ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಿಎಂಗೆ ಮನವಿ
ಕಾಳಗಿ,ಸೆ 18: ಡಾ. ಅಂಬೇಡ್ಕರ್ ನಿಗಮ ಮತ್ತು ಎಲ್ಲಾ ನಿಗಮಗಳ ಅರ್ಜಿಗಳನ್ನು ಆಯಾ ಕ್ಷೇತ್ರದ ಶಾಸಕರು ಸಾಲಸೌಲಭ್ಯಗಳ ಅಂತಿಮ ಪಟ್ಟಿಯನ್ನು ಸಿದ್ದಪಡಸಿ ತಮ್ಮ ಬೇಕಾದ ಕಾರ್ಯಕರ್ತರಿಗೆ ಮಾತ್ರ ಸರ್ಕಾರದ ಸಿಗುವ ಸಾಲ ಸೌಲಭ್ಯ ಸಿಗುತ್ತಿದ್ದು. ಆದರೆ ಜನಸಾಮಾನ್ಯರಿಗೆ ಯಾವುದೇ ರೀತಿಯ ಸಾಲಸೌಲಭ್ಯ ಸಿಗುತ್ತಿಲ್ಲ. ಇದರಿಂದಾಗಿ ಜನಸಾಮಾನ್ಯರಿಗೆ ಬಹಳ ತೊಂದರೆ ಆಗುತ್ತಿದ್ದು ಇದ್ದನ್ನು ತಾವು ಪರಗಣಿಸಿ ತಮ್ಮ ಜನಸಾಮನ್ಯರಿಗೆ ಅನುಕೂಲಮಾಡಿ ಕೊಡಬೇಕು. ಶಾಸಕರ ಶಿಫಾರಸು ಮಾಡುವ ಅಂತಿಮ ಪಟ್ಟಿಯನ್ನು ರದ್ದು ಮಾಡಿ ನೇರವಾಗಿ ಆಯಾ ನಿಗಮದ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಾಶಿನಾಥ ಶೇಳ್ಳಗಿ ಮನವಿ ಪತ್ರ ಸಲ್ಲಿಸಿದರು. ದಿಲೀಪಕುಮಾರ ಕಿರಸವಾಳಗಿ, ಮಲ್ಲಿಕಾರ್ಜುನ ಹಿಪ್ಪರಗಿ, ಮಾರುತಿ ತೆಗಲತಿಪ್ಪಿ, ಸತೀಶ ಜಾಧವ, ಪವಿತ್ರಾ ವಾಡಿ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಉಪಸ್ಥಿತರಿದ್ದರು.