ಎಫ್ ಪಿ ಎ ಐ ಆಸ್ಪತ್ರೆಯಲ್ಲಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.26: ನಗರದ  ಎಫ್ ಪಿ ಎ ಐ ಆಸ್ಪತ್ರೆಯಲ್ಲಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಈ ವಾಟರ್ ಕೂಲರ್ ಅನ್ನು ನಗರದ ಭದ್ರಾ ಆಗ್ರೋ ಸರ್ವೀಸಸ್‌ನ ಅನಿಲ್ ಕುಮಾರ್ ರೆಡ್ಡಿ ದಾನವಾಗಿ ನೀಡಿದ್ದು, ಅವರೇ ಈ ಸೌಲಭ್ಯಕ್ಕೆ ಚಾಲನೆ ನೀಡಿದರು.
ಎಫ್‌.ಪಿ.ಎ ಇಂಡಿಯಾ ಬಳ್ಳಾರಿ ಘಟಕವು 50 ವರ್ಷಗಳ ಸೇವೆಯನ್ನು ಪೂರೈಸಿರುವ ಈ ಸಂದರ್ಭದಲ್ಲಿ ಸಾರ್ವಜನಿಕರಿಗಾಗಿ, ಅದರಲ್ಲೂ ಗ್ರಾಮೀಣ ಪ್ರದೇಶಗಳಿಂದ ಬರುವ ಬಡವರ ಅನುಕೂಲಕ್ಕಾಗಿ ಈ
ತಂಪಾದ ಈ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಸಂಸ್ಥೆಯ ಅಧ್ಯಕ್ಷ ಟಿ ಜಿ ವಿಠ್ಠಲ್, ಉಪಾಧ್ಯಕ್ಷ ಡಾ. ಕಮ್ಮಾ ಚಂದನ, ಎಫ್. ಪಿ.ಎ. ಐ. ನ ಕೇಂದ್ರದ ಉಪಾಧ್ಯಕ್ಷ ಎಸ್. ವಿಜಯಸಿಂಹ, ಆರ್ಥಿಕ ಸಲಹೆಗಾರ ಡಾ. ಭಾಗ್ಯ ಕೆ.ಅರ್, ಸದಸ್ಯ ವಿಷ್ಣು, ಹಿರಿಯ ಪತ್ರಕರ್ತ ಎಂ. ಅಹಿರಾಜ್   ಉಪಸ್ಥಿತರಿದ್ದರು.