ಸ್ವಚ್ಫತಾ ಹೀ ಸೇವಾ ಕಾರ್ಯಕ್ರಮ ಆಕ್ಟೋಬರ್ 2 ರವರೆಗೆ
ಕಲಬುರಗಿ:ಸೆ.18: ಸ್ವಚ್ಛ ಭಾರತ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ಪ್ರತಿ ವರ್ಷದಂತೆ ಸ್ವಚ್ಛತಾ ಹೀ ಸೇವಾ (14-ಸೆಪ್ಟೆಂಬರ್-2024 ರಿಂದ 02-ಅಕ್ಟೋಬರ್-2024) ರವರೆಗೆ ವಿಶೇಷ ಜನಾಂದೋಲನ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ (ಹೊಸ) ಸಭಾಂಗಣದಲ್ಲಿ ಬೆಂಗಳೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿರ್ದೇಶಕ ನಾಗೇಂದ್ರ ಪ್ರಸಾದ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅದೇ ರೀತಿಯಾಗಿ ಬೆಂಗಳೂರು ಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಮುಖ್ಯ ಅಭಿಯಂತರರು, ಎಜಾಜ್ ಹುಸೇನ್, ಈ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದು, ಪ್ರತಿಜ್ಞಾ ವಿಧಿಯನ್ನು ಭೋದನೆ ಮಾಡಿದರು.
ಸ್ವಚ್ಛತಾ ಹೀ ಸೇವಾ-2024 ಕಾರ್ಯಕ್ರಮದಲ್ಲಿ 15 ದಿನಗಳೊವರೆಗೆ ಹಮ್ಮಿಕೊಂಡಿರುವ ವಿಶೇಷ ಚಟುವಟಿಕೆಗಳ ಕುರಿತು, ನಿರ್ದೇಶಕ ನಾಗೇಂದ್ರ ಪ್ರಸಾದ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಪರ ಮುಖ್ಯ ಕಾರ್ಯದರ್ಶಿಗಳು, ಅಂಜುಮ್ ಪರ್ವೇಜ್ “ತಾಯಿಗೊಂದು ಮರ” ಚಟುವಟಿಕೆಯಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಲಬುರಗಿ ಕಛೇರಿ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಾಕ್ಷಿಕ ವಿಶೇಷ ಜನಾಂದೋಲನ ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ನಿತ್ಯ ಹಮ್ಮಿಕೊಂಡಿರುವ ಚಟುವಟಿಕೆಗಳನು ಸಾರವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಲ್ಲದೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಚರುಪಡಿಸಬೇಕು ಅಲ್ಲದೆ ಈ ವಿಶೇಷ ಸ್ವಚ್ಛತಾ ಹೀ ಸೇವಾ-2024 ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದರು.
ಮುಖ್ಯ, ಯೋಜನಾಧಿಕಾರಿ ಎಸ್.ಎಸ್.ಹಿರೇಮಠ,ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಜಗದೇವಪ್ಪ, ಡಿಆರ್‍ಡಿಎ ಹಾಗೂ ಸ್ವಚ್ಛ ಭಾರತ ಮಿಷನ್ (ಗ್ರಾ) .ಕಾರ್ಯನಿರ್ವಾಹಕ ಅಭಿಯಂತರರು,ಧನರಾಜ್ , ಸ್ವಚ್ಛ ಭಾರತ್ ಮಿಷನ್ (ಗ್ರಾ) ಮುಖ್ಯ ಲೆಕ್ಕಾಧಿಕಾರಿಗಳು, ವಿಕಾಸ ಸಜ್ಜನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಕಲಬುರಗಿ ಎಲ್ಲಾ ಜಿಲ್ಲಾ ಸಮಾಲೋಚಕರು ಜಿಲ್ಲಾ ಪಂಚಾಯತ ಕಲಬುರಗಿರವರು ಎಲ್ಲಾ ಜಿಲ್ಲಾ ಪಂಚಾಯತ ಸಿಬ್ಬಂದಿಯವರು, ಜೆಜೆಎಮ್ ಜಿಲ್ಲಾ ಸಮಾಲೋಚಕರು, ಮತ್ತು ಸಿಬ್ಬಂದಿಯವರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಲ್ಲಾ ಸಿಬ್ಬಂದಿಯವರು, (ISಖಂ) ಮತ್ತು ಸಾಹಸ್ ಸಂಸ್ಥೆಯ ಪ್ರತಿನಿಧಿಗಳು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.