ಬಾಂಡ್ ಹಗರಣ ತನಿಖೆಗೆ ಸಿಪಿಐಎಂ ಒತ್ತಾಯ
ರಾಯಚೂರು.ಮಾ.೨೬- ೨೦೧೮ ರಿಂದ ಆಡಳಿತಾರೂಢ ಬಿಜೆಪಿಯು ಸುಮಾರು ೮,೨೫೨ ಕೋಟಿರೂಗಳ ಚುನಾವಣಾ ಬಾಂಡ್ ಗಳನ್ನು ಪಡೆದಿದ್ದು ಮೇಲ್ನೋಟಕ್ಕೆ ಇದೊಂದು ಅಧಿಕಾರ ದುರುಪಯೋಗದ ದುಷ್ಕೃತ್ಯದಂತೆ ಕಂಡು ಬರುತ್ತಿದ್ದು ಇದರ ಒಟ್ಟು ಪ್ರಕರಣವನ್ನು ಸುಪ್ರಿಂ ಕೋರ್ಟ ಸುಪರ್ಧಿಯಲ್ಲಿ ಸಮಗ್ರ ತನಿಖೆ ನಡೆಸಿ, ಅಗತ್ಯ ಕಾನೂನಿನ ಕ್ರಮ ವಹಿಸುವಂತೆ ರಾಯಚೂರು ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ, ತಾನು ತಿನ್ನುವುದಿಲ್ಲ ಮತ್ತು ತಿನ್ನಲು ಬಿಡುವುದಿಲ್ಲ. ಮಾತ್ರವಲ್ಲಾ ಕಪ್ಪು ಹಣ ಬಯಲಿಗೆಳೆಯುತ್ತೇನೆ ಎಂದು ನೀಡಿದ ವಾಗ್ದಾನಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿರುವುದನ್ನು ಈ ಹಗರಣ ಸಾಬೀತು ಪಡಿಸುತ್ತದೆ.
ಈ ಚುನಾವಣಾ ಬಾಂಡ್ ಪ್ರಕರಣಗಳು ಈಗ ಒಂದೊಂದಾಗಿ ಮಾಧ್ಯಮಗಳಲ್ಲಿ ಬಯಲಾಗುತ್ತಿವೆ. ಇವು ಸರಕಾರದ ಅಧಿಕಾರ ದುರುಪಯೋಗ, ಭ್ರಷ್ಠಾಚಾರ, ಸ್ಯಯತ್ತ ಸಂಸ್ಥೆಗಳ ದುರ್ಬಳಕೆ. ಬ್ಲಾಕ್ ಮೇಲ್ ಅಂಶಗಳನ್ನು ಅವು ಎತ್ತಿ ತೋರಿಸುತ್ತಿವೆ.
ಬಿಜೆಪಿ ಗೆ ಚುನಾವಣಾ ಬಾಂಡ್ ನೀಡಿದ ಔಷಧಿ ಹಾಗೂ ಲಾಟರಿ ಮತ್ತಿತರೆ ಕಂಪನಿಗಳು, ಒಕ್ಕೂಟ ಸರಕಾರದ ಈ.ಡಿ, ಐ.ಟಿ. ಮುಂತಾದ ಸಂಸ್ಥೆಗಳಿಂದ ದಾಳಿಗೊಳಗಾಗಿರುವುದು. ಅದೇ ರೀತಿ, ಹಲವು ಕಂಪನಿಗಳು ಚುನಾವಣಾ ಬಾಂಡ್ ನೀಡಿ ಲಾಭದಾಯಕ ಗುತ್ತಿಗೆಗಳನ್ನು ಪಡೆದಿರುವುದು ಕಂಡು ಬಂದಿದೆ.
ನರೇಂದ್ರ ಮೋದಿಯವರ ಸರಕಾರ ಭ್ರಷ್ಠಾಚಾರವನ್ನು ಈ ಮೂಲಕ ಕಾಯ್ದೆ ಬದ್ದ ಗೊಳಿಸಿರುವುದನ್ನು ಮತ್ತು ಗೌಪ್ಯವಾಗಿರಿಸಲು ಕ್ರಮ ವಹಿಸಿರುವುದನ್ನು ಬಯಲುಗೊಳಿಸುತ್ತದೆ. ಇದನ್ನು ಸುಪ್ರಿಂ ಕೋರ್ಟ ಸುಪರ್ಧಿಯಲ್ಲಿ ವಿವಿಧ ಆಯಾಮಗಳ ಮೂಲಕ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಿನ ಕ್ರಮವಹಿಸುವುದೊಂದೆ ಪರಿಹಾರವಾಗಿದೆಯೆಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವಿರೇಶ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.