ವಾಹನ ತಪಾಸಣೆ
ನವಲಗುಂದ,ಮಾ.26: ಪಟ್ಟಣದ ಹೊರವಲಯದಲ್ಲಿರುವ ಹುಬ್ಬಳ್ಳಿ ಸೊಲ್ಲಾಪುರ್ ರಾಷ್ಟ್ರೀಯ ಹೆದ್ದಾರಿಯ ನರಗುಂದ ರೋಣ ಕ್ರಾಸ್ ಬಳಿ ಚೆಕ್ ಪೆÇೀಸ್ಟ್ ಗೆ ಸಹಾಯಕ ಚುನಾವಣಾಧಿಕಾರಿ ದೇವರಾಜ್ ಆರ್ ದಿಡೀರ್ ಭೇಟಿ ನೀಡಿ ವಾಹನ ತಪಾಸಣೆ ನಡೆಸಿ ಧಾಖಲೆ ಪರಿಶೀಲಿಸಿದರು.
ಲೋಕಸಭೆ ಚುನಾವಣಾ ನಿಮಿತ್ತ ಮಾದರಿ ನೀತಿ ಸಂಹಿತೆ ಜಾರಿಗೆ ಯಾಗಿದ್ದು, ಕ್ಷೇತ್ರದಿಂದ ಹೊರಹೋಗುವ ಮತ್ತು ಆಗಮಿಸುವ ಎಲ್ಲ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಬೇಕು. ಹಣ, ಮದ್ಯ, ದಾಖಲೆ ಇಲ್ಲದ ವಸ್ತುಗಳು ಕಂಡು ಬಂದರೆ ತಕ್ಷಣ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳಬೇಕು.
ಪ್ರತಿ ವಾಹನ ತಪಾಸಣೆ ಮಾಡಿದ ವರದಿಯನ್ನು ವಹಿಯಲ್ಲಿ ದಾಖಲಿಸಬೇಕು ಎಂದು ಚೆಕ್ ಪೆÇೀಸ್ಟ್ ನಲ್ಲಿ ಕಾರ್ಯನಿರ್ವಸುವ ಸಿಬ್ಬಂದಿಯವರಿಗೆ ಸೂಚಿಸಿದರು. ಇದೇ ವೇಳೆ ನೋಂದಣಿ ಮಾಡಿದ ವಾಹನಗಳ ವಿವರಗಳನ್ನು ಖುದ್ದಾಗಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ, ತಾ ಪಂ ಯೋಜನಾಧಿಕಾರಿ ಬಿ ಎಸ್ ಪಾಟೀಲ್ ಸೇರಿದಂತೆ ಚೆಕ್ ಪೆÇೀಸ್ಟ್ ಸಿಬ್ಬಂದಿಗಳು ಉಪಸ್ಥಿತರಿದ್ದರು.