ಎ.ವಸಂತಕುಮಾರಗೆ ಅದ್ದೂರಿ ಸ್ವಾಗತ
(ಸಂಜೆವಾಣಿ ವಾರ್ತೆ)
ರಾಯಚೂರು,ಮಾ.೨೬- ಕೆಪಿಸಿಸಿ ಕಾರ್ಯಾಧ್ಯಾಕ್ಷರಾಗಿ ಆಯ್ಕೆಯಾಗಿರುವ ಎ.ವಸಂತ ಕುಮಾರ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಲಾಯಿತು.
ಕೆಪಿಸಿಸಿ ಕಾರ್ಯಾಧ್ಯಾಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಎ.ವಸಂತ ಕುಮಾರ ಅವರನ್ನು ವಸಂತ ಕುಮಾರ ಅಭಿಮಾನಿಗಳ ಬಳಗದಿಂದ ಅದ್ಧೂರಿಯಾಗಿ ಸ್ವಾಗತಿಸಿದರು. ನಗರದಲ್ಲಿ ಬೈಕ್ ರಯಾಲಿ ಮಾಡಿದರು.
ನಗರದ ಶ್ರೀ ಕಂಚು ಮಾರೆಮ್ಮ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ೧೦೧ ತೆಂಗಿನಕಾಯಿ ಅರ್ಪಿಸಿದರು.
ಈ ಸಂದರ್ಭದಲ್ಲಿ ವಸಂತ ಕುಮಾರ ಅಭಿಮಾನಿಗಳ ಬಳಗ, ಯುವಕರು ಸೇರಿದಂತೆ ಅನೇಕರು ಇದ್ದರು.