ಭೂ ಸ್ವಾಧೀನ ಪ್ರಕ್ರಿಯೆಗೆ ರೈತರ ವಿರೋಧ
ಆನೇಕಲ್. ಮಾ. ೨೬- ಹಂದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಸರ್ಕಾರದ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಹೊರಡಿಸಲಾದ ಭೂ ಸ್ವಾದೀನ ಅಧಿಸೂಚನೆಯನ್ನು ವಿರೋಧಿಸಿ ಹಂದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಮತ್ತು ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಗೆ ಖಡಕ್ ಎಚ್ಚರಿಕೆ ನೀಡಿದರು. ಕೂಡಲೇ ಸರ್ಕಾರ ಭೂ ಸ್ವಾದೀನ ಕೈಬಿಡಬೇಕು ಇಲ್ಲವಾದಲ್ಲಿ ಲೋಕಸಭೆ ಚುನಾವಣೆಯಲ್ಲಿ ನಾವು ಯಾರು ಕೂಡ ಮತವನ್ನು ಚಲಾಯಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಶಶಿಕಲಾ ಪ್ರಶಾಂತ್ ಮತ್ತು ತ್ಯಾವಕನಹಳ್ಳಿ ನಾಗೇಶ್ ರೆಡ್ಡಿ ರವರು ಮಾತನಾಡಿ ಭೂ ಮಾಲೀಕರಾದ ರೈತರನ್ನು ಕೂಲಿ ಕಾರ್ಮಿಕ ರನ್ನಾಗಿ ಮಾಡಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದ್ದು, ನಾವು ಬೇಕಾದರೆ ಪ್ರಾಣ ಬಿಡುತ್ತೇವೆ ಆದರೆ ಭೂಮಿ ಬಿಡುವುದಿಲ್ಲ, ಏಕಾಏಕಿ ಕೃಷಿ ಜಮೀನನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡರೆ ರೈತರು ಎಲ್ಲಿ ಹೋಗುವುದು ಎಂದರು.
ಭೂ ಸ್ವಾಧೀನಕ್ಕೆ ಕೆಐಡಿಬಿಯು ತರಾತುರಿಯಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು ಚುನಾವಣಾ ನೀತಿ ಸಂಹಿತಿ ಘೋಷಣೆಯ ದಿನದ ಬೆಳಗ್ಗೆ ಅಧಿಸೂಚನೆ ಹೊರಡಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಇದರ ಹಿಂದೆ ರಾಜಕಾರಣಿಗಳು ಮತ್ತು ರಿಯಲ್ ಎಸ್ಟೇಟ್ ಮಾಪಿಯಾದವರ ಪಾತ್ರವಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದ್ದು ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ವಿಧಾನಸೌಧವರೆಗೆ ಪಾದಯಾತ್ರೆ ನಡೆಸಿ, ಭೂಸ್ವಾಧೀನ ಪ್ರಕ್ರಿಯೆಯ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ರೈತರೇ ದೇಶದ ಬೆನ್ನಲುಬು ಎಂದು ಬೊಗಳೆ ಬಿಡುವ ರಾಜಕಾರಣಿಗಳು ಮರೆಯಲ್ಲಿ ರೈತರ ಕೃಷಿ ಜಮೀನುಗಳನ್ನು ಕೈಗಾರಿಕೆಗಳಿಗೆ ನೀಡುತಿರುವುದು ವಿಪರ್ಯಾಸ ಸಂಗತಿಯಾಗಿದೆ ರಾಜ್ಯ ಸರ್ಕಾರ ಕೈಗಾರಿಕೆ ಹೆಸರಿನಲ್ಲಿ ಭೂಸ್ವಾದೀನ ಮಾಡಲು ಹೊರಟಿರುವ ಭೂ ಪ್ರದೇಶದಲ್ಲಿ ಅತಿ ಸಣ್ಣ ಪ್ರಮಾಣದ ರೈತರು ಕೃಷಿ ಆವಲಂಬಿಸಿಕೊಂಡು ಜೀವನ ಮಾಡಲಾಗುತ್ತಿದ್ದರೆ. ಕೈಗಾರಿಕೆಗೆಂದು ಗುರುತಿಸಿರುವ ಪ್ರದೇಶವು ನೀರಾವರಿ ಪ್ರದೇಶವಾಗಿದ್ದು ಈ ಅತೀ ಹೆಚ್ಚಾಗಿ ರೇಷ್ಮೆ, ರಾಗಿ, ವಿವಿಧ ಬಗೆಯ ತರಕಾರಿಗಳು ಸೇರಿದಂತೆ ವಿವಿಧ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದೇವೆ, ಕೃಷಿಗೆ ಯೋಗ್ಯವಾದ ಭೂಮಿಯನ್ನು ಕೈಗಾರಿಕೆಗೆ ಬಳಸಲು ಹುನ್ನಾರ ಏಕೆ. ಯಾರ ಜೋಬಿಗೆ ಹಣ ತುಂಬಿಸಲು ಅದಿಕಾರಿಗಳು ಈ ಕೆಲಸ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.