ಶ್ಯಾಗಲೆ ಗ್ರಾಮದಲ್ಲಿ ಗಾಯತ್ರಿ ಸಿದ್ದೇಶ್ವರ್ ಮತಯಾಚನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೬ : ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್  ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ಯಾಗಲೆ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಈ ವೇಳೆ ಗ್ರಾಮಸ್ಥರು ಶ್ರೀಮತಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು. ಗ್ರಾಮದ ಮಲ್ಲಿಕಾರ್ಜುನ ದೇವಾಲಯಕ್ಕೆ ಭೇಟಿ ನೀಡಿದ ಶ್ರೀಮತಿ ಗಾಯತ್ರಿ ಸಿದ್ದೇಶ್ವರ್ ಅವರು ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು.  ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ದೇವೇಂದ್ರಪ್ಪ‌, ಬಿಜೆಪಿ ಮುಂಖಡ ಅನಿತ್ ಕುಮಾರ್ ಜಿ.ಎಸ್, ಯುವ ಮುಂಖಡ ಜಿ.ಎಸ್.ಶ್ಯಾಮ್, ಜೀವನ್ ಮೂರ್ತಿ, ಸಹಾನ ರವಿ, ಕತ್ತಲಗೆರೆ ಅನಿಲ್, ಅಣಜಿ ಗುಂಡೇಶ್, ಓಂಕಾರಪ್ಪ, ಸದಾಶಿವು, ಕಾಶೀಪುರ ಸಿದ್ದೇಶ್, ಶ್ಯಾಗಲೆ ರುದ್ರೇಶಣ್ಣ, ಗ್ರಾಮದ ಬಿಜೆಪಿ ಮುಖಂಡರು ಜೊತೆಯಲ್ಲಿದ್ದರು.