ಮತದಾನ ಮಾಡಿ ಪ್ರಜಾಪ್ರಭುತ್ವ ಗೆಲ್ಲಿಸಿ-ಮಾನಪ್ಪ ಕಟ್ಟಿಮನಿ
ರಾಯಚೂರು,ಮಾ.೨೬- ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾ?ವಾಗಿದೆ. ಇಲ್ಲಿ ಎಲ್ಲರಿಗೂ ಮತದಾನದ ಹಕ್ಕಿದೆ. ದೇಶದ ಭವಿಷ್ಯಕ್ಕಾಗಿ ನಿಮ್ಮದೊಂದು ಮತ ಅತ್ಯಅಮೂಲ್ಯವಾದ್ದು, ದೇಶದ ಸುಭದ್ರ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ತಪ್ಪದೇ ಮತದಾನ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ ಎಂದು ರಾಯಚೂರು ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು ನರೇಗಾ ಕೂಲಿಕಾರರಿಗೆ ತಿಳಿಸಿದರು.
ಮಾ.೨೬ರ(ಮಂಗಳವಾರ) ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ಕೂಲಿಕಾರರಿಗೆ ಭಾರತ ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಅಂಗವಾಗಿ ಮತದಾರರಿಗೆ ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಉತ್ತಮ ನಾಳೆಗಳು ಬೇಕಾದರೆ ಮತದಾನ ಮಾಡುವ ಮೂಲಕ ಎಲ್ಲ ಅರ್ಹ ನಾಗರಿಕರು ಮತದಾನದ ಹಕ್ಕು ಚಲಾಯಿಸಬೇಕು. ಮತದಾನ ದೇಶದ ಉತ್ತಮ ಭವಿ?ಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಆ ಬುನಾದಿಯನ್ನು ಸದೃಢಗೊಳಿಸಿ ಎಂದರು. ೧೮ ವ? ಮೇಲಪಟ್ಟ ಪ್ರತಿಯೊಬ್ಬ ಪ್ರಜೆಯು ಕಡ್ಡಾಯವಾಗಿ ಮತದಾನ ಮಾಡಬೇಕು. ವಿಶೇ? ಚೇತನರು ಹಿರಿಯ ನಾಗರಿಕರು ಮತದಾನ ಮಾಡುವಂತೆ ತಿಳಿಸಿ ಎಲ್ಲಾ ಕೂಲಿಕಾರರಿಗೆ ಮತದಾರರ ಪ್ರತಿಜ್ಞಾವಿಧಿಯನ್ನು ಬೋಧನೆ ಮಾಡಿಸಲಾಯಿತು.
ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನದಡಿ ಏ.೧ ರಿಂದ ಮೇ ಅಂತ್ಯದವರೆಗೆ ನರೇಗಾ ಯೋಜನೆಯಡಿ ಮಹಿಳೆಯರು, ವಿಶೇ? ಚೇತನರು, ಲಿಂಗತ್ವ ಅಲ್ಪ ಸಂಖ್ಯಾತರು, ದುರ್ಬಲವರ್ಗದ ಕುಟುಂಬದವರು ಹಾಗೂ ಎಲ್ಲಾ ನೊಂದಾಯಿತ ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸಲಾಗುವುದು. ದಯವಿಟ್ಟು ಯಾರು ವಲಸೆ ಹೋಗಬಾರದು. ನರೇಗಾ ಯೋಜನೆ ಮುಖಾಂತರ ಸ್ಥಳಿಯವಾಗಿ ಮುಂಗಾರು ಆರಂಭಕ್ಕೆ ನೇರವಾಗುವುದು ಎಂದು ತಿಳಿಸಿದರು..(ನಮೂನೆ ೦೬ ರಲ್ಲಿ ಕೂಲಿಕಾರರಿಂದ ಬೇಡಿಕೆ ಪಡೆಯಲಾಯಿತು)
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಹನುಮಂತ, ಪಿಡಿಒ ದತ್ತಕುಮಾರ, ಐಇಸಿ ಸಂಯೋಜಕ ಧನರಾಜ, ಬಿ.ಸಿ ಮಲ್ಲಿಕಾರ್ಜುನ, ಡಿಇಒ ಗೋವಿಂದ, ಜಿ.ಕೆ.ಎಮ್ ಶ್ರೀದೇವಿ ಹಾಗೂ ಗ್ರಾ.ಪಂ ಸಿಬ್ಬಂದಿ ಮತ್ತು ಕೂಲಿಕಾರರ ಇನ್ನಿತರರು ಉಪಸ್ಥಿತರಿದ್ದರು.