ಗ್ರಾಮದ ಕಲ್ಯಾಣಿ ಸ್ವಚ್ಛತೆ
ವಿಜಯಪುರ.ಮಾ೨೭: ಪಟ್ಟಣ ಸಮೀಪದಲ್ಲಿರುವ ದಿನ್ನೂರು ಗ್ರಾಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಹಾಗೂ ಜೆ.ಸಿ.ಐ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಶುದ್ಧ ಗಂಗಾಜಲ ಕಾರ್ಯಕ್ರಮದ ಅಡಿಯಲ್ಲಿ ಗ್ರಾಮದಲ್ಲಿರುವ ಕಲ್ಯಾಣಿ ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ಭಾನುವಾರದಂದು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸೀನಿಯರ್ ವೆಂಕಟೇಶ್ ಮಾತನಾಡುತ್ತಾ ನಮ್ಮ ಸಂಸ್ಥೆಯ ರಾಷ್ಟ್ರೀಯ “ಸ್ವಚ್ಛ ಗಂಗಾ” ಕಾರ್ಯ ಯೋಜನೆ ಅಡಿಯಲ್ಲಿ ಕಲ್ಯಾಣಿ ಸ್ವಚ್ಛಗೊಳಿಸಿದ್ದರೆ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗುತ್ತದೆ . ನೀರಿನ ಸ್ವಚ್ಛತೆಯನ್ನು ಕಾಪಾಡಿದರೆ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದ್ದರಿಂದ ನಾಗರಿಕರು ಪರಿಸರವನ್ನು ಉತ್ತಮಗೊಳಿಸಿದರೆ ಗ್ರಾಮವು ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾಕ್ಟರ್ ಎಂ ಶಿವಕುಮಾರ್, ರಾಷ್ಟ್ರೀಯ ಸಂಯೋಜಕರಾದ ಎನ್ ಜಯರಾಮ್, ನಿಕಟಪೂರ್ವ ಅಧ್ಯಕ್ಷರಾದ ವಿ ವೆಂಕಟೇಶ್, ಜೆ.ಸಿ.ಐ ಅಧ್ಯಕ್ಷರಾದ ಭೈರೇಗೌಡ, ಜನಾರ್ದನ್ ಎಸ್‌ಎಂಎ ನಿರ್ದೇಶಕರಾದ ಮುನಿಕೃಷ್ಣ, ವಸಂತ್ ಕುಮಾರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.