ಆಕಾಶ್‍ನಿಂದ ಅಕ್ಟೋಬರ್‍ನಲ್ಲಿ ಹಂಟ್ ಅಂಥೆ 2024ರ ಪರೀಕ್ಷೆ ಘೋಷಣೆ
ಕಲಬುರಗಿ:ಸೆ.18: ಆಕಾಶ್ ಎಜುಕೇಶನ್ ಸರ್ವೀಸಸ್ ಲಿಮಿಟೆಡ್ ವಿದ್ಯಾರ್ಥಿ ವೇತನ ಪರೀಕ್ಷೆ ಆಕಾಶ್ ನ್ಯಾಷನಲ್ ಟ್ಯಾಲೆಂಟ್ ಹಂಟ್ ಎಕ್ಸಾಂ ಆರಂಭಿಸಿ 15 ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಇತ್ತೀಚಿನ ಆವೃತ್ತಿಯಾದ ಅಂಥೆ -2024 ಪ್ರಕಟಿಸಿದೆ. 7ರಿಂದ 12 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯ ನಂತರ ಶೇಕಡಾ 100ರವರೆಗೆ ವಿದ್ಯಾರ್ಥಿವೇತನ ಗಳಿಸಬಹುದಾಗಿದೆ. ಪರೀಕ್ಷೆಯು ಅಕ್ಟೋಬರ್ 19ರಿಂದ 27ರವರೆಗೆ ಆನ್‍ಲೈನ್ ಮತ್ತು ಅಫ್‍ಲೈನ್‍ನಲ್ಲಿ ಜರುಗಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ದೀಪಕ್ ಮೆಹ್ರೋತಾ ಅವರು ಹೇಳಿದರು.
ಸಂಸ್ಥೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗದು ಬಹುಮಾನ ಗೆಲ್ಲಬಹುದು. ವೈದ್ಯಕೀಯ, ಎಂಜಿನಿಯರಿಂಗ್ ಕೋರ್ಸ್‍ಗಳಿಗೆ ಪ್ರವೇಶ ಪಡೆಯುವ ಜೀವನದ ಕನಸನ್ನು ಸಾಕಾರಪಡಿಸಿಕೊಳ್ಳಬಹುದಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಯುಎಎಸ್‍ದ ಫೆÇ್ಲೀರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್‍ಗೆ ಸಂಪೂರ್ಣ ಉಚಿತವಾಗಿ ಕರೆದೊಯ್ಯುವ 5 ದಿನಗಳ ಪ್ರವಾಸ ಕಾರ್ಯಕ್ರಮವೂ ಇರಲಿದೆ ಎಂದರು.
ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳು ಆಕಾಶ್ ಸಂಸ್ಥೆ ನೀಡುವ ಅತ್ಯುನ್ನತ ಕೋಚಿಂಗ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸೌಲಭ್ಯ ಪಡೆಯಲಿದ್ದಾರೆ. ಆ ಮೂಲಕ ಎನ್‍ಇಇಟಿ, ಜೆಇಇ, ರಾಜ್ಯ ಮಟ್ಟದ ಸಿಇಟಿಗಳು ಮತ್ತು ಎನ್ ಟಿಎಸ್‍ಇ ಮತ್ತು ಒಲಿಂಪಿಯಾಡ್ ನಂತಹ ವಿದ್ಯಾರ್ಥಿವೇತನಕ್ಕೆ ನಡೆಸಲಾಗುವ ಪರೀಕ್ಷೆಗಳಿಗೆ ಸಿದ್ಧರಾಗಲು ಕೋಚಿಂಗ್ ಕಾರ್ಯಕ್ರಮಗಳು ನೆರವಾಗಲಿವೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಆಕಾಂಕ್ಷೆಗಳು ಮತ್ತು ಸಾಮಥ್ರ್ಯಗಳ ನಡುವಿನ ಅಂತರ ಕಡಿಮೆ ಮಾಡುವ ನಿಟ್ಟಿನಲ್ಲಿ ಎಇಎಸ್‍ಎಲ್ ಕಳೆದ 15 ವರ್ಷಗಳಿಂದಲೂ ನಿರ್ಣಾಯಕ ಪಾತ ವಹಿಸುತ್ತಾ ಬಂದಿದೆ. ಅಂಥೆ 2024ರೊಂದಿಗೆ ಭವಿಷ್ಯದ ವೈದ್ಯರು ಮತ್ತು ಎಂಜಿನಿಯರ್‍ಗಳನ್ನು ಪೆÇೀಷಿಸಲು ನಾವು ಪ್ರತಿಭೆಗಳ ಹುಡುಕಾಟ ಆರಂಭಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ರಿಷಿ ಶೇಖರ್ ಶುಕ್ಲಾ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 25), ಕೃಷ್ಣ ಸಾಯಿ ಶಿಶಿರ್ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 67), ಅಭಿಷೇಕ್ ಜೈನ್ (ಜೆಇಇ ಅಡ್ವಾನ್ಸ್ಡ್ 2024, ಎಐಆರ್ 78) ಮುಂತಾದವರು ಯಶಸ್ವಿ ವಿದ್ಯಾರ್ಥಿಗಳು. ಎನ್‍ಇಇಟಿ 2023ರಲ್ಲಿ ಸಂಸ್ಥೆಯ ಟಾಪ್ ಸ್ಕೋರರ್‍ಗಳಾಗಿ ಕೌಸ್ತವ್ ಬೌರಿ (ಎಐಆರ್ 03), ಧೃವ್ ಅಡ್ವಾಣಿ(ಎಐಆರ್ 05), ಸೂರ್ಯ ಸಿದ್ಧಾರ್ಥ್ ಎನ್ (ಎಐಆರ್ 06), ಆದಿತ್ಯಾ ನೀರಜೆ (ಎಐಆರ್ 07) ಮತ್ತು ಆಕಾಶ್ ಗುಪ್ತಾ(ಎಐಆರ್ 28) ಹೊರಹೊಮ್ಮಿದ್ದಾರೆ ಎಂದು ಅವರು ವಿವರಿಸಿದರು.
