ಮೂಲವೃತ್ತಿಯೇ ಮೀನುಗಾರಿಕೆ ಇದ್ದರೆ ಸ್ವಯಂ ಪ್ರೇರಣೆಯಿಂದ ಸರ್ಕಾರದಿಂದ ಸಹಾಯ :ಸಚಿವ ಮಂಕಾಳ್ ಎಸ್. ವೈದ್ಯ
ಕಲಬುರಗಿ:ಸೆ.18: ಮೂಲ ವೃತ್ತಿಯೇ ಮೀನುಗಾರಿಕೆ ಇದ್ದರೆ ಸ್ವಯಂ ಪ್ರೇರಣೆಯಿಂದ ಹಾಗೂ ನಿಮಗೆ ಅನುಕೂಲವಾಗುವ ರೀತಿ ಸರಕಾರದಿಂದ ಹಾಗೂ ಇಲಾಖೆಯಿಂದ ಸಹಾಯ ಮಾಡಬಹುದು ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ಎಸ್ ವೈದ್ಯ ಅವರು ಹೇಳಿದರು.
ಬುಧುವಾರದಂದು ಜಿಲ್ಲಾಧಿಕಾರಿಗಳ ಸಂಭಾಗಣದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಕಲಬುರಗಿ ಜಿಲ್ಲಾ ಪಂಚಾಯತ್ ಆಯೋಜಿಸಿರುವ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ ಮೀನುಗಾರರೊಂದಿಗೆ ಸಂವಾದ ಆಯೋಜಿಸಿದ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ನೀವು ಕೊಡುವ ಸಲಹೆ ಸೂಚನೆಗಳು ಹಾಗೂ ನಿಮ್ಮ ಬೇಡಿಕೆಗಳು ಮೀನುಗಾರಿಕೆಯವರಿಗೆ ಅನುಕೂಲ ಆಗುವ ಹಾಗೆ ಅವರ ಜೀವನಕ್ಕೆ ಸಹಾಯವಾಗುವ ಹಾಗೆ ನಿಮ್ಮ ಸಮಸ್ಯೆಗಳು ಕುಂದು ಕೊರತೆಗಳು ನನ್ನ ಎದುರು ಪ್ರಸ್ತುತ ಪಡಿಸಿದರೆ ಕ್ಯಾಬಿನೇಟ್‍ನಲ್ಲಿ ನಾನು ವಿಷಯಗಳನ್ನು ಮಂಡಿಸುತ್ತೇನೆ ಎಂದು ಆಶ್ವಾಸನೆ ನೀಡಿ ಸಂವಾದವನ್ನು ಪ್ರಾರಂಭಿಸಿದರು.
ಯಾದಗಿರಿ ಸಹಕಾರಿ ಸಂಘ ಅಧ್ಯಕ್ಷ ಮಾತನಾಡಿದ ಅವರು ಸರಕಾರದಿಂದ ಸಿಗಬೇಕಾದ ಸೌಕರ್ಯಗಳು ಸಿಗುತ್ತಿಲ್ಲ ವಿಶೇಷವಾಗಿ ಮೀನುಗಾರಿಕೆ ಅವರಿಗೆ ಪ್ರತ್ಯೇಕ್ಷವಾಗಿ ನಿವೇಶನಗಳು ಮೀನುಗಾರರ ಅವರದೇ ಆದ ಒಂದು ಸಮುದಾಯ ಭವನ, ಇವರ ಮಕ್ಕಳಿಗೆ ವಿಶೇಷವಾದ ಶಿಕ್ಷಣ ಸೌಲಭ್ಯವನ್ನು ಕೊಡಬೇಕು ಹಾಗೂ ಕೆಲಸ ಮಾಡುವ ಸಂದರ್ಭದಲ್ಲಿ ಕೆರೆಯಲ್ಲಿ ನದಿಯಲ್ಲಿ ಬಳಿ ಬಲೆ ಬಿಸಿದಾಗ ಅನಾಹುತ ಸಂಭವಿಸಿದರೆ ಅವರಿಗೆ 6 ಲಕ್ಷ ತೆಗೆದು 12 ಲಕ್ಷ ಹಣ ನೀಡಲು ಮುಜುವರ್ಜಿ ವಹಿಸಬೇಕೆಂದು ಅಧ್ಯಕ್ಷರಲ್ಲಿ ಮನವಿ ಮಾಡಿಕೊಂಡರು.
