ಹಂಪಿಯ ಹೋಳಿಯಲ್ಲಿ ಮಿಂದೆದ್ದ ದೇಶ ವಿದೇಶಿಗರು
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ26: ಐತಿಹಾಸಿ ಹಂಪಿಯಲ್ಲಿ ಹೋಳಿ ಸಂಭ್ರಮ ಮುಗಿಲು ಮುಟ್ಟಿದ್ದು, ಬಣ್ಣದ ಹೊಳೆಯಲ್ಲಿ ದೇಶ ವಿದೇಶಿಗರು ಮುಳುಗಿ ಹೋಗಿದ್ದರು. 
ಹೋಳಿ ಹುಣ್ಣಿಮೆಯ ಸಂಭ್ರಮ ಹಂಪಿಯಲ್ಲಿ ವಿಶೇಷವಾಗಿ ಆಚರಣೆ ಮಾಡುವುದರಿಂದ, ಅಲ್ಲದೆ ಕಾಮದಹನ ಹಂಪಿಯಲ್ಲಿಯೇ ಎಂಬ ಪ್ರತೀತಿಯ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಹೋಳಿ ಸಂಭ್ರಮ ವಿಶೇಷವಾಗಿಯೆ ನಡೆಯುತ್ತದೆ.
ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ವಿದೇಶಿ ಪ್ರವಾಸಿಗರು ಹೆಚ್ಚು ಅದ್ದೂರಿಯಾಗಿ ಸಂಭ್ರಮಸುವ ಹಬ್ಬ ಹೋಳಿಯಲ್ಲಿ ನಿನ್ನೆ ರಾತ್ರಿ ಕಾಮದಹನದ ನಂತರ ಬಣ್ಣಿದ ಹಬ್ಬವನ್ನು ಆರಂಭಿಸಲಾಯಿತು. ರಾತ್ರಿಯಲ್ಲಾ ಕುಣಿದು ಕಪ್ಪಳಸಿ ಚಿತ್ರಾಕರ್ಷಕ ಬಣ್ಣದ ಹಬ್ಬವನ್ನು ಸಂಭ್ರಮಿಸುವ ಸ್ಥಳೀಯರಿಗೆ ವಿದೇಶಿಗರು ಸಹ ಸಾಥ ನೀಡಿದ್ದರು, ಗುಂಪು ಗಂಪಾಗಿ ವಿವಿಧ ಹಲಗೆ ವಾದ್ಯಗಳಿಗೆ ತಕ್ಕಂತೆ ಹೆಚ್ಚೆ ಹಾಕುವ ಮೂಲಕ ಹೊಳಿ ಸಂಭ್ರಮವನ್ನು ಸವಿದರು.