ಸಂಘದ ಆಸ್ತಿ ಸಂರಕ್ಷಣೆ ನನ್ನ ಆಧ್ಯತೆಯಾಗಿತ್ತು: ರಾಮನಗೌಡ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.27: 2023 ರ ಎ.7 ರಿಂದ 2024 ರ ಫೆ.16 ವರೆಗೆ ಅಧ್ಯಕ್ಷರಾಗಿದ್ದ ಆರ್. ರಾಮನಗೌಡ ಅವರು. ತಮ್ಮ ಅವಧಿಯಲ್ಲಿ ಸಂಘದ ಅಭಿವೃದ್ಧಿಗಾಗಿ ಕೈಗೊಂಡದ್ದರ ಬಗ್ಗೆ ಸಂಜೆವಾಣಿಯೊಂದಿಗೆ ಹಂಚಿಕೊಂಡಿದ್ದಾರೆ.
ವೀರಶೈವ   ವಿದ್ಯಾವರ್ಧಕ   ಸಂಘದ   ಅಧೀನದಲ್ಲಿ ನಡೆಯುತ್ತಿರುವ   ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ   ಖಾಯಂ   ಬೋಧಕ ಬೋಧಕೇತರ   ಸಿಬ್ಬಂದಿಗಳಿಗೆ   ಜನವರಿ   2024   ರಿಂದ ಅನ್ವಯವಾಗುವಂತೆ   ಪರಿಷ್ಕೃತ   ವೇತನ ಶ್ರೇಣಿಗಳನ್ನು ಮಂಜೂರು ಮಾಡಲಾಗಿದೆ. 2011 ರಲ್ಲಿ ಅಟಲ್ ಬಿಹಾರಿ ವಾಜಪಾಯಿ ಬಡಾವಣೆ, ಬಳ್ಳಾರಿ ಇಲ್ಲಿನ ಸಿ.ಎ ಸೈಟ್   ವಿಸ್ತೀರ್ಣ   50,057   ಚ.ಅ   ಜಾಗವನ್ನು   ಬುಡಾ ಇವರಿಂದ   30   ವರ್ಷಗಳಿಗೆ   ಲೀಸ್   ಆಧಾರದ   ಮೇಲೆ   ಪಡೆದಿದ್ದು, ಸದರಿ ಜಾಗದಲ್ಲಿ  ಕಿಂಡರ್‍ಗಾರ್ಟನ್ ಶಾಲೆಯನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದು, ಈ ಶಾಲೆಗೆ   ನೂತನ   ಕಟ್ಟಡವನ್ನು   ಮತ್ತು ಮೂಲಭೂತ   ಸೌಕರ್ಯಗಳನ್ನು   ಒದಗಿಸಲು ಕ್ರಮವಹಿಸಲಾಗಿದೆ.   ಪ್ರಸ್ತುತ   ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದೆ.
ಬಸವೇಶ್ವರ   ನಗರದ   ಸರ್ವೆ   ನಂ.   424,   ವಿಸ್ತೀರ್ಣ   14.07 ಎಕರೆ   ಜಮೀನಿನಲ್ಲಿ   ವತ್ತುವರಿ   ಮಾಡಿರುವ   ಜಾಗದಲ್ಲಿ ಕಾಂಪೌಂಡ   ಗೋಡೆ   ನಿರ್ಮಿಸಿದ್ದು,   ಇದರಿಂದ   ಸಂಘಕ್ಕೆ ಸುಮಾರು  ರೂ. 06.00 ಕೋಟಿ ಮೌಲ್ಯ ಭೂಮಿ ಲಭಿಸಿದೆ. ಸಂಘದ   ಅಧೀನದಲ್ಲಿರುವ   ರಾಘವೇಂದ್ರ   ಕಾಲೋನಿ ಭೂಮಿಯಲ್ಲಿ   ಸಂಘದ   ಅನುಮತಿ   ಇಲ್ಲದೇ ಗುತ್ತಿಗೆದಾರರು   ತಮ್ಮ   ಕಟ್ಟಡದ   ನಿರ್ಮಾಣದ ಸಲಕರಣೆಗಳನ್ನು   ಸೇಕರಿಸಿದ್ದು,   ಇದು   ತಿಳಿದ ನಂತರ ಅವರಿಂದ ರೂ. 5.00 ಲಕ್ಷಗಳನ್ನು ಸಂಘಕ್ಕೆ ದೇಣಿಗೆ   ರೂಪದಲ್ಲಿ   ಪಡೆಯಲಾಗಿದೆ   ಮತ್ತು ಸದರಿಯವರಿಗೆ ಕೂಡಲೇ ಖಾಲಿ ಮಾಡಿಸಲು ತಿಳಿಸಿದೆ. ಷಾ   ಶೇಷಾಜಿ   ಹಸ್ತಿಮಲ್   ಜೈನ್   ಪದವಿ   ಪೂರ್ವ   ಕಾಲೇಜು, ಹರಪನಹಳ್ಳಿ   ಇಲ್ಲಿ   ಸುಸಜ್ಜಿತವಾದ   03 ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದೆ.