ಚಿಂಚೋಳಿ ತಾಲೂಕಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಬಿ. ನಾಯಕ ಅವರು ಚಿಂಚೋಳಿ ತಾಲೂಕಿನ ಚದ್ರಂಪಳ್ಳಿ ಡಾಂ ಇದೆ ಅಲ್ಲಿ ಐದು ಎಕರೆ ಜಾಗ ಇದೆ ಆದರೆ ಕಳೆದ ವರ್ಷ ಮಳೆ ಸರಿಯಾಗಿ ಬರಲಿಲ್ಲ ಆದರೆ ಈ ವರ್ಷ ಮಳೆ ಬಂದಿದೆ ಅದಕ್ಕೆ ಮೀನು ಮರಿಗಳು ಇಲ್ಲ ಹಾಗೂ ಮೀನಾ ಹಿಡಿಯುವ ಪರಿಕರ ಕೂಡಾ ಇಲ್ಲ 11 ತಾಲೂಕಿನಲ್ಲಿಯೂ ಇದೇ ಸಮಸ್ಯೆ ಎದುರಾಗಿದೆ ಎಂದರು.
ಶ್ರೀಕಾಂತ ಚವ್ಹಾಣ ಅವರು ಮಾತನಾಡಿ, ಅವರು ಫ್ರೀಜ್ ಸ್ಸೀಸ್ಟಂನಲ್ಲಿ ಒಂದು ಬುಟ್ಟಿ ಕೊಡಬೇಕು ಹಾಗೂ ಮೀನು ಮಾರಾಟಗಾರರಿಗೆ ಸರಕಾರದ ವತಿಯಿಂದ ರಿಯಾಯತಿ ದರದಲ್ಲಿ ಅವರಿಗೆ ಗಾಡಿ ಕೊಡಬೇಕು ಆಧುನಿಕ ರೀತಿಯಲ್ಲಿ ಅವರಿಗೆ ಕೌಶಲ್ಯ ತರಬೇತಿ ಕೊಡಬೇಕು. ಮತ್ತು ಅವರಿಗೆ ಪರಿಹಾರ ಕೊಡಬೇಕು.
ವಿಧಾನ ಪರಿಷತ್ತಿನ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಾಮಾಜಿಕ ನ್ಯಾಯಕ್ಕಾಗಿ ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಅಧ್ಯಕ್ಷರು ಸಭೆಯನ್ನು ನಡೆಸಿದ್ದಾರೆ. ಸಂಘ-ಸಂಸ್ಥೆಗಳು ಹೆಚ್ಚಿನ ಕೆಲಸಗಳನ್ನು ಮಾಡಿದರೆ ಹೆಚ್ಚಿನ ಉದ್ಯೋಗದಲ್ಲಿ ಅಳವಡಿಸಿಕೊಳ್ಳಬಹುದು ಎಂದರು.
ಕೂಲಿ ಸಮಾಜದ ಮುಖ್ಯ ಕಸಬು ಮೀನುಗಾರಿಕೆ ಆಗಿದ್ದರಿಂದ ನಮ್ಮ ಸರಕಾರ 3 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಅದರಲ್ಲಿ 90% ಕೂಲಿ ಸಮಾಜದವರೆ ಆಗಿರಬೇಕು ಇವರಿಗಾಗಿಯೇ ಮೀನು ಮಾರುಕಟ್ಟೆ ಸ್ಥಾಪಿಸಬೇಕು ಹಾಗೂ ಮೀನುಗಾರಿಕೆ ಕಚೇರಿ ಕುಷ್ಟರೋಗಿಗಳ ಬಡಾವಣೆಯಲ್ಲಿದೆ ಅದಕ್ಕೆ ಡಿ.ಸಿ.ಯಿಂದ ಅನುಮತಿ ಪಡೆದು ಪ್ರಾರಂಭಗೊಳಿಸಬೇಕೆಂದರು.
