ಸಕಲೈಶ್ವರ್ಯ ಸಿದ್ದಿದಾಯಕ ಶ್ರೀ ಗುರುಗುಂಟಾ ಅಮರೇಶ್ವರ ಜಾತ್ರೋತ್ಸವ
ಸಂಜೆವಾಣಿ ವಾರ್ತೆ
ಲಿಂಗಸುಗೂರು.ಮಾ.೨೬- ತಾಲೂಕಿನ ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ಕ್ಷೇತ್ರವು ದಕ್ಷಿಣ ಭಾರತದಲ್ಲಿ ರಾರಾಜಿಸುವ ಸುಕ್ಷೇತ್ರವಾಗಿದೆ. ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವ ವಿಜ್ರಂಭಣೆಯಿಂದ ಜರುಗಿತು. ಸಂಜೆ ೬ ಗಂಟೆಗೆ ಮಹಾರಥೋಥ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.
ಕ್ಷೇತ್ರ ಪಿರಿಚಯ-ಲಿಂಗರೂಪ ಶ್ರೀ ಅಮರೇಶ್ವರ ನಿಷ್ಠಾವಂತ ಭಕ್ತರಿಗೆ ಸಕಲೈಶ್ವರ್ಯಸಿದ್ದಿಗಳನ್ನು ದಯಪಾಲಿಸುತ್ತಾನೆ ಪ್ರತಿವರ್ಷ ಲಕ್ಷಾಂತರ ಜನರು ಸುಕ್ಷೇತ್ರಕ್ಕೆ ಬಂದು ದರ್ಶನ ಪಡೆದು ಪುನಿತರಾಗಿದ್ದಾರೆ.
ಈ ಅಮರೇಶ್ವರ ಲಿಂಗವು ತೇತ್ರಾಯುಗದ ಲಂಕಾಧಿಪತಿ ರಾವಣ ಕಾಲದ ಲಿಂಗವೆಂದು ಪುರಾಣದಿಂದ ತಿಳಿದು ಬರುತ್ತದೆ ಸಾಕ್ಷತ ಪರಮೇಶ್ವರ ರಾವಣ ಸೋದರ ಮಾವನಾದ ಮಹಿರಾವಣಿನಿಗೆ ಅವನ ಇಷ್ಟ ಪ್ರಕಾರ ಈ ಲಿಂಗವನ್ನು ಕೊಟ್ಟಿದ್ದಾನೆ. ಆದರೆ ಮಹಿರಾವಣಲಿಂಗವನ್ನು ತನ್ನ ಸ್ಥಳಕ್ಕೆ ಹೊಗುವ ಕಾಲಕ್ಕೆ ಅಜಾಗುರುಕತೆಯಿಂದ ಪರಮೇಶ್ವರ ಹೇಳಿದ ನಿಯಮಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದರಿಂದ ಈ ಲಿಂಗವು ಪ್ರಕೃತಿ ಸೌಂದರ್ಯದಿಂದ ಕೂಡಿದ ಈ ಮಹಾ ಕ್ಷೇತ್ರದಲ್ಲಿ ಬಿದ್ದು ಪಾತಳ ಲೋಕದವರೆಗೆ ಇಳಿದು ಒಡಮೂಡಿ ಈಗಿನ ಆಕಾರದಲ್ಲಿ ಕಾಣಿಸಿಕೊಂಡಿತು ಅಂದಿನಿಂದ ಈಕ್ಷೇತ್ರವು ಅಮರೇಶ್ವರ ಮಹಾ ಕ್ಷೇತ್ರವೆಂದು ಹಾಗೂ ಲಿಂಗವು ಪಾತಳದವರಿಗೆ ಇಳಿದು ಒಂದು ಗುಂಡಾಕಾರ ತೆಳಿದಿದ್ದರಿಂದ ಈಗುಂಡಿಗೆ ಅಮರಗುಂಡ ಎಂಬ ಹೆಸರು ರೂಢಿಯಲ್ಲಿದ್ದು ಹಾಗೂ ಅಮರೇಶ್ವರ ಎಂದು ಪುರಾಣ ಪ್ರತಿತವಾಗಿದೆ.
