ಸತತ ಅಭ್ಯಾಸ ಮಾಡಿ ಪರೀಕ್ಷೆ ಎದುರಿಸಿ
ವಿಜಯಪುರ.ಮಾ೨೬: ಪರೀಕ್ಷೆಗಳನ್ನು ಎದುರಿಸುವುದು ಬಹಳಷ್ಟು ಮುಂದಿಗೆ ಕಠಿಣ, ಕೆಲವರಿಗೆ ಭಯ ಮತ್ತೆ ಕೆಲವರಿಗೆ ಏನೋ ಆತಂಕ ಇರುತ್ತದೆ. ಪರೀಕ್ಷೆ ಎದುರಿಸಲು ಸಾಕಷ್ಟು ಯೋಜಿತರಾಗಿ ಸಂಘಟಿತರಾಗಿ ಇರಬೇಕಾಗುತ್ತದೆ . ಓದಿರುವುದನ್ನು ನೆನಪಿನಲ್ಲಿಟ್ಟುಕೊಂಡು ಸಹಪಾಠಿಗಳೊಂದಿಗೆ ಕಲಿಯುವುದು ಮಾಡಿದಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ . ವಿದ್ಯಾರ್ಥಿಗಳು ಜೊತೆಗೂಡಿ ಕೆಲಸ ಮಾಡುವುದರಿಂದ ಕಲಿಯುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು . ಪರಸ್ಪರ ಕಲಿಕೆಯ ಬಗ್ಗೆ ವಿಮರ್ಶೆ ಮಾಡುವುದರೊಂದಿಗೆ ಕಲಿಕೆಯಿಂದ ಉತ್ತಮ ಪ್ರಜೆಯಾಗಿ ಬಾಳಬಹುದೆಂದು ಸೀನಿಯರ್ ಅಧ್ಯಕ್ಷರಾದ ಕೆ ವೆಂಕಟೇಶ್ ತಿಳಿಸಿದರು.
ವಿಜಯಪುರ ಪಟ್ಟಣದ ಎಲ್ಲಮ್ಮ ಗುಡಿ ಬೀದಿಯಲ್ಲಿರುವ ಶ್ರೀ ವಿವೇಕಾನಂದ ಕಲಿಕಾ ಸೆಂಟರ್ ನಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಆಶ್ರಯದಲ್ಲಿ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂಬ ಕಾರ್ಯಗಾರದಲ್ಲಿ ಅವರು ಮಾತನಾಡುತ್ತಿದ್ದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಡಾ.ಎಂ ಶಿವಕುಮಾರ ಮಾತನಾಡುತ್ತಾ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮುಂದೆ ಬರೆಬೇಕಾದರೆ ಚೆನ್ನಾಗಿ ವ್ಯಾಸಂಗ ಮಾಡಬೇಕು ಎಂದು ತಿಳಿಯಪಡಿಸುತ್ತಾ ಮಕ್ಕಳೇ ಒಂದು ವಿಷಯವನ್ನು ಸುದೀರ್ಘ ಕಾಲ ಓದಿದರೆ ಏಕಾಗ್ರತೆಗೆ ತೊಡಕಾಗುತ್ತದೆ. ಕಷ್ಟವಿರುವ ಪಠ್ಯ ಪುಸ್ತಕದ ವಿಷಯವನ್ನು ಮೊದಲು ಓದಬೇಕು . ಶಿಕ್ಷಕರು ಮಾಡಿದ ಬೋಧನೆಯನ್ನು ಏಕಾಗ್ರತೆಯಿಂದ ಆಲಿಸಬೇಕು . ನಾವು ಓದಿದ ವಿಷಯವು ಒಂದು ದಿನದ ಒಳಗಾಗಿ ಮರೆತು ಹೋಗುತ್ತದೆ . ಆದರೆ ಓದಿ ಅರ್ಥೈಸಿಕೊಳ್ಳುವುದರೊಂದಿಗೆ. ಪರೀಕ್ಷೆ ಎನ್ನುವುದನ್ನು ಹಬ್ಬದಂತೆ ಸ್ವೀಕರಿಸಬೇಕು ಪರೀಕ್ಷಾ ಕಾಲದಲ್ಲಿ ಖುಷಿಯಿಂದ ಇರಬೇಕು . ತಮ್ಮೆಲ್ಲರಿಗೂ ಪರೀಕ್ಷೆಗೆ ಸುಲಭವಾಗಿ ಶುಭವಾಗಲಿ ಎಂದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಯೋಜಕರಾದ ಎನ್ ಜಯರಾಮ್, ನಿಕಟ ಪೂರ್ವ ಅಧ್ಯಕ್ಷರಾದ ವಿ ವೆಂಕಟೇಶ್, ಮಾರ್ಕೆಟ್ ವೆಂಕಟೇಶ್, ವಿ ಆನಂದ್, ಜೆ.ಆರ್ ಮುನಿವೀರಣ್ಣ ಮತ್ತು ವಿದ್ಯಾರ್ಥಿ/ನಿಯರು ಉಪಸ್ಥಿತರಿದ್ದರು.