ವೈಭವದ ಕಾಶಿ ವಿಶ್ವನಾಥೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ
ಆನೇಕಲ್.ಮಾ.೨೭:ದೊಮ್ಮಸಂದ್ರ ಗ್ರಾಮದಲ್ಲಿ ಅಪಾರ ಭಕ್ತರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಡಗರ ಸಂಭ್ರಮದಿ೦ದ ಶ್ರೀ ಕಾಶಿ ವಿಶ್ವನಾಥೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ಶ್ರೀ ಗಣಪತಿ, ಶ್ರೀ.ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮ ರಥೋತ್ಸವ ನಡೆಯಿತು,
ಇನ್ನು ಶ್ರೀ ಕಾಶಿ ವಿಶ್ವನಾಥೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅಂಗವಾಗಿ ವೀರಗಾಸೆ, ಡೊಳ್ಳು ಕುಣಿತ, ತಮಟೆ ವಾದ್ಯ ಮತ್ತು ವಿವಿಧ ಕಲಾ ತಂಡಗಳೊ೦ದಿಗೆ ರಥವು ದೊಮ್ಮಸಂದ್ರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಸಾಗುತ್ತಿದ್ದಂತೆ ಭಕ್ತರು ರಥದ ಮೇಲೆ ಬಾಳೆ ಹಣ್ಣು ಎಸೆದು ತಮ್ಮ ಭಕ್ತಿಯನ್ನು ಸಮರ್ಪಿಸಿದ ದೃಶ್ಯಗಳು ಕಂಡು ಬಂತು,
ವಿಶೇಷವಾಗಿ ಮಹಿಳೆಯರು ಕೂಡ ರಥವನ್ನು ಎಳೆದದ್ದು ವಿಶೇಷವಾಗಿತ್ತು. ಇನ್ನು ರಸ್ತೆ ಉದ್ದಕ್ಕೂ ಅರವಂಟಿಕೆ. ಅನ್ನದಾಸೋಹ, ಹಣ್ಣು ಹಂಪಲುಗಳನ್ನು ಭಕ್ತರಿಗೆ ಉಚಿತವಾಗಿ ನೀಡಲಾಯಿತು.
ಸ್ವಾಮಿಯ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಅನ್ನದಾಸೋಹ ಆಯೋಜನೆ ಮಾಡಲಾಗಿತ್ತು.
ಬ್ರಹ್ಮರಥೋತ್ಸವದಲ್ಲಿ ಜನಪ್ರತಿನಿಧಿಗಳು, ಭಕ್ತರು ಹಾಗೂ ದೊಮ್ಮಸಂದ್ರ ಗ್ರಾಮಸ್ಥರು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆಗಳ ನಡೆಯದ ರೀತಿಯಲ್ಲಿ ಸರ್ಜಾಪುರ ಪೋಲಿಸ್ ಠಾಣೆ ಪೋಲಿಸರು ಬಿಗಿ ಬಂದೋಬಸ್ತು ಮಾಡಲಾಗಿತ್ತು.