20 ನೇ ರಾಷ್ಟ್ರಮಟ್ಟದ ಮೌಂಟಿನ್ ಬೈಕ್ ಚಾಂಪಿಯನ್ ಶಿಪ್ ಗೆ ಪಯಣ

ಸಂಜೆವಾಣಿ ವಾರ್ತೆ
ಹುಬ್ಬಳ್ಳಿ. ಮಾ.26;ಹರಿಯಾಣಾದ ಪಂಚಕೋಲಾದಲ್ಲಿ ಮಾ.28 ರಿಂದ 31 ರ ವರೆಗೆ ನಡೆಯುತ್ತಿರುವ 20 ನೇ ರಾಷ್ಟ್ರಮಟ್ಟದ ಮೌಂಟಿನ್ ಬೈಕ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಅಮೇಚ್ಯೂರ್ ಸೈಕ್ಲಿಂಗ್ ಅಷೋಷಿಯೇಷನ್ ರಾಜ್ಯ ತಂಡದಿಂದ ಭಾಗವಹಿಸಲು  ಸೈಕ್ಲಿಸ್ಟಗಳಾದ ಹನುಮಂತ ಮರನೂರ , ದಾನೇಶ ತೇಲಿ, ನಿತೀನ ಸರಾವರಿ, ಆರ್ತಿ ಭಾಟಿ, ಪೂರ್ವಿ ಸಿದ್ಧವಗೋಳ, ಅಕ್ಷತಾ  ಬಿರಾದಾರ, ಹಿರಿಯ ಸೈಕ್ಲಿಸ್ಟ್ ಶ್ರೀ ದುಂಡಪ್ಪ ಹಾಗೂ ತಂಡದ ಮ್ಯಾನೇಜರ್ ಶ್ರೀ ಸತ್ಯಪ್ಪ ಅವರನ್ನೊಳಗೊಂಡ ತಂಡ ನಿನ್ನೆ ಹುಬ್ಬಳ್ಳಿಯಿಂದ ಚಂಡಿಗಡಕ್ಕೆ ಪ್ರಯಾಣ ಬೆಳೆಸಿತು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಮೇಚ್ಯೂರ್ ಸೈಕ್ಲಿಂಗ್ ಅಷೋಷಿಯೇಷನ್ ನ ಜಂಟಿ ಕಾರ್ಯದರ್ಶಿ ಹಾಗೂ ಧಾರವಾಡ ಜಿಲ್ಲಾ ಅಮೇಚ್ಯೂರ್ ಸೈಕ್ಲಿಂಗ್ ಅಷೋಷಿಯೇಷನ್  ಉಪಾಧ್ಯಕ್ಷರಾದ  ದಿನೇಶ ಜೈನ್ ಅವರು ತಂಡಕ್ಕೆ ಶುಭ ಕೋರಿ ಶುಭ ಹಾರೈಸಿದರು.