ಕಡ್ಡಾಯ ಮತದಾನ ಮಾಡಲು ಕರೆ-ಬಸವರಾಜ
ಸಿರವಾರ.ಮಾ೨೬- ಮುಂಬರುವ ಮೇ.೭ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನ ಪ್ರತಿ ಶತವನ್ನು ಹೆಚ್ಚಿಸಬೇಕೆಂದು ಸಿರವಾರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಕರೆ ನೀಡಿದರು.
ತಾಲೂಕಿನ ಅತ್ತನೂರು ಗ್ರಾಮ ಪಂಚಾಯತಿ ಆವರಣದಲ್ಲಿ ಜಿ.ಪಂ. ರಾಯಚೂರು, ತಾ. ಆಡಳಿತ ಹಾಗೂ ತಾ. ಪಂ. ಸಿರವಾರ ಮತ್ತು ತಾಲೂಕು ಸ್ವಿಪ್ ಸಮಿತಿ ಸಿರವಾರ ವತಿಯಿಂದ ಸಂಜೀವಿನಿ ಯೋಜನೆಯಡಿ ಮತದಾನ ಜಾಗೃತಿ ಕಾರ್ಯಕ್ರಮದ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು.
ಮತದಾರರು ಮತದಾನದಿಂದ ದೂರ ಉಳಿಯಬಾರದು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಪ್ರತಿ ಶತ ಹೆಚ್ಚಾಗುತ್ತೆ. ಆದರೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮಾತ್ರ ಮತ ಪ್ರತಿ ಶತ ಕಡಿಮೆಯಾಗುತ್ತಿರುವದು ಶೋಚನೀಯ ಸಂಗತಿ. ಈ ನಿಟ್ಟಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನಮೋದಿಸಿಕೊಂಡಿರುವ ಅರ್ಹ ಮತದಾರರು ನಿಮ್ಮ ಸಮೀಪದ ಮತಗಟ್ಟೆ ಕೇಂದ್ರಕ್ಕೆ ತೆರಳಿ ಮತದಾನ ಮಾಡುವದರಿಂದ ಜಿಲ್ಲೆಯಲ್ಲಿ ಮತದಾನ ಪ್ರತಿಶತ ಹೆಚ್ಚಲ ಮಾಡಲು ಜನರಲ್ಲಿ ಜಾಗೃತಿ ಮೂಡಿಸಬೇಕೆಂದರು.
ಸಂಜೀವಿನಿ ಒಕ್ಕೂಟದ ಸದಸ್ಯರು ನಿಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಮತದಾನ ಪ್ರತಿ ಶತ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಕಡ್ಡಾಯ ಮತದಾನ ಮಾಡುವ ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ, ಎನ್.ಆರ್.ಎಲ್.ಎಂ ವಲಯ ಮೇಲ್ವಿಚಾರಕರು, ಐಇಸಿ ಸಂಯೋಜಕರು, ಒಕ್ಕೂಟದ ಸಹಾಯಕರು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು, ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.