ಬಳೂತಿ ಗ್ರಾಮದಲ್ಲಿ ಸಂಭ್ರಮದಿಂದ ಹೋಳಿ ಆಚರಣೆ
ಕೊಲ್ಹಾರ: ಮಾ.27:ಭಾವೈಕ್ಯತೆಯ ತಾಣವಾಗಿರುವ ಬಳೂತಿ ಗ್ರಾಮದಲ್ಲಿ ಕೇಸರಿ ಪಡೆಯ ಯುವಕರು ಹಮ್ಮಿಕೊಂಡಿರುವ ಹೋಳಿ ಹಬ್ಬವನ್ನು ರಿಬ್ಬನ್ ಕಟ್ ಮಾಡುವ ಮುಖಾಂತರ ಹೋಳಿ ಹಬ್ಬವನ್ನು ಅತ್ಯಂತ ಸಡಗರ,ಸಂಭ್ರಮದಿಂದ ಪರಸ್ಪರ ಬಣ್ಣ ಎರಚುವ ಮೂಲಕ ಸಂಭ್ರಮಿಸಿದರು.
ವಿಶೇಷವಾಗಿ ವಯಸ್ಸಿನ ಅಂತರವಿಲ್ಲದೆ, ದೊಡ್ಡವರಿಂದ ಹಿಡಿದು ಸಣ್ಣವರವರೆಗೂ ಸಂಭ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ದುಂಡಪ್ಪ ಬನಗೊಂಡ ಶಂಕ್ರಯ್ಯ ಚಿಕ್ಕಮಠ ಗ್ಯಾನುಭ ಚಿಚ್ಗಂಡಿ ಜಗದೀಶ ಸುನಗದ ನಂದಬಸಪ್ಪ ಚೌದ್ರಿ ದುಂಡಪ್ಪ ಜಂಗಣಿ ಸಂಗಪ್ಪ ಮಾಳೆದ ಬಸವರಾಜ್ ಚೌದ್ರಿ ಶ್ರೀಶೈಲ್ ಗಾಮನನವರ ಚಂದ್ರಶೇಖರ ಹೆಬ್ಬಿ ರಾವತಪ್ಪ ಮತ್ತಿಹಾಳ ರಾಯಪ್ಪ ಔರಂಸಂಗ ಶಿವಾನಂದ ಮತ್ತಿಹಾಳ ಹಾಗೂ ಗ್ರಾಮದ ಯುವಕರು ಸಹಿತ ಅನೇಕರು ಉಪಸ್ಥಿತರಿದ್ದರು