ಸಂವಾದ ಕೇಳಿದ ನಂತರ ಅಧ್ಯಕ್ಷತೆ ಮಾತನಾಡಿದ ಮಾಂಕಳ್ ಎಸ್ ವೈದ್ಯ ಅವರು ಶಿಕ್ಷಣದಲ್ಲಿ ಯಾವುದೇ ಕೋರತೆಯಿಲ್ಲ ಐ.ಎ.ಎಸ್., ಐ.ಪಿ.ಎಸ್, ಮತ್ತು ಕೆ.ಎ.ಎಸ್ ಇವು ಮೂರರಲ್ಲಿ ಭಾಗವಹಿಸಲ್ಲ. ಇದನ್ನು ಬಿಟ್ಟು ಶಿಕ್ಷಣದಲ್ಲಿ ತೊಂದರೆ ಇಲ್ಲ ಇವರಿಗೆ ವಿಶೇಷವಾಗಿ ಸ್ಕಾಲರ್‍ಶೀಪ್ ಮತ್ತು ಸಾಮಾನ್ಯ ಸ್ಕಾಲರಶೀಪ್ ಕೂಡಾ ಬರುತ್ತದೆ ಹಾಸ್ಟೇಲ್ ಸೌಲಭ್ಯ ಕೂಡಾ ಇದೆ. 1 ಲಕ್ಷದ 20 ಸಾವಿರ ವಸತಿ ಇಲಾಖೆಯಿಂದ ಹಣ ಕೂಡ ಬರುತ್ತದೆ. ಎಂದರು.
ಎಲ್ಲ ಸೌಲಭ್ಯ ಇದ್ದರೂ ನೀಮ್ಮ ಬೇಡಿಕೆಗಳಿಗೆ ನಾನು ಸ್ಪಂದಿಸುತ್ತೇನೆ ಇದು ಕಂಪ್ಯೂಟರ ಯುಗ ಇಲ್ಲಿ ನಿಮಗೆ ಸೌಲಭ್ಯಗಳಿಂದ ವಂಚಿತ ಮಾಡಲು ಯಾರಿಂದ ಕೂಡಾ ಸಾಧ್ಯವಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾ¯ ನಾರಾಯಣರಾವ. ಬಳ್ಳಾರಿಯ ಮೀನುಗಾರಿಕೆ ಜಂಟಿ ನಿರ್ದೇಶಕರು ಷಡಾಕ್ಷರಿ, ಆಪ್ತ ಕಾರ್ಯದರ್ಶಿ ರವಿಂದ್ರ ಪಿ.ಸಿ, ಕಲಬುರಗಿ ಮೀನುಗಾರಿಕೆ ಉಪ ನಿರ್ದೇಶಕರು ಎಸ್.ಆರ್. ನಾಗರಾಜ, ಯಾದಗಿರಿ ಮೀನುಗಾರಿಕೆಯ ಸಹಾಯಕ ನಿರ್ದೇಶಕರು ಶರಣಬಸವ, ಸುರಪೂರ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪದ್ಮಾವತಿ, ಚಿಂಚೋಳಿ(ಪ್ರ) ಮೀನುಗಾರಿಕೆ ಸಹಾಯಕ ನಿರ್ದೇಶಕರು ಗಣೇಶ, ಕಲಬುರಗಿ(ಪ್ರ) ಮೀನುಗಾರಿಕೆ ಸಹಾಯಕ ನಿರ್ದೇಶಕರು ಉಮೇಶ ಭೋವಿ ಶಶಿಕಲಾ ಜೆಡೆ ಕಾರ್ಯಕ್ರಮ ಉಪಸ್ಥಿತರಿದರು.
