ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಗೆ ಆಯ್ಕೆ
ಗದಗ,ಮಾ27: ಮಾರ್ಚ 27 ರಿಂದ ಮಾರ್ಚ 30 ರವರೆಗೆ ಉತ್ತರ ಪ್ರದೇಶದ ನೋಯಿಡಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗದಗ ಕ್ರೀಡಾ ವಸತಿ ನಿಲಯದ ಕುಸ್ತಿ ಕ್ರೀಡಾಪಟುಗಳಾದ ಕು. ರಾಹುಲ ವಸಂತ ಸಿದ್ದಮ್ಮನಹಳ್ಳಿ 85 ಕೆಜಿ ವಿಭಾಗದಲ್ಲಿ ಮತ್ತು ಪ್ರವೀಣ ಕೋಳಿವಾಡ 41 ಕೆಜಿ ಗ್ರೀಕೋರೋಮನ್ ವಿಭಾಗದಲ್ಲಿ, ಹಾಗೂ ಫ್ರೀಸ್ಟೈಲ್ ವಿಭಾಗದಲ್ಲಿ ಕು. ಕಾವ್ಯಾ ಜಾಧವ 33 ಕೆಜಿ, ಕು. ಆರೀಫಾ ಕುಕನೂರ 39 ಕೆಜಿ, ಕು. ಸ್ಬೇಹಾ ಬಿನ್ನಾಳ 42 ಕೆಜಿ, ಕು. ವೈಷ್ಣವಿ ಇಮ್ಮಡಿಯವರ 46ಕೆಜಿ, ಕು. ತೇಜಸ್ವಿನಿ ಬಿಂಗಿ, 50 ಕೆಜಿ, ಕು. ರೇಖಾ ವಡ್ಡರ 54 ಕೆಜಿ, ಕು. ಶ್ರೀದೇವಿ ಮಡಿವಾಳರ, 62 ಕೆಜಿ, ಜಾನ್ಹವಿ ಕುರಕೋಡ, 66 ಕೆಜಿ, ಹಾಗೂ ಶ್ವೇತಾ ಬಿನ್ನಾಳ 59ಕೆಜಿ. ವಿಭಾಗದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಗದಗ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ.
ಕುಸ್ತಿ ಕ್ರೀಡಾಪಟುಗಳಿಗೆ ಹಾಗೂ ಕುಸ್ತಿ ತರಬೇತುದಾರರಾದ ವಿನಾಯಕ ಯಂಕಂಚಿಯವರಿಗೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣು ಗೋಗೇರಿ ಅವರು ಅಭಿನಂದನೆ ಸಲ್ಲಿಸಿರುತ್ತಾರೆ.