ವಡಗಾಂವ (ಡಿ) : ರಣಗಂಬ ಉತ್ಸವ
ಸಂಜೆವಾಣಿ ವಾರ್ತೆ
ಔರಾದ :ಮಾ.27: ತಾಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿದ ವಡಗಾಂವ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ರಣಗಂಬ ಉತ್ಸವ ಜಾತ್ರೆ ಗ್ರಾಮಸ್ಥರು ಸಡಗರ ಸಂಭ್ರಮದಿಂದ ಆಚರಿಸಿದರು.
ಗ್ರಾಮದ ಪುರಾತನ ಕೋಟೆಯ ಬಳಿ ಸುಮಾರು 30 ಮೀಟರ್ ಉದ್ದದ ರಣಗಂಬಕ್ಕೆ ಸೀರೆಯನ್ನು ಸುತ್ತಿ ಹೂವುಗಳಿಂದ ಅಲಂಕಾರ ಮಾಡಲಾಗುತ್ತದೆ ನಂತರ ಗ್ರಾಮದ ಮಹಿಳೆಯರು ಊಡಿ ತುಂಬಿ, ಕಾಯಿ ಒಡೆದು ಪೂಜೆ ಸಲ್ಲಿಸುತ್ತಾರೆ. ರಣಗಂಬ ಉತ್ಸವ ಪ್ರಯುಕ್ತ ಗ್ರಾಮದಲ್ಲಿ ಸಡಗರ ಸಂಭ್ರಮ ಹಬ್ಬದ ವಾತಾವರಣ ಮನೆ ಮಾಡಿತ್ತು.
ಪ್ರತಿ ವರ್ಷ ನಡೆಯುವ ರಣಗಂಬ ಉತ್ಸವ ಕಣ್ತುಂಬಿಕೊಳ್ಳಲು ನೆರೆಯ ಮಹಾರಾಷ್ಟ್ರ,ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ಕಡೆಯಿಂದ ಭಕ್ತರು ರಣಗಂಬ ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ, ಪ್ರತಿ ವರ್ಷ ಹೋಳಿ ಹಬ್ಬದ ಮಾರನೇ ದಿನ ಈ ಉತ್ಸವ ನಡೆಯುತ್ತದೆ. ಸುಮಾರು ತಲೆಮಾರುಗಳಿಂದ ಉತ್ಸವ ನಡೆದುಕೊಂಡು ಬರುತ್ತಿರುವುದು ವಿಶೇಷತೆ ಹೊಂದಿದೆ.
ಈ ವೇಳೆ ಬಸವರಾಜ ದೇಶಮುಖ, ಶರಣಬಸಪ್ಪ ದೇಶಮುಖ, ಡಾ. ಉಮಾ ದೇಶಮುಖ, ಸುರೇಖಾ ಬಾಯಿ ದೇಶಮುಖ, ಡಾ.ಅಲ್ಲಮ ಪ್ರಭು ದೇಶಮುಖ, ಡಾ. ಮಲ್ಲಿಕಾರ್ಜುನ್ ದೇಶಮುಖ, ಕುಮಾರ ದೇಶಮುಖ, ಜಗನ್ನಾಥ್ ಪಟ್ನೆ, ಶಿವರಾಜ್ ಬುಣಗೆ, ಶಂಕ್ರಪ್ಪ ಧರ್ಮಜೆ, ಸಿದ್ದಯ್ಯ ಸ್ವಾಮಿ, ಶರಣಪ್ಪ ಖಳ್ಳುರೆ, ಶಂಕ್ರಯ್ಯ ಗುಮ್ಮೆ, ನಾಗನಾಥ ಕೌಟಗೆ, ವಿಶ್ವನಾಥ್ ಬುಣಗೆ,ವಿಶ್ವನಾಥ್ ಹಂಗರಗೆ, ಕಾಶಿನಾಥ್ ಉಪ್ಪಾರ್, ಮಲ್ಲಪ್ಪ ನೇಳೆಗೆ, ಹಣಮಂತ ನೇಳಗೆ, ಶರಣಪ್ಪ ಬುಶೆಟ್ಟೆ, ರತಿಕಾಂತ ನೇಳೆಗೆ, ಸೂರ್ಯಕಾಂತ್ ಕೂಡಗೆ, ಬಸವರಾಜ ಅಗಶೆ, ಶೆಶಿಕುಮಾರ ಹೌಶೆಟ್ಟೆ, ಓಂಕಾರ್ ಮೇತ್ರೆ, ನಾಗೇಶ್ ವೀರಬಶೆಟ್ಟೆ, ಅಶೋಕ ಅಡಿಕೆ, ರವಿ ಮಠಪತಿ, ನವೀಲಕುಮಾರ ಉತ್ಕಾರ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
ರಣಗಂಬ ಉತ್ಸವದ ಇತಿಹಾಸ
ಪರಂಪರಾಗತವಾಗಿ ಈ ಉತ್ಸವವನ್ನು ಆಚರಿಸುಕೊಂಡು ಬರಲಾಗುತ್ತಿದ್ದು ಅದಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ದೇಶಮುಖರೆಂಬ ಪಾಳೆಗಾರರು ವಡಗಾಂವ ನಲ್ಲಿ ಆಳ್ವಿಕೆ ನಡೆಸುತ್ತಿದ್ದರು ಎಂಬ ಪ್ರತಿತಿ ಇದ್ದು ಅವರು ವಿರೋಧಿ ಪಡೆಯ ಸೈನ್ಯವನ್ನು ಯುದ್ಧದಲ್ಲಿ ಸೋಲಿಸಿದ ಸವಿನೆನಪಿಗಾಗಿ ಬೃಹತ್ ಗಾತ್ರದ ಕಟ್ಟಿಗೆಯ ದಿಮ್ಮಿಯನ್ನು ದೇಶಮುಖರ ಕೋಟೆಯ (ಸ್ಥಳೀಯವಾದ ಗಡಿ) ಮುಂಭಾಗದ ಆವರಣದಲ್ಲಿ ಮೇಲಕ್ಕೆ ಎತ್ತಿ ನಿಲ್ಲಿಸಿ ವಿಜಯೋತ್ಸವ ಆಚರಿಸುವುದೆ ಈ ರಣಗಂಬ ಉತ್ಸವ.