಲಯ: ಮಾ.೩೧ ಉಚಿತ ವೈದ್ಯಕೀಯ ಶಿಬಿರ
(ಸಂಜೆವಾಣಿ ಪ್ರತಿನಿಧಿಯಿಂದ)
ರಾಯಚೂರು(ಮಂತ್ರಾಲಯ),ಮಾ.೨೭- ಮಂತ್ರಾಲಯ ಸುಕ್ಷೇತ್ರದಲ್ಲಿ ಮಾ.೩೧ ರಂದು ಸುತ್ತಮುತ್ತಲಿನ ಗ್ರಾಮಸ್ಥರೂ ಸೇರಿದಂತೆ ಭಕ್ತರಿಗೆ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಲಾಗಿದೆ.
ಶ್ರೀರಾಘವೇಂದ್ರ ಸ್ವಾಮಿಗಳ ಆರ್ಶೀವಾದದೊಂದಿಗೆ ಸುಬುದೇಂದ್ರತೀರ್ಥರ ಮಾರ್ಗದರ್ಶನದಲ್ಲಿ ಈ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ಮೂಳೆ ಮತ್ತು ಎಲುಬು, ಮಧುಮೇಹ, ಹೃದಯ ರೋಗ, ಚರ್ಮರೋಗ, ನರಸಂಬಂಧಿತ ಆರೋಗ್ಯ ಸಮಸ್ಯೆಗೆ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿದೆ.
ಈ ಉಚಿತ ಆರೋಗ್ಯ ಶಿಬಿರವನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಡಬೇಕು ಎಂದು ತಿಳಿಸಿರುವ ಮಠದ ಆಡಳಿತ,ಅತ್ಯಾಧುನಿಕ ಯಂತ್ರಗಳನ್ನು ಬಳಸಿ ಆರೋಗ್ಯ ಪರಿಶೀಲನೆ ಮಾಡಲಾಗುವುದು. ಡಾ. ವಿ.ಸುರೇಶ್ ಅರುಣಕೋಣಂ, ರಾಘವೇಂದ್ರ ಟ್ರಸ್ಟ್ ತಮಿಳುನಾಡು, ಡಾ. ಶಂಕರ್ ನೇತೃತ್ವದ ವೈದ್ಯರ ತಂಡ ತಪಾಸಣೆ ನಡೆಸಲಿದೆ.
ಮಂತ್ರಾಲಯದ ಸುಜೀಂದ್ರ ಆರೋಗ್ಯ ಶಾಲೆಯಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೬.೩೦ ರ ವರೆಗೆ ಶಿಬಿರ ನಡೆಯಲಿದ್ದು, ಮಾಹಿತಿಗಾಗಿ ದೂ.ಸಂ:೯೭೯೧೦೮೯೩೨೭ನ್ನು ಸಂಪರ್ಕಿಸಬಹುದಾಗಿ ಕೋರಲಾಗಿದೆ.