 ಹೊಸಪೇಟೆ   ತಾಲೂಕ,   ಕಾಳಘಟ್ಟ   ಗ್ರಾಮದಲ್ಲಿರುವ ಸರ್ವೆ ನಂ. 133ಬಿ ವಿಸ್ತೀರ್ಣ 0.74 ಎಕರೆ ಮತ್ತು ಸರ್ವೆ ನಂ. 134   ಬಿ   ವಿಸ್ತೀರ್ಣ   0.80   ಎಕರೆ   ಜಮೀನನ್ನು   ಹಾಗೂ ಮುದ್ಲಾಪುರ ಗ್ರಾಮದಲ್ಲಿರುವ ಸರ್ವೆ ನಂ. 407 ವಿಸ್ತೀರ್ಣ 0.67 ಎಕರೆ ಮತ್ತು ಸರ್ವೆ ನಂ. 104/1 ವಿಸ್ತೀರ್ಣ 0.65 ಎಕರೆ ಜಮೀನನ್ನು   ಅಧ್ಯಕ್ಷರು,   ವೀರಶೈವ   ವಿದ್ಯಾವರ್ಧಕ ಸಂಘದ   ಹೆಸರಿಗೆ   ಪಹಣಿಯಲ್ಲಿ   ತಿದ್ದುಪಡಿ   ಮಾಡಲು ಇಲಾಖೆಗೆ   ಪತ್ರ   ವ್ಯವಹಾರ   ಮಾಡಲಾಗಿದೆ. ಶೀಘ್ರದಲ್ಲಿಯೇ   ಇಲಾಖೆಯಿಂದ   ಆದೇಶಕ್ಕಾಗಿ ನಿರೀಕ್ಷಿಸಲಾಗಿದೆ.
 ಕೊಟ್ಟೂರುಸ್ವಾಮಿಗಳು 1969 ರಲ್ಲಿ ಕ್ರಯ   ಪತ್ರದ   ಮೂಲಕ   ಹರಗಿನಡೋಣಿ ಗ್ರಾಮದಲ್ಲಿರುವ   ಸರ್ವೆ   ನಂ.   28   ವಿಸ್ತೀರ್ಣ   20.51   ಎಕರೆ ಜಮೀನನ್ನು   ಅಧ್ಯಕ್ಷರು,   ವೀರಶೈವ   ವಿದ್ಯಾವರ್ಧಕ ಸಂಘ,   ಬಳ್ಳಾರಿ   ಇವರ   ಹೆಸರಿಗೆ   ದಾನವಾಗಿ   ನೀಡಿದ್ದು,   ಸದರಿ ಜಮೀನಿನ   ಪಹಣಿಯನ್ನು   ಸಂಘದ   ಹೆಸರಿಗೆ   ಬರಲು ಇಲಾಖೆಗೆ   ಪತ್ರ   ವ್ಯವಹಾರ   ಮಾಡಲಾಗಿದೆ. ಶೀಘ್ರದಲ್ಲಿಯೇ  ಇಲಾಖೆಯಿಂದ   ಆದೇಶಕ್ಕಾಗಿ ನಿರೀಕ್ಷಿಸಲಾಗಿದೆ. ಕೊಟ್ಟೂರೇಶ್ವರ   ಮಹಾವಿದ್ಯಾಲಯ,   ಕೊಟ್ಟೂರು   ಈ ಕಾಲೇಜಿನ   ಸರ್ವೆ   ನಂ.   830   ಎ2   ಪೂರ್ಣ   ವಿಸ್ತೀರ್ಣ   2.60   ಎಕರೆ ಜಮೀನು ಇದ್ದು, 0.55 ಎಕರೆ ಜಮೀನು ಬಳ್ಳಾರಿ ಜಿಲ್ಲೆ ಸ್ಪೆಷಲ್ ಆಫೀಸರ್ ಇವರ ಹೆಸರಿನಲ್ಲಿದ್ದು, ಉಳಿದ 2.05 ಎಕರೆ ಜಮೀನಿನ   ಫಾರಂ   07   ಮತ್ತು   ಮ್ಯುಟೇಷನ್‍ನಲ್ಲಿ ಪ್ರಾಚಾರ್ಯರು,   ಕೊಟ್ಟೂರೇಶ್ವರ   ಮಹಾವಿದ್ಯಾಲಯ, ಕೊಟ್ಟೂರು, ಇವರ ಹೆಸರಿನಲ್ಲಿರುತ್ತದೆ. ಸದರಿ ಜಮೀನಿನ ಪಹಣಿಯನ್ನು   ಸಂಘದ   ಹೆಸರಿಗೆ   ಬರಲು   ಇಲಾಖೆಗೆ ಪತ್ರ   ವ್ಯವಹಾರ   ಮಾಡಲಾಗಿದೆ.   ಶೀಘ್ರದಲ್ಲಿಯೇ ಇಲಾಖೆಯಿಂದ ಆದೇಶಕ್ಕಾಗಿ ನಿರೀಕ್ಷಿಸಲಾಗಿದೆ.10. ವೀ.   ವಿ.   ಸಂಘದ   ಪ್ರೌಢಶಾಲೆ,   ಹರಪನಹಳ್ಳಿ   ಇಲ್ಲಿ ಶಾಲಾ   ಕಟ್ಟಡದ   ಮೊದಲ   ಮಹಡಿಯಲ್ಲಿ   05   ನೂತನ ತರಗತಿ   ಕೊಠಡಿಗಳನ್ನು   ನಿರ್ಮಿಸಲು ಕ್ರಮವಹಿಸಲಾಗಿದೆ.   ಪ್ರಸ್ತುತ   ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದೆ.
