ಎ. 12 ರಂದು ಕೆ.ಎಸ್.ಈಶ್ವರಪ್ಪ ಅವರಿಂದ ನಾಮಪತ್ರ ಸಲ್ಲಿಕೆ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಮಾ.25: ಈಶ್ವರಪ್ಪ ಅವರಿಗೆ ಅನ್ಯಾಯ ಆಗಿದೆ. ಯಡಿಯೂರಪ್ಪ ಅನ್ಯಾಯ ಮಾಡಿದ್ದಾರೆ. ಅನ್ಯಾಯಕ್ಕೆ ಉತ್ತರ ಕೊಡ್ತೀವಿ ಎಂದು ಜನರೇ ಹೇಳುತ್ತಿದ್ದಾತೆಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.ನಗರದಲ್ಲಿ  ಇಂದು ಬೂತ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ವಿಧಾನಸಭೆ ಕ್ಷೇತ್ರಕ್ಕೂ ಭೇಟಿ ನೀಡಿದ್ದೇನೆ. ಎಲ್ಲಾ ಕಡೆಗಳಲ್ಲಿಯು ದೆಹಲಿಯಿಂದ ಫೋನ್‌ ಬಂದಿತ್ತುನಾನು ಚುನಾವಣೆಗೆ ಸ್ಪರ್ಧೆ ಮಾಡ್ತೀನಿ ಅಂದ ಮೇಲೆ ಪೋನ್ ಬರುತ್ತಿದೆ. ದೆಹಲಿಯಿಂದ ತಮ್ಮ ಮಗನಿಗೆ ಫೋನ್‌ ಬಂದಿದೆ ಚುನಾವಣೆಗೆ ನಿಲ್ಲಬೇಡಿ ಎಂದು ಹೇಳಿದ್ದಾರೆ. ಯಾರು ಏನೇ ಹೇಳಿದರೂ ಈ ಭಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದಿದ್ದಾರೆ. 12 ರಂದು  ನಾಮಪತ್ರ ಸಲ್ಲಿಕೆಕಾಂಗ್ರೆಸ್‌ ಪಕ್ಷ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದೆ. ಆದರೆ ನಾನು ಈ ಬಾರಿ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದಿರುವ ಈಶ್ವರಪ್ಪ ಇದೇ 12 ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ. ಸಚಿವ ಶಿವರಾಜ್ ತಂಗಡಗಿ ಅಯೋಗ್ಯ, ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕ, ಈಡಿ ದೇಶದ ಜನ ಮೋದಿ ಮೋದಿ ಅಂತಿದ್ದಾರೆ. ಶಿವರಾಜ್ ತಂಗಡಗಿ ರಾಜೀನಾಮೆ ಕೊಡಲಿ. ಮುಖ್ಯಮಂತ್ರಿ ಸಿದ್ದರಾಮಯ್ಯ ತಂಗಡಗಿಯನ್ನು ಕಿತ್ತು ಬಿಸಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಡೀ ಲೋಕಸಭಾ ಕ್ಷೇತ್ರದಲ್ಲಿ ರಾಘವೇಂದ್ರ ವಿರುದ್ಧ ಆಕ್ರೋಶ ವ್ಯಕ್ತ ಆಗಿದೆ. ಸಾಮಾನ್ಯ ಜನ ತಿರ್ಮಾನ ಮಾಡಿದ್ದಾರೆ ನನ್ನನ್ನು ಗೆಲ್ಲಿಸುತ್ತೇನೆ ಎಂದು. ನಾನು ಗೆದ್ದು ನಿಮ್ಮ ಋಣ ತೀರಿಸುತ್ತೇನೆ. ಶಿಕಾರಿಪುರದ ಜನರೇ ನನಗೆ ಹೇಳಿದ್ದು ಹೆಚ್ಚಿನ ಬಹುಮತವನ್ನು ಆ ಕ್ಷೇತ್ರದಿಂದ ನೀಡುವುದಾಗಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ವರುಣ,ಶಿಕಾರಿಪುರ ಹೊಂದಾಣಿಕೆ ಆಯ್ತು. ಈಗ ಕಾಂಗ್ರೆಸ್ ನಲ್ಲಿ ಶಕ್ತಿ ಇಲ್ಲದ ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡು ಬಂದಿದ್ದಾರೆ. ಗಂಡಸುತನ ಇರೋ ವ್ಯಕ್ತಿ ಜೊತೆ ಮಧು ಬಂಗಾರಪ್ಪ ಹೊಂದಾಣಿಕೆ ಮಾಡಿಕೊಂಡರೆ ನಾನು ಎಲ್ಲಿಂದ ಟಿಕೆಟ್ ತರಲಿ? ಚುನಾವಣೆಯಲ್ಲಿ ಗೆದ್ದು ಗಂಡಸ್ತನ ತೋರಿಸಿಬೇಕು ಕನಿಷ್ಠ 25 ಸಾವಿರ ಜನರ ಬೆಂಬಲದೊಂದಿಗೆ 12 ನೇ ತಾರೀಖು ನಾಮಪತ್ರ ಸಲ್ಲಿಸುತ್ತೇನೆ, ಬ್ರಹ್ಮ ಬಂದ್ರೂ ಚುನಾವಣೆಯಲ್ಲಿ ನಾನು ನಿಲ್ಲುವವನೇ. ಹಿಂದುತ್ವದ ಜಯಕ್ಕಾಗಿ 12ನೇ ತಾರೀಖು ದೊಡ್ಡ ಸಂಖ್ಯೆಯಲ್ಲಿ ಜನ ಬರಬೇಕು. ನನ್ನ ಜೊತೆ ಬರುವರು ಸ್ವಾಭಿಮಾನಿಗಳು. ಅವರ ಜೊತೆ ಹೋಗುವವರು ಕೂಲಿ ಕಾರ್ಮಿಕರು. 12 ನೇ ತಾರೀಖು ಶಕ್ತಿ ಪ್ರದರ್ಶನ ಮಾಡೋಣ ಎಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಹಾಳಾಗುತ್ತಿದೆ .ಪಕ್ಷ ಕಟ್ಟಿದವರಿಗೆ ನೋವಾಗಿದೆ ಅದನ್ನು ಸರಿ ಮಾಡಲು ಸ್ಪರ್ಧೆ ಮಾಡುತ್ತಿದ್ದೇನೆ. ನೀವು ಮನೆಗೆ ಹೋದಾಗ ನಿಮಗೆ ಪೋನ್ ಬರಬಹುದು. ಬೇರೇ ಬೇರೆ ರೂಪದ ಭಯಗಳು ನಿಮಗೆ ಬರಬಹುದು .ಹೆದರಿಕೊಂಡು ಕೆಲವರು ಮನೆಯಲ್ಲಿ ಇದ್ದಾರೆ ಎಂದರು.