ನೀರಿಗಾಗಿ ತಹಸೀಲ್ದಾರ್‌ಗೆ ಮುತ್ತಿಗೆ
(ಸಂಜೆವಾಣಿ ವಾರ್ತೆ)
ಸಿರವಾರ,ಮಾ.೨೬-
ಕಳೆದ ೧೫ ದಿನಗಳಿಂದ ವಾರ್ಡಿಗೆ ಕುಡಿಯಲು ನೀರು ಸರಬರಾಜು ಆಗುತ್ತಿಲು, ಟ್ಯಾಂಕರ್ ಮೂಲಕವಾದರೂ ನೀರು ಕೊಡಿ ಎಂದು ವಾರ್ಡಿನ ಮಹಿಳೆಯರು, ಪುರುಷರು ನೂರಾರು ಸಂಖ್ಯೆಯಲ್ಲಿ ತಹಸೀಲ್ದಾರ ಕಛೇರಿ, ಪ.ಪಂಚಾಯತಿಗೆ ಮುತ್ತಿಗೆ ಹಾಕುಮ ಮೂಲಕ ಒತ್ತಾಯಿಸಿದರು.
ಪಟ್ಟಣದ ಬಹುತೇಕ ಎಲ್ಲಾ ವಾರ್ಡಗಳಿಗೆ ಕೊಳವೆಭಾವಿ ಮೂಲಕ ನೀರು ಸರಬರಾಜು ಆಗುತ್ತಿದೆ, ವಾರ್ಡ ನಂ೧೭, ೧೬,೧೫ ವಾರ್ಡಿಗೆ ಕಳೆದ ೧೫ ದಿನಗಳಿಂದ ಒಂದು ಕೊಡ ನೀರು ಸಹ ಸರಬರಾಜು ಮಾಡುವಲ್ಲಿ ಅದಿಕಾರಿಗಳು, ಸಿಬ್ಬಂದಿ ವರ್ಗದ ವಿಫಲರಾಗಿದ್ದಾರೆ, ದೀಪದ ಕೆಳಗೆ ಕತ್ತಲು ಎಂಬಂತೆ ನೀರು ಶೇಖರಣೆ ಮಾಡುವ ಟ್ಯಾಂಕ ಹತ್ತಿರವಿದರೂ ನೀರು ತಲುಪುತ್ತಿಲ ಎಂದು ಆರೋಪಿಸಿದರು.