ಅಂಥೆ 2024 ಅಕ್ಟೋಬರ್ 19ರಿಂದ 27ರ ಅವಧಿಯಲ್ಲಿ ನಡೆಯಲಿದ್ದು, ಆನ್ ಲೈನ್ ಮತ್ತು ಆಫ್ ಲೈನ್‍ಗಳೆರಡರಲ್ಲೂ ನಡೆಯಲಿದೆ. ದೇಶದ 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಪ್ರವೇಶ ಪರೀಕ್ಷೆ ಆಯೋಜಿಸಲಾಗುತ್ತಿದೆ. ಟಾಪ್ ಸ್ಕೋರರ್‍ಗೆ ಶೇಕಡಾ 100ರಷ್ಟು ವಿದ್ಯಾರ್ಥಿ ವೇತನದ ಜೊತೆಗೆ ನಗದು ಬಹುಮಾನ ನೀಡಲಾಗುತ್ತಿದೆ. ಅಂಥೆಯ ಆಫ್ ಲೈನ್ ಪರೀಕ್ಷೆಗಳು ಅಕ್ಟೋಬರ್ 20 ಮತ್ತು 27, 2024ರಂದು ದೇಶಾದ್ಯಂತ ಆಕಾಶ್ ಸಂಸ್ಥೆಯ 315+ ಕೇಂದ್ರಗಳಲ್ಲಿ ನಡೆಯಲಿವೆ ಎಂದು ಅವರು ತಿಳಿಸಿದರು.
ಆನ್ ಲೈನ್ ಪರೀಕ್ಷೆಗಳನ್ನು ಅಕ್ಟೋಬರ್ 19ರಿಂದ 27, 2024 ರವರೆಗೆ ಎಕ್ಸಾಂ ವಿಂಡೋದಲ್ಲಿ ಯಾವುದೇ ಸಮಯದಲ್ಲಿ ತೆಗೆದುಕೊಳ್ಳಬಹುದಾಗಿದೆ. ಅಂಥೆ 2024ರ ಪರೀಕ್ಷೆಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಆನ್ ಲೈನ್ ಪರೀಕ್ಷೆಗಿಂತ ಮೂರು ದಿನಗಳ ಮೊದಲು ಮತ್ತು ಆಫ್ ಲೈನ್ ಪರೀಕ್ಷೆ ಆರಂಭಗೊಳ್ಳುವ ಏಳು ದಿನಗಳೊಳಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಆಫ್ ಲೈನ್ ಮತ್ತು ಆನ್ ಲೈನ್ ಪರೀಕ್ಷೆಗಳೆರಡಕ್ಕೂ 200 ರೂ.ಗಳ ಶುಲ್ಕ ಇರಲಿದೆ. ಫಲಿತಾಂಶವನ್ನು 10ನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್ 8ರಂದು ಪ್ರಕಟಿಸಲಾಗುತ್ತದೆ. ಇದೇ ವೇಳೆ 7ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್ 13 ಮತ್ತು 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನವೆಂಬರ್ 16 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಎಲ್ಲ ಫಲಿತಾಂಶಗಳು ಅಂಥೆ ವೆಬ್ ಸೈಟ್‍ನಲ್ಲಿಯೂ ಲಭ್ಯವಿರಲಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವರಣ್ ಸೋನಿ, ರಾಜೇಶ್‍ಕುಮಾರ್ ಕುಲಕರ್ಣಿ, ರವಿಕುಮಾರ್ ದೊಡ್ಡಿ, ರಾಜೇಶ್ ಸಿ., ವರುಣ್ ಸೋನಿ ಮುಂತಾದವರು ಉಪಸ್ಥಿತರಿದ್ದರು.