ಮತದಾನ ಬಹಿಷ್ಕಾರ ಹಿಂತೆಗೆದ ಗ್ರಾಮಸ್ಥರು
ಗದಗ,ಮಾ.27: ಸಮಿಪದ ತಿಮ್ಮಾಪೂರ ಗ್ರಾಮದಲ್ಲಿ ಗ್ರಾಮದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೋಕಸಭಾ ಚುನಾವಣೆ ಬಹಿಷ್ಕಾರ ಮಾಡಲು ನಿರ್ಧರಿಸಿದ್ದ ಗ್ರಾಮಸ್ಥರನ್ನು ಗದಗ ಹಾಗೂ ರೋಣ ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ, ಕಾರ್ಯಪಾಲಕ ಅಭಿಯಂತರರ, ಪೆÇಲೀಸ್ ಇಲಾಖೆಯ ತಂಡವು ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು – ಉಪಾಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸಿದರು.
ಸಾರ್ವಜನಿಕರ ದೂರಿನನ್ವಯ ತಿಮ್ಮಾಪೂರ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಅನುಷ್ಠಾನಗೊಳ್ಳದೆ / ಅನುಷ್ಠಾನಗೊಂಡು ಪೂರ್ಣಗೊಳ್ಳದೆ ಇರುವ ಕಾಮಗಾರಿಗಳಾದ ತಿಮ್ಮಾಪೂರ ಗ್ರಾಮದಿಂದ ಕೋಟುಮಚಿಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ, ಕಾಣೆಹಳ್ಳಕ್ಕೆ ಮೇಲು ಸೇತುವೆ ನಿರ್ಮಾಣ ಮಾಡುವುದು, ತಿಮ್ಮಾಪೂರ ಗ್ರಾಮದಿಂದ ಸೋಂಪೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣ, ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡುವುದು, ನೂತನ ರಾಷ್ಟ್ರೀಕೃತ ಬ್ಯಾಂಕ್ ಶಾಖೆ ತೆರೆಯುವದು, ಕುಡಿಯುವ ನೀರಿನ ಯೋಜನೆಯಾದ ಜಿಜಿಎಂ ಕಾಮಗಾರಿಯಿಂದ ರಸ್ತೆ
ದುರಸ್ತಿ, ನೀರು ಪೂರೈಕೆ ಮಾಡುವುದು, ಮಹಿಳೆಯರಿಗೆ
2 ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡುವುದು ಹರ್ಲಾಪೂರ ಹಾಗೂ ಹಳ್ಳಿಗುಡಿ ರಸ್ತೆ ಡಾಂಬರೀಕರಣ ಮಾಡುವುದು, ರೈತರು ತಮ್ಮ ಕೃಷಿ ಜಮೀನುಗಳಿಗೆ ಹೋಗುವ ದಾರಿಯನ್ನು ದುರಸ್ತಿ ಮಾಡುವ ಕುರಿತಾಗಿ ಸಂಬಂಧಿಸಿದ ಇಲಾಖೆಗಳೊಂದಿಗೆ ಮತ್ತೊಂದು ಸುತ್ತಿನ ತುರ್ತು ಸಭೆ ಆಯೋಜಿಸಿ ಕ್ರಮವಹಿಸಲಾಗುವುದೆಂದು ತಿಳಿಸಿದರು ಹಾಗೂ ಶೀಘ್ರವೇ ಗ್ರಾಮದಲ್ಲಿನ ನೀರು ಹಾಗೂ ನೈರ್ಮಲ್ಯ ಸಂಬಂಧಿತ ಕೆಲಸಗಳನ್ನು ತುರ್ತಾಗಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗುವದು ಎಂದು ಸೂಚಿಸಿದರು.