ಹೋಳಿ ಸಂಭ್ರಮದಲ್ಲಿ ಗಾಯಿತ್ರಿ  ಸಿದ್ದೇಶ್ವರ್ ಭಾಗಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ‌.೨೬: ನಗರದ ರಾಂ ಅಂಡ್ ಕೋ ವೃತ್ತದಲ್ಲಿ ಆಯೋಜಿಸಿದ್ದ 25ನೇ ವರ್ಷದ ಹೋಳಿ ಸಂಭ್ರಮದಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಭಾಗಿಯಾಗಿ ಸರ್ವರಿಗೂ ಶುಭಾಶಯ ಕೋರಿದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಯುವ ಪಡೆಯ ನಡುವೆ ಗಾಯಿತ್ರಿ ಸಿದ್ದೇಶ್ವರ್ ಅವರು ಎರಡು ಸ್ಟೆಪ್ ಹಾಕಿ ಸಂಭ್ರಮಿಸಿದರು. ಈ ವೇಳೆ ಆಯೋಜಕ ಜೊಳ್ಳಿ ಗುರು, ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಜಯಮ್ಮ ಮತ್ತಿತರರು ಇದ್ದರು.