ಏಮ್ಸ್ ಹೋರಾಟ ೬೮೪ ನೇ ದಿನಕ್ಕೆ
ರಾಯಚೂರು.ಮಾ.೨೬- ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಇಂದಿಗೆ ೬೮೪ ನೇ ದಿನಕ್ಕೆ ಕಾಲಿಟ್ಟಿದೆ.
೨೨ ತಿಂಗಳ ಮೇಲ್ಪಟ್ಟಿಂದ ನಡೆಯುತ್ತಿರುವ ಹೋರಾಟ, ನಂಜುಂಡಪ್ಪ ವರದಿಯಲ್ಲಿ ಐಐಟಿ ಶಿಫಾರಸ್ಸು ಮಾಡಿದ್ದನ್ನು ನಿರ್ಲಕ್ಷಿಸಿ ಐಐಟಿಯನ್ನು ಧಾರವಾಡದ ಕುತಂತ್ರ ರಾಜಕಾರಣಿಗಳು ದೋಚಿಕೊಂಡರು. ವಂಚಿತಗೊಂಡ ರಾಯಚೂರಿನಲ್ಲಿಯೇ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಲೇಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿ ಇಂದು ನಡೆದ ಧರಣಿ ಸತ್ಯಾಗ್ರಹದಲ್ಲಿ ಡಾ. ಬಸವರಾಜ್ ಕಳಸ, ಕಾಮರಾಜ ಪಾಟೀಲ, ಡಾ.ಎಸ್.ಎಸ್.ಪಾಟೀಲ್, ರಮೇಶ್ ರಾವ್ ಕಲೂರ್ಕರ್, ಜಾನ್ ವೆಸ್ಲಿ, ಜಗದೀಶ್ ಪುರತಿಲ್ಲಿ, ತಿಮ್ಮಾರೆಡ್ಡಿ, ವೀರಭದ್ರಯ್ಯ ಸ್ವಾಮಿ, ಮಹೀಂದ್ರ ಸಿಂಘ್, ಸುಲೋಚನಾ ಸಂಘ, ಅಶ್ವಥ್ ನಾರಾಯಣ, ಸಂತೋಷ್ ಜೈನ್, ವೆಂಕಟರೆಡ್ಡಿ ದಿನ್ನಿ, ಸಾದಿಕ್ ಖಾನ್, ವಿಶ್ವ, ಬೇಟ್ಟಪ್ಪ ಹೋಕ್ರಾಣಿ, ದೇವೇಂದ್ರಪ್ಪ ಧನ್ವಂತರಿ ಮುಂತಾದವರು ಭಾಗವಹಿಸಿದ್ದರು.