ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಸಂಪತ್ತಿನ ನಾಶ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.26:- ಭಾರತೀಯ ಪರಂಪರೆಯಲ್ಲಿ ಜನರು ನೈಸರ್ಗಿಕ ಸಂಪನ್ಮೂಲವನ್ನು ಉಳಿಸುವ ಉದ್ದೇಶದಿಂದ ನದಿ, ಬೆಟ್ಟ, ಗುಡ್ಡ ಇತ್ಯಾದಿಗಳನ್ನು ಆರಾಧಿಸುತ್ತಿದ್ದರು. ಇತ್ತೀಚೆಗೆ ಕುಂಭಮೇಳ, ಗಣೇಶ ಹಬ್ಬಗಳಲ್ಲಿ ಪೂಜಾ ವಸ್ತುಗಳು ಮತ್ತು ಗಣೇಶ ಮೂರ್ತಿಗಳನ್ನು ನದಿಗಳಲ್ಲಿ ವಿಸರ್ಜಿಸುವ ಮೂಲಕ ನದಿಯ ನೀರನ್ನು ಕಲುಷಿತಗೊಳಿಸಲಾಗುತ್ತಿದೆ ಎಂದು ಪ್ರಾದೇಶಿಕ ನೈಸರ್ಗಿಕ ಇತಿಹಾಸ ವಸ್ತು ಸಂಗ್ರಹಾಲುಂದ ವಿಜ್ಞಾನಿ ಬಿ.ಎಸ್.ಯೋಗೇಂದ್ರ ಆತಂಕ ವ್ಯಕ್ತಪಡಿಸಿದರು.
ಬಾಸುದೇವ ಸೋವಾನಿ ಕಾಲೇಜು, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ?ಂ ವತಿಯಿಂದ ನಡೆದ ವಿಶ್ವ ಜಲ ದಿನ ಕಾಂರ್?ಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ವಾತನಾಡಿದ ಅವರು, ನದಿ?ಂನ್ನು ಪೂಜಿಸುವುದು ತಪ್ಪಲ್ಲ. ಆದರೆ ನದಿಯ ದಡದಲ್ಲಿ ಮಾಡುವ ಪೂಜೆ ನದಿಯ ನೀರನ್ನು ಕಲುಷಿತ ಮಾಡುವ ಮಟ್ಟಕ್ಕೆ ಹೋಗಬಾರದು. ನದಿಯನ್ನು ಒಂದು ಪೂಜಾ ಕೇಂದ್ರವಾಗಿ ನೋಡುವುದಕ್ಕಿಂತ ನೈಸರ್ಗಿಕ ಸಂಪನ್ಮೂಲವಾಗಿ ನೋಡಬೇಕು. ನಾವೆಲ್ಲರು ನೀರನ್ನು ತಮ್ಮ ಉಪಯೋಗಕ್ಕೆ ಬಳಸಿಕೊಂಡು ಮತ್ತೆ ಕಡೆಗಣೀಸುತ್ತೇವೆ. ನಮಗೆ ನೀರನ್ನು ಬಳಸಲು ಹಕ್ಕಿದೆಯೇ ವಿನಃ ಅದನ್ನು ಕಲುಷಿತಗೊಲಿಸುವ, ಅಪವೌಲ್ಯ ಮಾಡುವ ಹಕ್ಕು ಇಲ್ಲ. ಆದ್ದರಿಂದ ಭೂಮಿಯ ಮೇಲಿನ ನೈಸರ್ಗಿಕ ವಸ್ತುಗಳನ್ನು ಬಳಸಲು ನಾವು ಎಷ್ಟು ಹಕ್ಕುದಾರರಾಗಿರುತ್ತೇವೆಯೋ, ಅವುಗಳನ್ನು ಉಳಿಸುವುದರಲ್ಲೂ ಅಷ್ಟೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಕಾರ್ಯದರ್ಶಿ ಪೆÇ್ರ.ವಿ.ಕೆ. ಜೋಶ್ ಮಾತನಾಡಿ, ನೈಸರ್ಗಿಕ ಕಾರಣಗಳಿಂದ ವಾತಾವರಣದಲ್ಲಿ ಆಗುವ ಬದಲಾವಣೆಯಿಂದ ಲಿಂಗ ಅಸಮಾನತೆ ಉಂಟಾಗುತ್ತದೆ. ಕೆಲವು ಸಂದರ್ಭಗಳಲ್ಲಿ ನೆರೆಯಾವಾವಳಿಯಿಂದ ಸಮಸ್ಯ ಎದುರಾದರೆ, ಮತ್ತೊಮ್ಮೆ ಬರ ಪರಿಸ್ಥಿತಿ ಉಂಟಾಗಿ ನೀರಿನ ಅಭಾವವನ್ನು ಎದುರಾಗುತ್ತದೆ. ಈ ಎಲ್ಲಾ ಸಂದರ್ಭಗಳಲ್ಲಿ ಮಹಿಳೆಯರೇ ಹೆಚ್ಚು ತೊಂದರೆಗೆ ಒಳಗಾಗಿತ್ತಾರೆ ಎಂದು ಅವರು ಹೇಳಿದರು.
ಬಾಸುದೇವ ಸೋವಾನಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಮಹದೇವಸ್ವಾಮಿ, ಡಾ.ಭವ್ಯಾ, ಶಾಲಿನಿ ಅವರು ಕಾಂರ್?ಕ್ರಮದಲ್ಲಿ ಉಪಸ್ಥಿತರಿದ್ದರು.