ಕುಡಿಯುವ ನೀರಿಗಾಗಿ ಜನರ ಪರದಾಟ;  ರೊಚ್ಚಿಗೆದ್ದ ಗ್ರಾಮಸ್ಥರಿಂದ ಗ್ರಾ.ಪಂಗೆ ಮುತ್ತಿಗೆ

ಸಂಜೆವಾಣಿ ವಾರ್ತೆ
ಜಗಳೂರು. ಮಾ.೨೬; ಅಣಬೂರು ಗ್ರಾಮ ಪಂಚಾಯಿತಿ ಕೂಗಳತೆ ದೂರದಲ್ಲಿರುವ ಅಣಬೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಸರಿಸುಮಾರು ಎರಡು ಸಾವಿರ ಜನ ಸಂಖ್ಯೆಯಿದ್ದು ಕೇವಲ ಒಂದೆ ಒಂದು ಬೋರ್ವೇಲ್ ಇದ್ದು ಜನರು ಕುಡಿಯುವ ನೀರಿಗಾಗಿ ಪ್ರತಿದಿನ ಸರತಿ ಸಾಲಿನಲ್ಲಿ ನಿಂತು ನೀರು ಇಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಈಗಾಗಲೆ ಗ್ರಾಮದಲ್ಲಿ ಎರಡು ಬೋರ್ವೇಲ್ ಇದ್ದು ಅದರಲ್ಲಿ ಒಂದು ಬೋರ್ವೇಲ್ ಮಾತ್ರ ಚಾಲ್ತಿಯಲ್ಲಿದೆ ಇನ್ನೊದು ಬೋರ್ವೇಲ್ ನಲ್ಲಿ ಉತ್ತಮವಾದ ನೀರು ಇದ್ದರು ಸಹ ಅದಕ್ಕೆ ಬೇಕಾದ ಆರ್ ಆರ್ ನಂಬರ್ ಪಡೆಯೆದೆ ವಿದ್ಯಾತ್ ವ್ಯವಸ್ಥೆ ಮಾಡದೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಕರುನಾಡ ನವ ನಿರ್ಮಾಣ ವೇಧಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಜೆ ಎಚ್ ಎಮ್ ಹೊಳೆ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಣ್ಣ ಬಾಲಪ್ಪ ನಮ್ಮ ಗ್ರಾಮದಲ್ಲಿ ಇರುವ ಕೊಳವೆಬಾವಿಯಲ್ಲಿ ಬರುವಂತಹ ನೀರು ತುಂಬ ಕಲುಷಿತಗೊಂಡಿದೆ ನಮ್ಮ ಗ್ರಾಮದಿಂದ ಹೊರಹೊಗುವ ಚರಂಡಿ ನೀರು ಕೊಳವೆಬಾವಿ ಸೇರಿ ನೀರು ಮಣ್ಣು ಮಿಶ್ರೀತವಾಗಿ ಹೋರಬರುತ್ತಿದೆ ಈ ನೀರು ಕುಡಿಯುವುದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾದ್ಯತೆ ಇದೆ ಗ್ರಾಮದಲ್ಲಿ ಈಗಾಗಲೆ ಶುದ್ದ ಕುಡಿಯುವ ನೀರಿನ ಘಟಕ ಇದ್ದು ಅದು ದುರಸ್ತಿಗೆ ಬಂದು ಒಂದು ತಿಂಗಳು‌ ಕಳೆದರು ಸಹ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಸ್ಯರುಗಳು ಯಾವುದೆ ಕ್ರಮಕೈಗೊಂಡಿಲ್ಲ ಇನ್ನಾದರು ಎಚ್ಚೆತ್ತು ಕುಡಿಯಲು ಶುದ್ದ ನೀರು ಒದಗಿಸದಿದ್ದರೆ ತಾಲೂಕು ಪಂಚಾಯಿತಿಯ ಮುಂದೆ ಧರಣಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರುಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮುದಿಯಪ್ಪ ಗುಡ್ಡಪ್ಪ ವಿ ಎಸ್ ಎಸ್ ಎನ್ ಸದಸ್ಯ ಗುಡ್ಡಪ್ಪ ಹೆಚ್ ಜಿ ಸಣ್ಣಕಾಟಪ್ಪ ಸಣ್ಣಬಾಲಪ್ಪ ಬಾಲಪ್ಪ ಈರಮ್ಮ ಕಾಟಮ್ಮ ನಾಗೇಂದ್ರಪ್ಪ ಬಾಲರಾಜ್ ಕುಮಾರ್ ಚೇತನ್ ಕಾಂತರಾಜ್ ಮಂಜುನಾಥ ನಾಗರಾಜ್ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು