ಅಪ್ಪಳ ತಯಾರಿಕೆ ತರಬೇತಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮಾ,26-  ನಗರದ ಶುಭ ಮಸ್ತು ಮಹಿಳಾ ಸಂಘದಿಂದ ಮಹಿಳೆಯರಿಗೆ ಉಚಿತವಾಗಿ ಉರುಳಿ ಅಪ್ಪಳ ಮಾಡುವ ತರಬೇತಿ ನೀಡಲಾಗಿದೆ.
 ಮಹಿಳೆಯರು  ಸ್ವಾಉದ್ಯೋಗ ಕೈಗೊಂಡು ಸ್ವಾವಲಂಬಿಯಾಗಿ ಬದುಕಲು. ಆರ್ಥಿಕ ವಾಗಿ ಸದೃಡವಾಗಲು ತಿಂಡಿ ತಿನಿಸುಗಳನ್ನು ಸಿದ್ದಪಡಿಸಿ ಮಾರುಕಟ್ಟೆ ಮಾಡುವುದು ಅವಶ್ಯವಿದೆಂದು  ಶುಭ ಮಸ್ತು ಮಹಿಳಾ ಸಂಘದ ಅಧ್ಯಕ್ಷಡ ಬಿ. ಸುಮಾ ರೆಡ್ಡಿ ಹೇಳಿದ್ದಾರೆ.
 ತರಬೇತಿದಾರರಾದ ಲತಾ, ಅನ್ನಪೂರ್ಣ, ಶರಣಮ್ಮ, ರತ್ನ ಫತಿಮಾ, ಆಶಾ, ದೀಪ, ಶ್ರೀದೇವಿ ಮೊದಲಾದವರು ಪಾಲ್ಗೊಂಡಿದ್ದರು.