ಮಹಿಳಾ ಮಂಡಳಿಯಿಂದ ಹೋಲಿ ಆಚರಣೆ

ಸಂಜೆವಾಣಿ ವಾರ್ತೆ
ಹಿರಿಯೂರು  : ಮಾ. .26-ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಮಹಿಳಾ ಮಂಡಳಿಯ ವತಿಯಿಂದ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು. ಬಣ್ಣಗಳ ಹಬ್ಬ ಹೋಲಿಯ ಅಂಗವಾಗಿ ಎಲ್ಲರ ಮನದಲ್ಲಿ ಸಂತಸ ಮನೆ ಮಾಡಿತ್ತು.  ಅಂಗಳದಲ್ಲಿ ರಂಗೋಲಿಗಳನ್ನು ಬಿಡಿಸಿ ಪರಸ್ಪರ ಒಬ್ಬರಿಗೊಬ್ಬರು ವಿವಿಧ ಬಣ್ಣಗಳನ್ನು ಹಚ್ಚಿ ಕುಣಿದಾಡಿದರು.