ಕಾಳಗಿ ತಾಲೂಕಿನ ಕುಲಗಾರ್ತಿ ಗ್ರಾಮಕ್ಕೆ ಭೇಟಿ:- ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ್ ಎಸ್ ವೈದ್ಯ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿ ಫಲಾನುಗಳು ಕೈಗೊಂಡಿರುವ ವಿವಿಧ ಮೀನುಗಾರಿಕೆ ಚಟುವಟಿಕೆಗಳನ್ನು ಸಚಿವರು ಪರಿಶೀಲಿಸಿದರು. ಬಳಿಕ ಮಾತನಾಡಿ, ಮೀನು ಮರಿ ಸಾಕಾಣಿಕೆ ಕೇಂದ್ರಕ್ಕೆ , ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಮೀನು ಕೃಷಿ ಕೋಳ ನಿರ್ಮಿಸಿ ಮೀನುಕೃಷಿ ಕೈಗೊಂಡಲ್ಲಿ 1 ಹೆಕ್ಟರ್ ಜನ ವಿಸ್ತೀರ್ಣಕ್ಕೆ ಘಟಕ ವೆಚ್ಚ ರೂ. 11.00 ಲಕ್ಷಗಳು ಇದ್ದು ಇತರೆ 60 ರಷ್ಟು ಸಹಾಯಧನವಾಗಿ ಕೊಳ ನಿರ್ಮಾಣ ಹೂಡಿಕೆ ವೆಚ್ಚಗಳನ್ನು ನೀಡಿಲಾಗುವುದು. ಅವರು ಹೇಳಿದರು.
ಈ ಯೋಜನೆಯಲ್ಲಿ ಕುಲಗುರ್ತಿ ಗ್ರಾಮದಲ್ಲಿ 10 ಹೆಕ್ಟೆರ್ ಮೀನು ಕೃಷಿ ನಿರ್ಮಾಣವಾಗಿದ್ದು, ಕೊಳಗಳಲ್ಲಿ ತ್ವರಿತವಾಗಿ ಬೆಳೆಯುವ ತಳಿಗಳು ಕಟ್ಲಾ, ರೊಹು ಮೈಗಾಲ್ ಸಾಮಾನ್ಯಗೆÀಂಡೆ ವಿವಿಧ ಮೀನು ಮರಿ ಬಿತ್ತನ ಮಾಡಿ ಲಾಭಗಳಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಬಳ್ಳಾರಿಯ ಮೀನುಗಾರಿಕೆ ಜಂಟಿ ನಿರ್ದೇಶಕರು ಷಡಾಕ್ಷರಿ, ಆಪ್ತ ಕಾರ್ಯದರ್ಶಿ ರವಿಂದ್ರ ಪಿ.ಸಿ, ಕಲಬುರಗಿ ಮೀನುಗಾರಿಕೆ ಉಪ ನಿರ್ದೇಶಕರು ಎಸ್.ಆರ್. ನಾಗರಾಜ, ಯಾದಗಿರಿ ಮೀನುಗಾರಿಕೆಯ ಸಹಾಯಕ ನಿರ್ದೇಶಕರು ಶರಣಬಸವ, ಸುರಪೂರ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪದ್ಮಾವತಿ, ಚಿಂಚೋಳಿ(ಪ್ರ) ಮೀನುಗಾರಿಕೆ ಸಹಾಯಕ ನಿರ್ದೇಶಕರು ಗಣೇಶ, ಕಲಬುರಗಿ(ಪ್ರ) ಮೀನುಗಾರಿಕೆ ಸಹಾಯಕ ನಿರ್ದೇಶಕರು ಉಮೇಶ ಭೋವಿ ಹೆಬ್ಬಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಪ್ರಕಾಶ ಟಿ. ಕಮ್ಮಕನೂರ ಸೇರಿದಂತೆ ಫಲಾನುಭವಿಗಳು ಇದ್ದರು.