ಕಲ್ಮಿನರಿ ಒಲಿಂಪಿಕ್ಸ್: ಚೆನ್ನೈ ವಿದ್ಯಾರ್ಥಿಗಳ ಐತಿಹಾಸಿಕ ಸಾಧನೆ
ಬೆಂಗಳೂರು :ಮಾ ೨೬- ಇತ್ತೀಚಿಗೆ, ಜರ್ಮನಿಯಲ್ಲಿ ನಡೆದ ಕಲ್ಮಿನರಿ ಒಲಿಂಪಿಕ್ಸ್ ನಲ್ಲಿ ಚೆನ್ನೈಯಸ್ ಅಮೃತ ಹೋಟೆಲ್ ಮ್ಯಾನೇಜ್ಮೆಂಟ್
ನ ಬೆಂಗಳೂರು ಕ್ಯಾಂಪಸ್ ನ ವಿದ್ಯಾರ್ಥಿಗಳು ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. ಕಳೆದ ೧೨೪ ವರ್ಷಗಳ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಭಾರತ ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದು, ಈ ಮೂಲಕ ಕಾಲೇಜಿನ ವಿದ್ಯಾರ್ಥಿಗಳು ಭಾರತದ ಕೀರ್ತಿಪತಾಕೆಯನ್ನು ಜಗದಗಲ ಪ್ರಚುರ ಪಡಿಸಿದ್ದಾರೆ. ಬೆಂಗಳೂರು ಕ್ಯಾಂಪಸ್‌ನ ಚೆಫ್ ಪುನಿತ್ ಜೋಕಪ್ಪ ತಲಾ ೧ ಚಿನ್ನ ಮತ್ತು ೧ ಬೆಳ್ಳಿ ಪದಕ ಮತ್ತು ಚೆಫ್ ಅಂಕಿತ್ ಕಾಂತರಾಜು ಶೆಟ್ಟಿ ಮತ್ತು ಚೆಫ್ ಆಕಾಶ್ ಜಾರ್ಜ್ ಮುಳಂಕುಜಿಯಿಲ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಉಳಿದಂತೆ ಕಾಲೇಜು ವಿದ್ಯಾರ್ಥಿಗಳಾದ ಚೆಫ್ ಶ್ರೇಯ ಅನೀಶ್ (ಒಂದು ಚಿನ್ನ-೨ ಬೆಳ್ಳಿ), ಚೆಫ್ ಜಗನ್ ಶರವಣ ಕೂಡಾ ಹೆಮ್ಮೆಯ ಸಾಧನೆ ಮಾಡಿದ್ದಾರೆ.
ಕೇಂದ್ರ ಪ್ರವಾಸೋದ್ಯಮ ಸಚಿವ, ಶ್ರೀ ಕಿಶನ್ ರೆಡ್ಡಿ ಅವರು ಈ ಪದಕ ವಿಜೇತರನ್ನು ಸನ್ಮಾನಿಸಿದರು.
ಸಂಸ್ಥೆಯ ಅಧ್ಯಕ್ಷ ಶ್ರೀ ಭೂಮಿನಾಥನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.