ಆರೋಗ್ಯ ಇಲಾಖೆಯಿಂದ ಮತದಾನ ಜಾಗೃತಿ ಜಾಥ
ಸಂಜೆವಾಣಿ ವಾರ್ತೆ
ಸಿರುಗುಪ್ಪ ಮಾ 26 : ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಬಳ್ಳಾರಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣಾ2024ರ  ಕುರಿತು ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿ ಅಂಗವಾಗಿ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ನಡೆಸಲಾಯಿತು.
ಮತದಾನ ನಮ್ಮ ಹಕ್ಕು, ಯಾವ ಭಯವಿಲ್ಲದೆ-ಮತದಾನ ಮಾಡೋಣ, 18ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನ ಮಾಡಿ ಎನ್ನುವ ಘೋಷಣೆಗಳೊಂದಿಗೆ ಅಧಿಕಾರಿ ಮತ್ತು ಸಿಬ್ಬಂದಿ ಸಮೂಹವು ನಗರದ ಗಾಂಧಿ ವೃತದವರೆಗೆ ಸಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಈರಣ್ಣ ಮಾತನಾಡಿ ಅಂಬೇಡ್ಕರ್ ರವರು ಪ್ರತಿಯೊಬ್ಬರಿಗೆ ಜಾತಿ ಮತಗಳ ಮೇಲು ಕೀಳುಗಳ ಬಡವ ಬಲ್ಲಿದರ ಭೇದವಿಲ್ಲದೆ, ಮತದಾನ ಮಾಡುವ ಹಕ್ಕನ್ನು ಒದಗಿಸಿ ಕೊಟ್ಟಿದ್ದಾರೆ,‌ ಈ
ಅಮೂಲ್ಯವಾದ ಮತದಾನದಿಂದ ಒಳ್ಳೆಯ ನಾಯಕರನ್ನು ಆಯ್ಕೆ ಮಾಡೋಣ ಎಂದು ತಿಳಿಸಿದರು.
ತಾಲೂಕು ಸರ್ಕಾರಿ ನೌಕರರ ಅಧ್ಯಕ್ಷ ಲಿಂಗಾರೆಡ್ಡಿ ಮಾತನಾಡಿ ಯಾವುದೇ ಕಾರಣಕ್ಕೂ ಮತದಾನ ಮಾಡದೆ ಇರಕೂಡದು, ಪ್ರತಿಯೊಬ್ಬರು ಮತ ಚಲಾಯಿಸುವಂತೆ ಜಾಗೃತಿ ಮೂಡಿಸೋಣ ಜನರ ಮನವೋಲಿಸೋಣ ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಡಾ. ಲಿಂಗಪ್ಪ, ಡಾ. ಆನಂದ ದಿವಾಟರ್ ಮತ್ತು ಬಿಪಿಎಂ, ಬಿ ಎಚ್ ಈ ಓ ಎಸ್ ಟಿ ಎಲ್ ಎಸ್, ಫಾರ್ಮಸಿ ಆಫೀಸರ್, ಲ್ಯಾಬ್ ಟೆಕ್ನಿಷಿಯನ್ಸ್, ಸ್ಟ್ಯಾಫ್ ನರ್ಸ್ , ಆಶಾ ಮೆಂಟರ್ ಹಾಗೂ ಗ್ರೂಪ್ ಡಿ ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.