ವಿಯನಗರ   ಕಾಲೇಜು,   ಹೊಸಪೇಟೆ   ಇಲ್ಲಿ   ಬಿ.ಬಿ.ಎ., ಬಿ.ಸಿ.ಎ.,   ಮತ್ತು   ಸ್ನಾತಕೋತ್ತರ   ಅನುದಾನರಹಿತ ಕೋರ್ಸುಗಳನ್ನು   ನಡೆಸಲು   ನೂತನ ಕಟ್ಟಡವನ್ನು   ನಿರ್ಮಿಸಲು  ಕ್ರಮವಹಿಸಲಾಗಿದೆ. ಪ್ರಸ್ತುತ ಕಟ್ಟಡದ ಕಾಮಗಾರಿಯು ಪ್ರಗತಿಯಲ್ಲಿದೆ.   ಸಂಘದ   ಕೊಟ್ಟೂರುಸ್ವಾಮಿ   ಶಿಕ್ಷಣ ಮಹಾವಿದ್ಯಾಲಯ,   ಬಳ್ಳಾರಿ   ಈ  ಅನುದಾನಿತ   ಸಂಸ್ಥೆಯನ್ನು ಅನುದಾನರಹಿತ   ಸಂಸ್ಥೆಯಾಗಿ   ಪರಿವರ್ತಿಸಲು   ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನು ಹಿಂದಕ್ಕೆ ಪಡೆದು ಸದರಿ ಸಂಸ್ಥೆಯನ್ನು   ಅನುದಾನಿತ   ಸಂಸ್ಥೆಯಾಗಿಯೇ ಮುಂದುವರಿಸಿಕೊಂಡು   ಹೋಗಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ವಿಜಯನಗರ   ಕಿಂಡರಗಾರ್ಟನ್   ಶಾಲೆ,   ಮುನಿರಾಬಾದ್ ಇಲ್ಲಿ ಕೊರತೆಯಿರುವ 04 ಕೊಠಡಿಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ.   ಅದರಂತೆ   ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದೆ.
ಸಂಘವು   ವಿವಿಧ   ರಾಷ್ಟ್ರೀಕೃತವಲ್ಲದ ಬ್ಯಾಂಕ್‍ಗಳಲ್ಲಿರುವ   ಸ್ಥರ  ಠೇವಣಿಗಳನ್ನು     ಕಾರ್ಯಕಾರಿ   ಸಮಿತಿ ಸಭೆಯಲ್ಲಿ   ನಿರ್ಣಯಿಸಿದಂತೆ   ವಿವಿಧ  ಬ್ಯಾಂಕುಗಳಿಗೆ ವ್ಯವಹರಿಸಿ  ಹಿಂಪಡೆದು   ಉಳಿತಾಯ   ಖಾತೆಯಲ್ಲಿ   ಜಮಾ ಮಾಡಲಾಗಿದೆ.   ಸ್ಥಿರ   ಠೇವಣೆಗಳನ್ನು  ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ   ಠೇವಣಿ   ಹೂಡಲು ಕ್ರಮಜರುಗಿಸಲಾಗಿದೆ.  ವಿವೇಕಾನಂದ   ಪಬ್ಲಿಕ್ ಶಾಲೆ,   ಸಿರುಗುಪ್ಪ   ಈ   ಶಾಲೆಯ   ಬೆಳ್ಳಿ   ಹಬ್ಬ,    ಹರಗಿನಡೋಣಿ   ಬಸವನಗೌಡ   ಸಂ.   ಪದವಿ   ಪೂರ್ವ ಕಾಲೇಜು, ಕಡಿತಿನಿ ಈ ಕಾಲೇಜಿನ ಬೆಳ್ಳಿ ಹಬ್ಬ ಹಾಗೂ  ಜಿ.   ಬಿ.   ಆರ್ ಕಾಲೇಜು,   ಹಡಗಲಿ   ಈ   ಕಾಲೇಜಿನ   ಸುವರ್ಣ ಮಹೋತ್ಸವವನ್ನು ಆಚರಿಸಲಾಗಿದೆಂದು ತಿಳಿಸಿದ್ದಾರೆ.