ಹಮ್ ಫೌಂಡೇಶನ್ ನಿಂದ ಮಹಿಳಾ ದಿನಾಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ: ಹಮ್ ಫೌಂಡೇಶನ್ ಭಾರತ್ ದೇವನಗರಿ ಶಾಖೆ ವತಿಯಿಂದ ಮಹಿಳಾ ದಿನಾಚರಣೆ ಹಾಗೂ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ನಗರದ ಶ್ರೀ ಸದ್ಯೋಜಾತ ಹಿರೇಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.ಸಭೆಯ ಅಧ್ಯಕ್ಷತೆಯನ್ನು ಫೌಂಡೇಶನ್ ನ ಅಧ್ಯಕ್ಷೆ ಸುಮಾ ಸದಾನಂದ್ ವಹಿಸಿದ್ದು, ವಲಯ ಸಂಚಾಲಕರಾದ ಡಾ. ಆರತಿ ಸುಂದರೇಶ್, ಉಪಾಧ್ಯಕ್ಷೆ ಹೇಮಾ ರುದ್ರಮುನಿಸ್ವಾಮಿ,  ನಳಿನಿ ಅಚ್ಯುತ್, ಕಾರ್ಯದರ್ಶಿ ಚಂದನ ವಿಜಯಕುಮಾರ್, ಖಜಾಂಚಿ ಚೇತನ ಚಿದಂಬರ್ ಉಪಸ್ಥಿತರಿದ್ದರು.ಫೌಂಡೇಶನ್ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಚಂದನ ವಿಜಯಕುಮಾರ್ ವಾಚಿಸಿದರು. ಖಜಾಂಚಿ ಚೇತನ ಚಿದಂಬರ್ ಲೆಕ್ಕಪತ್ರ ಮಂಡನೆ ಮಾಡಿದರು. ಇದೇ ವೇಳೆ ಸಂಘದ ಕ್ರಿಯಾಶೀಲ ಸದಸ್ಯರಾಗಿರುವ ವನಜಾಕ್ಷಮ್ಮನವರಿಗೆ ಬೀಳ್ಕೊಡುಗೆ ನೀಡಿ, ಗೌರವಿಸಲಾಯಿತು. ವನಜಾಕ್ಷಮ್ಮನವರ ಕಿರು ಪರಿಚಯವನ್ನು ನೀಲಮ್ಮ ಬೆಳ್ಳುಳ್ಳಿ ಮಾಡಿಕೊಟ್ಟರು.ಮಹಿಳಾ ದಿನಾಚರಣೆ ನಿಮಿತ್ತ ಸದಸ್ಯೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅದೃಷ್ಟ ಮಹಿಳೆಗೆ ವಿಶೇಷ  ಬಹುಮಾನ ವಿತರಿಸಲಾಯಿತು. ವಿಜಯ ಹಿರೇಮಠ್ ಗಾಯನ ಕಾರ್ಯಕ್ರಮ ನೀಡಿದರು. ಕೊನೆಯಲ್ಲಿ ಎಲ್ಲರಿಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.ಆರಂಭದಲ್ಲಿ ವನಜಾಕ್ಷಮ್ಮ ಪ್ರಾರ್ಥಿಸಿದರು. ದೇವಿಕ ಸುನೀಲ್ ಸ್ವಾಗತಿಸಿದರು. ಸರಳ ಶಾಂತಿನಾಥ್ ಅಚ್ಚುಕಟ್ಟಾಗಿ ನಿರೂಪಿಸಿದರು.ಹಂಸ ನಿಜಗುಣ ವಂದಿಸಿದರು.