ಅರ್ಥಪೂರ್ಣ, ಸಮಾಜಮುಖಿ ಕಾರ್ಯಗಳು ಜರುಗಲಿ
ಕಲಬುರಗಿ:ಮಾ.26: ಯಾವ ವ್ಯಕ್ತಿ ತನ್ನ ಕುಟುಂಬದ ಏಳ್ಗೆಯ ಜೊತೆ ಸಮಾಜದ ಹಿತಕ್ಕಾಗಿ ಶ್ರಮಿಸುತ್ತಾನೆಯೋ, ಅಂತಹ ವ್ಯಕ್ತಿ ನಿಜವಾಗಿಯೂ ದೊಡ್ಡ ವ್ಯಕಿತ್ವ ಹೊಂದಿರುತ್ತಾನೆ. ಸಮಾಜ ಸೇವಕರಿಗೆ ಪ್ರೋತ್ಸಾಹ ನೀಡಿದರೆ ಅವರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಲು ಸಾಧ್ಯವಾಗುತ್ತದೆ. ಸಮಾಜಮುಖಿ ಕಾರ್ಯಗಳಿಂದ ಆತ್ಮತೃಪ್ತಿ ಸಾಧ್ಯವಿದೆ ಎಂದು ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಬಾಳ್ಳಿ ಹೇಳಿದರು.
ಸಮಾಜ ಸೇವಕ ಎಚ್.ಬಿ.ಪಾಟೀಲ ಅವರ ಸುಪುತ್ರಿ ಬಸವಶ್ರೀಯ ಐದನೇ ವರ್ಷದ ಜನ್ಮದಿನದ ಪ್ರಯುಕ್ತ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ನಗರದ ರಾಮತೀರ್ಥ ಸಮೀಪದಲ್ಲಿರುವ ಕೊಳಗೇರಿ ಪ್ರದೇಶದ ಮಕ್ಕಳಿಗೆ ಬಟ್ಟೆ ವಿತರಿಸಿ ಅವರು ಮಾತನಾಡುತ್ತಿದ್ದರು.
ಸಮಾಜ ಸೇವಕ ಅಸ್ಲಾಂ ಶೇಖ್ ಮಾತನಾಡಿ, ನಾವು ಮಾಡುವ ಯಾವುದೇ ಆಚರಣೆ ಆಡಂಬರ, ದುಂದು ವೆಚ್ಚದಿಂದ ಕೂಡಿದರೆ ಪ್ರಯೋಜನೆಯಿಲ್ಲ. ಬದಲಿಗೆ ಆಚರಣೆ ಸಮಾಜಮುಖಿಯಾಗಿರಬೇಕು. ಜನ್ಮದಿನದ ನಿಮಿತ್ಯ ಬಡ ಮಕ್ಕಳಿಗೆ ಬಟ್ಟೆಯನ್ನು ನೀಡುವ ಕಾರ್ಯ ಸಮಾಜಮುಖಿ, ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ,ಅಂಬರೀಶ್, ಮೆಹಬೂಬ್ ಸೇರಿದಂತೆ ಮತ್ತಿತರರಿದ್ದರು.