ತಾಲೂಕಿನ ಯರಡೋಣಿ ಗ್ರಾಮದ ಮಹಾ ಶಿವಶರಣರಾದ ಅದಯ್ಯ ಹಾಗೂ ಮಾಳಗೊಂಡಮ್ಮ ಎಂಬ ದಂಪತಿಗಳು ಕೃಷಿಯಲ್ಲಿ ತೊಡಗಿ ನಿತ್ಯದಲ್ಲಿ ಗುರು ಲಿಂಗ ಜಂಗಮರಾಧನೆ ತತ್ಪರಾಗಿದ್ದ ಇವರಿಗೆ ಪುತ್ರ ಸಂತಾನವಿರಲಿಲ್ಲಾ ಶಿವನಲ್ಲಿ ನಂಬುಗೆ ಎಂಬುದು ಅವರಿಗೆ ಸದೃಡವಾಗಿತ್ತು ಅವರಿಗೆ ಶಿವನೆ ಪುತ್ರನಾಗಬೇಕೆಂಬ ಇಚ್ಚೆಯಂತೆ ಅಮರೇಶ್ವರ ಎಂಬ ಬಾಲಕನ ತಂದೆ ತಾಯುಯಾದರು. ಈ ಶಿವಶರಣ ಮನೆದೇವರು ಭೂಪೂರದ ತೊಪಿನಕಟ್ಟೆ ಬೃಹನ್ಮಠದ ಚರಪಟ್ಟಾಧ್ಯಕ್ಷ ಶ್ರೀ ಮಳೆ ಸ್ವಾಮಿಗಳಾಗಿದ್ದರು. ಶಿವನೆ ಅಮರೇಶ್ವರ ಎಂಬ ನಾಮದಿಂದ ಬಂದಾಗ ತಂದೆ ಆದಯ್ಯ ಎತ್ತುಗಳನ್ನುಕಟ್ಟಿ ಬೇಸರಕೆಯಿಂದ ಕೃಷಿ ಮಾಡುತ್ತಿದ್ದು ಮಗನಿಗೆ ಆಜ್ಞೆ ಮಾಡಿದಾಗ ಬಾಲಕ ಎರಡು ಘಳಿಗೆಯಲ್ಲಿ ನೂರು ಸುತ್ತ ತಿರುಗಿಸಿ ಚನ್ನಾಗಿ ಹರಗಿದನು ನೋಡಿ ಆದಯ್ಯನಿಗೆ ಪರಮಾಶ್ಚರ್ಯವಾಯಿತು.
ಅದೇ ಪ್ರಕಾರ ಎತ್ತುಗಳಿಗೆ ನೀರು ಕುಡಿಸಲು ಗುಂಡದೊಳಗೆ ಮುದಿ ಎತ್ತುಗಳನ್ನು ಹೊಡೆದು ಕೊಂಡು ಹೋಗಿ ನೀರನ್ನ ಕುಡಿಸದ ತಕ್ಷಣವೆ ನೀರು ಕುಡಿದ ಎತ್ತುಗಳು ಪ್ರಾಯದವಾದವು.ಈನೀರನ್ನು ಕುಡಿದ ದಂಪತಿಗಳೂ ಯೌವ್ವನ ಸ್ಥಾರಾದರು.
