ಮಹಿಳೆಯರ ಸಬಲತೆಗೆ ಶರಣರ ಕೊಡುಗೆ
ವಿಜಯಪುರ.ಮಾ೨೬:ರಮಣ ಮಹರ್ಷಿ ಪ್ರಶಸ್ತಿ ಪುರಸ್ಕೃತರಾದ ಸ್ವರ್ಣ ಗೌರಿ ಮಹದೇವ್ ಮಹಿಳೆಯರ ಸಬಲತೆಗೆ ಶರಣರ ಕೊಡುಗೆ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿಯೂ ಸ್ತ್ರೀಯು ಪುರುಷರಿಗೆ ಸರಿಸಾಮನಳು . ಲಿಂಗ ಭೇದವಿಲ್ಲದೆ ಅನೇಕ ಮಹಿಳಾ ಜಗದ್ಗುರುಳಿದ್ದಾರೆ. ಅನುಭವಮಂಟಪದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನವನ್ನು ಕಲ್ಪಿಸಿ ಕೊಟ್ಟಿದ್ದರು ಅಕ್ಕಮಹಾದೇವಿ, ನಾಗಮ್ಮ, ನೀಲಮ್ಮ, ಗಂಗವ್ವ, ಸತ್ಯವ್ವ, ಗೋಗ್ಗವ್ವ, ನಿಂಗವ್ವ ಇನ್ನು ಮುಂತಾದ ೩೫ ಶಿವಶರಣೆಯರು ೧೨ನೇ ಶತಮಾನದ ಧಾರ್ಮಿಕ ಸಾಮಾಜಿಕ ಕ್ರಾಂತಿಯಲ್ಲಿ ಭಾಗವಹಿಸಿ ಅವರು ಬರೆದ ವಚನಗಳು ಇಂದಿಗೂ ಸ್ತ್ರೀ ಸ್ವಾತಂತ್ರ್ಯಕ್ಕೆ ನಾಂದಿಯಾಗಿದೆ ಎಂದು ತಿಳಿಸಿದರು.
ಅವರು ಪಟ್ಟಣದ ೧೪ನೇ ವಾರ್ಡಿನ ತೋಟದ ಮನೆ ಹತ್ತಿರ ಅನಾದಿಕಾಲದಿಂದಲೂ ನೆಲೆಸಿರುವ ಶ್ರೀ ಮಹೇಶ್ವರಮ್ಮ ದೇವಿ ದೇವಾಲಯದಲ್ಲಿ ಶ್ರೀ ಮಹೇಶ್ವರಮ್ಮ ದೇವಿ ಸೇವಾ ಅಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ ಕದರಿ ಹುಣ್ಣಿಮೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸದ್ಗುರು ಶ್ರೀ ಯೋಗಿ ನಾರೇಯಣ ಯತೀಂದ್ರರ ಶ್ರೀಮದ್ ಭಗವದ್ಗೀತಾ ದೇವಿ ಪಾರಾಯಣ, ದಾಸರ ಪದಗಳು ಹಾಗೂ ಶರಣರ ವಚನಗಳ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅಂತರಾಷ್ಟ್ರೀಯ ಮಹಿಳಾ ದಿನ ಮೊದಲ ಬಾರಿಗೆ ಹೊರಹೊಮ್ಮಿದ ಕೂಲಿ ಚಳುವಳಿ ಚಟುವಟಿಕೆ ಉತ್ತರ ಅಮೆರಿಕ ಮತ್ತು ಯುರೋಪ್ ಪ್ರದೇಶಗಳಲ್ಲಿ ನಡೆದಾಗ ೧೯೦೯ರಲ್ಲಿ ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ ಅಂತರಾಷ್ಟ್ರೀಯ ಮಹಿಳೆಯರ ದಿನ ಅಸ್ತಿತ್ವಕ್ಕೆ ಬಂದಿತ್ತು . ೧೯೪೫ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತರಾಷ್ಟ್ರೀಯ ಲಿಂಗ ಸಮಾನತ ತತ್ವ ಅಂಗೀಕಾರವಾಯಿತು. ತದನಂತರ ಮಹಿಳೆಯರ ಹಕ್ಕುಗಳು ಮಸೂದೆಗಳು ಜಾರಿಗೆ ಬಂದಿತ್ತು. ಪ್ರಪ್ರಥಮವಾಗಿ ಭಾರತದಲ್ಲಿ ಮಹಿಳೆಯರಿಗೆ ಚುನಾಯಿತ ಪ್ರತಿನಿಧಿಗಳಿಗೆ ಮತ ನೀಡಲು ಅವಕಾಶ ನೀಡಿತ್ತೆಂದು ತಿಳಿಸಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ ಎನ್ ಕೃಷ್ಣಪ್ಪ ನೆರವೇರಿಸಿ ಮಾತನಾಡುತ್ತಾ ವಿಜಯಪುರ ದೇವಾಲಯಗಳ ನಗರಿ ಎಂದು ಬಣ್ಣಿಸುತ್ತಾ ಪಟ್ಟಣದಲ್ಲಿ ಪ್ರತಿಯೊಂದು ಮಾಸದಲ್ಲೂ ಆಧ್ಯಾತ್ಮಿಕ ಧಾರ್ಮಿಕ ಚಿಂತನೆ ಕನ್ನಡ ಸಾಹಿತ್ಯ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯವಾದದ್ದು ಎಂದರು.
ಸಂಸತ್ತಿನಲ್ಲಿ ಮಹಿಳೆಯರಿಗೆ ೩೩% ಉನ್ನತ ಸ್ಥಾನವಾದ ಮಹಿಳಾ ರಾಷ್ಟ್ರಪತಿಗಳು ಸಮಾಜ ಸೇವಕಿಯಾದ ಸುಧಾ ನಾರಾಯಣ ಮೂರ್ತಿ ರಾಜ್ಯಸಭಾ ನಾಮ ನಿರ್ದೇಶರಾಗಿ ನೇಮಕಗೊಂಡಿದ್ದು, ಅನೇಕ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಸಾಧನೆಯನ್ನು ಸಾಧಿಸಿದ್ದಾರೆ . ಎಲ್ಲಾ ಕ್ಷೇತ್ರದಲ್ಲೂ ೫೦ ಪಸೆಂಟ್ ಮೀಸಲಾತಿಯನ್ನು ಲಿಂಗಭೇದ ಇಲ್ಲದೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಚನ ಬಳಗದ ಭಾನುಮತಿ ಮತ್ತು ಸಂಗಡಿಗರು ಸುಶ್ರಾವ್ಯವಾಗಿ ವಚನಗಳನ್ನು ಹಾಗೂ ದೇವಿ ಸ್ತುತಿ ಪಠಿಸಿದರು. ಮಹಾತ್ಮಂಜನೇಯ ಮತ್ತು ಸಂಗಡಿಗರು ಭಕ್ತಿ ಗೀತೆಗಳನ್ನು ವಾಚನ ಮಾಡಿದರು. ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷರಾದ ಆರ್ ನಾಗರಾಜು ರವರು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಪಟ್ಟಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜೆ.ಎನ್ ಶ್ರೀನಿವಾಸ್, ಜಿಲ್ಲಾ ಕಸಾಪ ಖಜಾಂಚಿ ಮುನಿರಾಜು, ಟ್ರಸ್ಟಿನ ಗೌರವಾಧ್ಯಕ್ಷರಾದ ಆರ್ ಗೋವಿಂದರಾಜು, ವಿ ಕೃಷ್ಣಪ್ಪ, ವಿ ಟಿ ರಾಮರಾಜು, ತೋಪರಾಜು ರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ನಿರ್ವಹಣೆಯನ್ನು. ವಿ.ಎನ್ ವೆಂಕಟೇಶ್ ವಿಎನ್ ಪ್ರಕಾಶ್ ಮತ್ತು ಸಂಗಡಿಗರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.