ಯೋಗಿ ನಾರಾಯಣ ಜಯಂತಿ

ಸಂಜೆವಾಣಿ ವಾರ್ತೆ
ಹಿರಿಯೂರು.ಮಾ. ೨೬-ನಗರದ  ತಾಲೂಕು ಕಚೇರಿ ಸಭಾಂಗಣದಲ್ಲಿ ಶ್ರೀ ಯೋಗಿ ನಾರೇಯಣ  ಗುರುಗಳ  ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.  ತಹಶೀಲ್ದಾರ್ ರಾಜೇಶ್ ಕುಮಾರ್ ರವರು ಶ್ರೀ ಯೋಗಿ ನಾರೇಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.  ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಎನ್ ತಿಮ್ಮಾ ಶೆಟ್ಟಿ,  ರಂಗನಾಥ್, ಅಶೋಕ್ ಬಾಬು, ಸೂರ್ಯನಾರಾಯಣ್, ಬಿ.ಎನ್. ಪ್ರಕಾಶ್,  ವೆಂಕಟೇಶ್, ಅಣ್ಣೇಶ್ ಕುಮಾರ್, ಸಿದ್ದಪ್ಪ, ಸುಬ್ಬಾ ಶೆಟ್ಟಿ, ಮಂಜುಳಾ, ಬಿ ಜಿ ಪದ್ಮನಾಭ್, ವೆಂಕಟಾಲ, ಅಂಕಮ್ಮ, ಮೋಹಿನಿ ಶ್ರೀನಿವಾಸ್,   ಶ್ರೀನಿವಾಸ ರೆಡ್ಡಿ ಹಾಗೂ  ವಿವಿಧ ಇಲಾಖೆಗಳ ಅಧಿಕಾರಿ ವರ್ಗದವರು ಮತ್ತು ಸಮಾಜದ ಅನೇಕ ಮುಖಂಡರು ಪಾಲ್ಗೊಂಡಿದ್ದರು