ಕ್ಷೇತ್ರ ಮಹಿಮೆ-ಅಮರೇಶ್ವರದ ಪೂರ್ವಕ್ಕೆ ಗುರುಗುಂಟಾ ಸಂಸ್ಥಾನವಿದ್ದು ಪಶ್ಚಿಮಕ್ಕೆ ಛಾಯ ನದಿ ಉತ್ತರಕ್ಕೆ ಕೃಷ್ಣಾನದಿ ದಕ್ಷಣಕ್ಕೆ ರಾಮತಿರ್ಥದ್ದು ಈ ಮೋದಲು ಕ್ಷೇತ್ರವು ವೇದ ಕಾಲದಿಂದಲು ಪ್ರಸಿದ್ದವಾಗಿದ್ದು, ದೇವಲಾಯವು ತೆಗ್ಗಿನ ಪ್ರದೇಶದಲ್ಲಿದ್ದು ಅಮರೇಶ್ವರ ಲಿಂಗವು ಚನ್ನಾಗಿ ಗೋಲಾಕಾರವಾಗಿದ್ದು ಪಾಣಿವಾಟವ ಸರಪಣಿ ಎತ್ತರದಲ್ಲಿ ಇರುತ್ತದೆ. ಈದೇವಾಲಯಕ್ಕೆ ನಾಲ್ಕು ಚಿಕ್ಕಗೋಪುರಗಳ ಮಧ್ಯ ಒಂದು ದೊಡ್ಡ ಗೋಪುರವಿದ್ದು ಗರ್ಭ ಗುಡಿಯ ಮಂಟಪವು ೧೬ ಶಿಲೆ ಕಂಬಗಳಿಂದು ಕಟ್ಟಿದ್ದು ಈಗುಡಿಯ ಪಶ್ಚಿಮಕ್ಕೆ ಆದಯ್ಯನ ಗುಂಡಿ ಇದೆ ಉತ್ತರಕ್ಕೆ ಕುಂಭ ತೀರ್ಥವಿದ್ದು ವಾಡಿಕೆಯಲ್ಲಿ ಗಡಿಗೆ ಭಾವಿಯೆಂದು ಕರೆಯುತ್ತಿದ್ದು ಈತೀರ್ಥದಲ್ಲಿ ಅಗಸ್ತೆ ಮಹಷಿಗಳು ಸ್ನಾನ ಮಾಡಿದರೆಂಬ ಪ್ರತೀತಿಯಿದೆ.
ಈತೀರ್ಥದಲ್ಲಿ ನೀರು ಹರಿಯುತ್ತ ದಕ್ಷಿಣ ಭಾಗದ ಕೊಂಡದಲ್ಲಿ ಬರುತ್ತದೆ ಇಲ್ಲಿಯೇ ಆದಯ್ಯ ಸ್ನಾನ ಮಾಡಿಸರ್ವ ರೋಗ ನಿವಾರಣೆಯಾಗಿ ಆರೋಗ್ಯ ಪಡೆದನು. ರಥೋತ್ಸವ ಅಮರೇಶ್ವರ ಜಾತ್ರೆಯ ರಥೋತ್ಸವವು ಪ್ರತಿವರ್ಷ ಪಾಲುಘುಣ ಶುದ್ದ ಹೊಳೆಹುಣ್ಣಿವೆಯಂದು ಹುಬ್ಬಾ ನಕ್ಷತ್ರ ಕಂಡ ನಂತರ ವಿಜ್ರಂಭಣೆಯಿಂದ ಜರುಗುತ್ತದೆ.
ಜಾನುವಾರು ಜಾತ್ರೆ-ಜಿಲ್ಲೆಯಲ್ಲಿಯೇ ಅತಿದೊಡ್ಡ ಜಾನುವಾರು ಜಾತ್ರೆಯಾಗಿದ್ದು, ೧೫ ದಿವಸಗಳ ಪರ್ಯಂತ ಜಾನೂವಾರುಗಳ ಮಾರಾಟವಾಗುತ್ತದೆ ಈ ಕಾರ್ಯಕ್ಕೆ ಎಪಿಎಂಸಿವತಿಯಿಂದ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಈ ಜಾತ್ರೆಯಲ್ಲಿ ಪ್ರಸಿದ್ದ ನಾಟಕ ಕಂಪನಿಗಳು ಹಾಗೂ ಸಾಂಸ್ಕೃತಿಕಮನೋರಜನೆ ಮತ್ತು ವಸ್ತುಪ್ರರ್ದಶನ ನಡೆಯುತ್ತದೆ.
ಮುಜಾರಾಯಿ ಆಡಳಿತ-ಈ ದೇವಸ್ಥಾನ ಮುಜರಾಯಿ ಆಡಳಿತವಿದ್ದು ಅಧ್ಯಕ್ಷರಾಗಿ ಸಹಾಯಕ ಆಯುಕ್ತರು ಕಾರ್ಯದರ್ಶಿ ತಹಸೀಲ್ದಾರ ಹಾಗೂ ಕಾರ್ಯನಿರ್ವಾಕರಿರುತ್ತಾರೆ. ಆಡಳೀತವತಿಯಿಂದ ಅನೇಕ ಅಭಿವೃದ್ದಿ ಕಾರ್ಯಗಳ ಜರುಗಿವೆ.