೩ ದಿನಗಳ ರಾಜ್ಯ ಮಟ್ಟದ ಕಾನೂನು ಕಾರ್ಯಗಾರ
ಸಂಜೆವಾಣಿ ವಾರ್ತೆ
ಲಿಂಗಸೂಗೂರು.ಮಾ.೨೬- ತಾಲೂಕಿನಲ್ಲಿ ವಕೀಲರಿಗಾಗಿ ದಿ.೨೯ ರಿಂದ ೩೧ ರ ವರೆಗೆ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಕಾನೂನು ಕಾರ್ಯಗಾರ ಜರುಗಲಿವೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ವಕೀಲರ ಸಂಘದ ತಾಲೂಕು ಅಧ್ಯಕ್ಷರಾದ ಭೂಪನಗೌಡ ಪಾಟೀಲ್ ಕರಡಕಲ್ ರವರು ಇಂದು ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು ನ್ಯಾಯಂಗ ಇಲಾಖೆ ಹಾಗೂ ಲಿಂಗಸುಗೂರು ತಾಲೂಕು ನ್ಯಾಯವಾದಿಗಳ ಸಂಘ ಇವರ ಸಹಯೋಗದಲ್ಲಿ ಲಿಂಗಸೂಗೂರು ಪಟ್ಟಣದ ಆರ್.ಎಂ.ಎಸ್. ಫಂಕ್ಷನ್ ಹಾಲ್ ಕಲಬುರ್ಗಿ ರಸ್ತೆ ಮದರ ಟ್ಯಾಂಕ ಹತ್ತಿರ ಲಿಂಗಸುಗೂರುನಲ್ಲಿ ನಡೆಯಲಿದ್ದು, ತಾಲೂಕಿನಲ್ಲಿ ವಕೀಲರಿಗಾಗಿ ರಾಜ್ಯ ಮಟ್ಟದ ಕಾನೂನು ಕಾರ್ಯಗಾರವು ದಿ.೨೯/೦೩/೨೦೨೪ ರಿಂದ ೩೧/೦೩/೨೦೨೪ ರವರೆಗೆ ಮೂರು ದಿನಗಳ ಕಾಲ ನಡೆಯುವವು.
ಈ ಕಾರ್ಯಗಾರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೨೦೦೦ ಕ್ಕಿಂತ ಹೆಚ್ಚು ವಕೀಲರು ಕಾರ್ಯಗಾರಕ್ಕೆ ಪಾಲಗೂಳ್ಳುವರು ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭೂಪನಗೌಡ ಪಾಟೀಲ ಕರಡಕಲ್ ಹೇಳಿದರು.
ಈ ಸಂಧರ್ಭದಲ್ಲಿ ಲಿಂಗಸೂಗೂರು ವಕೀಲರ ಸಂಘದ ಪಧಾದಿಕಾರಗಳಾದ ಕಾರ್ಯದರ್ಶಿ ಬಾಲರಾಜ, ಸಾಗರ ಮಿಟ್ಟಿಮನಿ, ಬಸಲಿಂಗಯ್ಯ ವಸ್ತ್ರದ, ಪ್ರಭುಗೌಡ ಡಿ.ಆರ್.ನಾಯಕ್, ಮುದುಕಪ್ಪ ವಕೀಲರು, ಹಿರಿಯ ಕುಪ್ಪಣ್ಣ, ಮಾಣಿಕ್ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದರು.